ಬಸ್ ಉರುಳಿ ಬಿದ್ದು 7 ಐಟಿಬಿಪಿ ಯೋಧರು ಹುತಾತ್ಮ, ಹಲವರಿಗೆ ಗಾಯ ; ಬ್ರೇಕ್ ಫೇಲ್ ಆಗಿ ದುರಂತ !

16-08-22 09:54 pm       HK News Desk   ದೇಶ - ವಿದೇಶ

ಜಮ್ಮು ಕಾಶ್ಮೀರದಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸರನ್ನು ಕರೆದೊಯ್ಯುತ್ತಿದ್ದ ಬಸ್ ಪಹಲ್ಗಾಮ್​​ನಲ್ಲಿ ಉರುಳಿ ಬಿದ್ದು ಸಂಭವಿಸಿದ ಅಪಘಾತದಲ್ಲಿ 7 ಮಂದಿ ಯೋಧರು ಸಾವಿಗೀಡಾಗಿದ್ದಾರೆ.

ಅನಂತ್ ನಾಗ್, ಆಗಸ್ಟ್ 16: ಜಮ್ಮು ಕಾಶ್ಮೀರದಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸರನ್ನು ಕರೆದೊಯ್ಯುತ್ತಿದ್ದ ಬಸ್ ಪಹಲ್ಗಾಮ್​​ನಲ್ಲಿ ಉರುಳಿ ಬಿದ್ದು ಸಂಭವಿಸಿದ ಅಪಘಾತದಲ್ಲಿ 7 ಮಂದಿ ಯೋಧರು ಸಾವಿಗೀಡಾಗಿದ್ದಾರೆ.

 ಬಸ್ಸಿನಲ್ಲಿ 30ಕ್ಕಿಂತಲೂ ಹೆಚ್ಚು ಯೋಧರು ಪ್ರಯಾಣಿಸುತ್ತಿದ್ದರು. ಹಲವರಿಗೆ ಗಾಯಗಳಾಗಿದ್ದು, ಗಾಯಗೊಂಡವರನ್ನು ಏರ್ ಲಿಫ್ಟ್ ಮಾಡಿ ಶ್ರೀನಗರದಲ್ಲಿರುನ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ಚಂದನ್ವಾರಿ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ 6 ಯೋಧರು ಹುತಾತ್ಮರಾಗಿದ್ದು, ಹಲವರಿಗೆ ಗಾಯಗಳಾಗಿವೆ. ಗಾಯಗೊಂಡವನ್ನು ಚಿಕಿತ್ಸೆಗಾಗಿ ಶ್ರೀನಗರದ ಸೇನಾ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ ಎಂದು ಜಮ್ಮ ಮತ್ತು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.

At Least 7 ITBP Jawans Dead as Bus Carrying 37 Personnel Falls Into Riverbed  in J&K's Pahalgam

7 ITBP jawans killed after bus falls into river in J&K's Pahalgam - India  News

6 security personnel dead, several injured as bus rolls down gorge in  Kashmir

Pahalgam bus accident: J-K Lt Guv, Union Home Minister condole demise of 6 ITBP  jawans; total 30 injured – ThePrint – ANIFeed

Seven ITBP personnel killed, 32 injured after bus falls into gorge in Jammu  and Kashmir- The New Indian Express

ಬಸ್ಸಿನಲ್ಲಿ 39 ಸಿಬ್ಬಂದಿಗಳಿದ್ದು ಇದರಲ್ಲಿ 37 ಐಟಿಬಿಪಿ ಮತ್ತು ಇಬ್ಬರು ಜಮ್ಮು ಮತ್ತು ಕಾಶ್ಮೀರ ಪೊಲೀಸರಾಗಿದ್ದಾರೆ. ಎಎಎನ್ಐ ಟ್ವೀಟ್ ಮಾಡಿದ ವಿಡಿಯೊದಲ್ಲಿ ಭದ್ರತಾ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿರುವುದು ಕಾಣಿಸುತ್ತದೆ. ಬ್ರೇಕ್ ಫೇಲ್ ಆಗಿ ಬಸ್ ಕೆಳಗೆ ಉರುಳಿ ಬಿದಿದ್ದು ಸಂಪೂರ್ಣ ಹಾನಿಯಾಗಿದೆ. ಅಮರನಾಥ ಯಾತ್ರೆಗೆ ನಿಯೋಜನೆಯಾದ ಯೋಧರಾಗಿದ್ದರವರು. ಹುತಾತ್ಮ ಯೋಧರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

At least seven Indo-Tibetan Border Police (ITBP) personnel lost their lives while nine are critically injured after a bus carrying them fell into a riverbed in Jammu and Kashmir’s Pahalgam on Tuesday after its brakes reportedly failed. The bus was carrying 37 personnel of ITBP, two J&K Police personnel, and two bus staffers.