ಬ್ರೇಕಿಂಗ್ ನ್ಯೂಸ್
16-08-22 10:25 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 16: ಜಮ್ಮು ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ಉಗ್ರರು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಟ್ಟು ದಾಳಿ ಮುಂದುವರಿಸಿರುವುದರಿಂದ ಪಂಡಿತ ಸಮುದಾಯ ದಿಕ್ಕೆಟ್ಟಿದೆ. ಪಂಡಿತರನ್ನು ಪ್ರತಿನಿಧಿಸುವ ಕಾಶ್ಮೀರಿ ಪಂಡಿತ್ ಸಂಘರ್ಷ್ ಸಮಿತಿಯ ನಾಯಕರು, ಕಣಿವೆ ಭಾಗದಲ್ಲಿರುವ ಪಂಡಿತರನ್ನು ಊರು ತೊರೆದು ಬರುವಂತೆ ಕರೆ ನೀಡಿದ್ದಾರೆ.
ಸರಕಾರ ಮತ್ತು ನ್ಯಾಯಾಂಗ ಕಾಶ್ಮೀರಿ ಪಂಡಿತರ ಹಿತ ಕಾಯಲು ಸೋತಿವೆ. ಉಗ್ರರ ದಾಳಿ ನೋಡಿದರೆ, ಎಲ್ಲ ಪಂಡಿತರನ್ನೂ ಕೊಂದು ಹಾಕುವ ಗುರಿ ಇದ್ದಂತೆ ತೋರುತ್ತಿದೆ. ಸ್ಥಳೀಯರೇ ನೆರೆಹೊರೆಯ ಪಂಡಿತ ಸಮುದಾಯದ ಸದಸ್ಯರನ್ನು ಕೊಲ್ಲಲು ಉಗ್ರರಿಗೆ ನೆರವು ನೀಡುತ್ತಿದ್ದಾರೆ. ಇದರಿಂದಾಗಿ ಪಂಡಿತರು ಕಾಶ್ಮೀರ ಕಣಿವೆಯಲ್ಲಿ ಉಳಿಯುವುದು ಕಷ್ಟವಾಗಿದೆ ಎಂದು ಸಮಿತಿ ಮುಖ್ಯಸ್ಥ ಸಂಜಯ್ ಭಿಕ್ಕು ಹೇಳಿದ್ದಾರೆ.

ಕಾಶ್ಮೀರಕ್ಕೆ ಬರುವ ಪ್ರವಾಸಿಗರು ಸೇಫ್ ಇದ್ದಾರೆ. ಅಮರನಾಥ ಯಾತ್ರೆಯ ಸಂದರ್ಭದಲ್ಲೂ ದಾಳಿಗಳು ನಡೆದಿಲ್ಲ. ಆದರೆ ಮುಸ್ಲಿಮರಲ್ಲದ ಅದರಲ್ಲೂ ಪಂಡಿತ ಸಮುದಾಯದ ಸದಸ್ಯರನ್ನು ಗುರಿಯಿಟ್ಟು ಕೊಲ್ಲುತ್ತಿದ್ದಾರೆ. ಯಾವುದೇ ಪಂಡಿತ ಸಮುದಾಯದ ಸದಸ್ಯನಿಗೂ ರಕ್ಷಣೆಯಿಲ್ಲ. ಆಡಳಿತಗಳು ಕಾಶ್ಮೀರಿ ಪಂಡಿತರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿವೆ. ಒಂದೋ ತಮ್ಮ ಊರು ತೊರೆದು ಹೋಗಬೇಕು, ಇಲ್ಲವೇ ಅಲ್ಲಿಯೇ ಉಳಿದು ಉಗ್ರರಿಂದ ಸಾಯಬೇಕು ಎಂಬ ಸ್ಥಿತಿಯಾಗಿದೆ ಎಂದು ಸಂಜಯ್ ಭಿಕ್ಕು ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ ಉಗ್ರರು ಪಂಡಿತ ಸಮುದಾಯದ ಇಬ್ಬರು ಸೋದರರ ಮೇಲೆ ದಾಳಿ ನಡೆಸಿದ್ದು, ಒಬ್ಬನನ್ನು ಗುರಿಯಿಟ್ಟು ಕೊಂದಿದ್ದಾರೆ. ಸುನಿಲ್ ಕುಮಾರ್ ಮತ್ತು ಪಿಂಟು ಕುಮಾರ್ ಮೇಲೆ ದಾಳಿ ನಡೆಸಲಾಗಿತ್ತು. ಸುನಿಲ್ ಕುಮಾರ್ ಸ್ಥಳದಲ್ಲೇ ಸಾವು ಕಂಡಿದ್ದರು. ಕಳೆದ ಎರಡು ತಿಂಗಳಲ್ಲಿ 25ಕ್ಕೂ ಹೆಚ್ಚು ಪಂಡಿತ ಸಮುದಾಯದ ಮಂದಿಯನ್ನು ಉಗ್ರರು ಗುರಿಯಿಟ್ಟು ಕೊಂದಿದ್ದಾರೆ. ಕಾಶ್ಮೀರದ ವಿಶೇಷ ಪ್ರಾತಿನಿಧ್ಯ ಕಾಯ್ದೆಯನ್ನು ತೆಗೆದು ಹಾಕಿ, ಅಲ್ಲಿನ ಮೂಲ ನಿವಾಸಿಗಳಾದ ಪಂಡಿತರನ್ನು ಮರು ವಸತಿ ಸ್ಥಾಪಿಸಲು ಕೇಂದ್ರ ಸರಕಾರ ಅವಕಾಶ ನೀಡಿದ್ದನ್ನು ವಿರೋಧಿಸಿ ಭಯೋತ್ಪಾದಕರು ನಿರಂತರ ದಾಳಿ ನಡೆಸುತ್ತಿದ್ದಾರೆ. ಸ್ಥಳೀಯ ಮುಸ್ಲಿಮರ ಬೆಂಬಲ ಪಡೆದು ಸರಕಾರಿ ಕೆಲಸದಲ್ಲಿರುವ ಕಾಶ್ಮೀರಿ ಪಂಡಿತರು, ಶಿಕ್ಷಕರನ್ನು ಗುರಿಯಾಗಿಸಿ ಕೊಲ್ಲುತ್ತಿದ್ದಾರೆ. ಉಗ್ರರ ಉಪಟಳದಿಂದಾಗಿ ಪಂಡಿತರು ಭೀತಿಗೊಳಗಾಗಿದ್ದು, ಕಾಶ್ಮೀರ್ ಫೈಲ್ಸ್ ಚಿತ್ರದ ಭಯಾನಕ ಚಿತ್ರಣ ಮರುಕಳಿಸುವಂತಾಗಿದೆ.
Kashmiri Pandit Sangarsh Samiti (KPSS), an organisation that represents the Pandits living in the Valley, on Tuesday asked community members to leave the valley in the wake of increased attacks on them by militants."With another deadly attack on Kashmiri Pandits in Kashmir, the terrorists have made it clear that they are going to kill all the Kashmiri Pandits in Kashmir valley," KPSS chief Sanjay Tickoo said in an official statement.
02-05-26 06:35 pm
HK News Staffer
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
02-05-26 08:26 pm
HK News Staffer
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
02-05-26 08:35 pm
HK News Staffer
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm