ಬ್ರೇಕಿಂಗ್ ನ್ಯೂಸ್
25-08-22 10:01 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 25: ದೆಹಲಿಯಲ್ಲಿ ಆಪ್ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. 40 ಶಾಸಕರಿಗೆ ತಲಾ 20 ಲಕ್ಷದಂತೆ 800 ಕೋಟಿ ರೂಪಾಯಿ ಆಫರ್ ಮಾಡಿದೆ ಎನ್ನುವ ಆರೋಪವನ್ನು ಆಪ್ ನಾಯಕರು ಮಾಡಿದ್ದಾರೆ. ಇದರಿಂದ ಅಲರ್ಟ್ ಆಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ತುರ್ತಾಗಿ ಎಲ್ಲ ಶಾಸಕರನ್ನು ಕರೆದು ಸಭೆ ನಡೆಸಿದ್ದಾರೆ.
ಕೆಲವು ಶಾಸಕರು ನಾಟ್ ರೀಚಬಲ್ ಇದ್ದಾರೆಂದು ಸಭೆಯನ್ನು ಕರೆಯಲಾಗಿತ್ತು. ಆದರೆ, ಕೊನೆಗೆ ಸಭೆಯಲ್ಲಿ ನಾಲ್ಕು ಶಾಸಕರನ್ನು ಹೊರತುಪಡಿಸಿ ಉಳಿದವರೆಲ್ಲ ಭಾಗವಹಿಸಿದ್ದಾರೆ. ದೆಹಲಿ ಹೊರಗಿದ್ದ ಶಾಸಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದಾರೆ. ಸಭೆಯಲ್ಲಿ ಬಿಜೆಪಿ ವಿರುದ್ಧ ನಿರ್ಣಯ ಸ್ವೀಕರಿಸಲಾಗಿದ್ದು, ಸಿಬಿಐ, ಇಡಿಯನ್ನು ಬಳಸ್ಕೊಂಡು ಆಪ್ ಶಾಸಕರನ್ನು ಖರೀದಿಸಲು ಮುಂದಾಗಿರುವುದನ್ನು ಖಂಡಿಸಲಾಗಿದೆ.

ಶಾಸಕ ದಿಲೀಪ್ ಪಾಂಡೆ, ಪಕ್ಷದ 40 ಶಾಸಕರನ್ನು ಬಿಜೆಪಿ ಸೆಳೆಯಲು ನೋಡುತ್ತಿದ್ದು, 20 ಕೋಟಿ ರೂ.ನಂತೆ 800 ಕೋಟಿ ರೂ. ಆಫರ್ ಮಾಡಿದೆ ಎಂದು ಸಭೆಯಲ್ಲಿ ಆರೋಪ ಮಾಡಿದ್ದಾರೆ. ಬೆಳಗ್ಗೆ 11 ಗಂಟೆ ವೇಳೆಗೆ 52 ಶಾಸಕರು ಮುಖ್ಯಮಂತ್ರಿ ಮನೆಯಲ್ಲಿ ಸೇರಿದ್ದು, ಏಳು ಜನ ಶಾಸಕರು ದೆಹಲಿಯಿಂದ ಹೊರಗಿದ್ದಾರೆಂದು ಹೇಳಲಾಯಿತು. ಸತ್ಯೇಂದರ್ ಜೈನ್ ಜೈಲಿನಲ್ಲಿದ್ದರೆ, ಅಮಾನತುಲ್ಲಾ ಖಾನ್ ಸಭೆಗೆ ಬರುತ್ತಿದ್ದಾರೆಂದು ಮಾಹಿತಿ ನೀಡಲಾಯಿತು. ಮುಖ್ಯಮಂತ್ರಿ ಕೇಜ್ರಿವಾಲ್ ಸೇರಿದರೆ ಒಟ್ಟು 62 ಮಂದಿ ಉಪಸ್ಥಿತಿ ಇದ್ದಾರೆಂದು ಸಭೆಗೆ ತಿಳಿಸಿದ ಬಳಿಕ ತಲೆಎಣಿಕೆ ಮಾಡಿ ಎಲ್ಲರೂ ಜೊತೆಗಿರುವುದಾಗಿ ಘೋಷಣೆ ಮಾಡಿಕೊಂಡರು.

ಸಭೆಯ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಗ್ರೇಟರ್ ಕೈಲಾಶ್ ಶಾಸಕ ಸೌರಭ್ ಭಾರದ್ವಾಜ್, ಬಿಜೆಪಿಯವರು 12 ಮಂದಿ ಆಪ್ ಶಾಸರು ನಾಟ್ ರೀಚೆಬಲ್ ಎಂದು ವದಂತಿ ಹಬ್ಬಿಸಿದ್ದರು. ಹೀಗಾಗಿ ಮುಖ್ಯಮಂತ್ರಿ ತುರ್ತಾಗಿ ಸಭೆ ಕರೆದು ತಲೆ ಎಣಿಕೆ ಮಾಡುವಂತೆ ಸೂಚಿಸಿದರು. ಇದರಂತೆ ಸಭೆ ನಡೆಸಿದ್ದು, ನಾವೆಲ್ಲ ಜೊತೆಗಿದ್ದೇವೆ ಎನ್ನುವುದನ್ನು ತೋರಿಸಿದ್ದೇವೆ. ಬಿಜೆಪಿ ಆಪರೇಶನ್ ಕಮಲವನ್ನು ನಾವು ವಿಫಲಗೊಳಿಸಿದ್ದೇವೆ ಎಂದು ಹೇಳಿದರು. ಸಂಜೀವ್ ಝಾ, ಕುಲ್ದೀಪ್ ಕುಮಾರ್, ಸೋಮನಾಥ್ ಭಾರ್ತಿ, ಅಜಯ್ ದತ್ ಈಗಾಗಲೇ ತಮ್ಮನ್ನು ಬಿಜೆಪಿಯವರು ಸಂಪರ್ಕಿಸಿದ್ದು, 20 ಕೋಟಿ ಆಫರ್ ನೀಡಿದ್ದನ್ನು ತಿಳಿಸಿದ್ದಾರೆ. ಬೇರೆ ಶಾಸಕರನ್ನು ಕರೆತಂದಲ್ಲಿ 25 ಕೋಟಿ ನೀಡುವ ಆಫರ್ ನೀಡಿರುವ ಬಗ್ಗೆಯೂ ತಿಳಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸೌರಭ್ ಹೇಳಿದರು.
It was a day of high drama as Aam Aadmi Party chief Arvind Kejriwal called an emergency meeting of all AAP MLAs for a head count, following inputs from within that some of the legislators were “not contactable".The decision to call all AAP MLAs for a meeting with the CM was taken a day before by the political affairs committee, the highest and all-powerful decision-making body of AAP. In fact, the resolution passed in the PAC condemned “the misuse of ED-CBI & calling out BJP’s attempts to poach AAP MLAs".
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm