ಬ್ರೇಕಿಂಗ್ ನ್ಯೂಸ್
13-09-22 10:43 pm HK News Desk ದೇಶ - ವಿದೇಶ
ದೋಹಾ, ಸೆ.13 : ಕತಾರ್‌ನಲ್ಲಿ ನೆಲೆಸಿದ್ದ ಕೇರಳ ಮೂಲದ ದಂಪತಿಯ 4 ವರ್ಷದ ಪುಟ್ಟ ಮಗಳು ಶಾಲಾ ಬಸ್‌ನಲ್ಲಿ ಉಸಿರು ಕಟ್ಟಿ ಸಾವನ್ನಪ್ಪಿದ ಘಟನೆ ನಡೆದಿದೆ. ಬರೋಬ್ಬರಿ 4 ಗಂಟೆಗಳ ಕಾಲ ಬಾಲಕಿ ಬಸ್ ಒಳಗೆ ಸಿಲುಕಿ, ಉಸಿರಾಡಲಾಗದೇ ಶಾಲಾ ಬಸ್ ಒಳಗೇ ಸಾವನ್ನಪ್ಪಿದ್ದಾಳೆ.
ಹುಟ್ಟುಹಬ್ಬದಂದೇ ಸಾವನ್ನಪ್ಪಿದ ಬಾಲಕಿ
ಕೇರಳ ಮೂಲದ ಅಭಿಲಾಷ್ ಜಾಕೋಬ್ ಮತ್ತು ಸೌಮ್ಯಾ ದಂಪತಿಯ ಎರಡನೇ ಮಗಳು ಮಿನ್ಸಾ ಮರಿಯಮ್ ಜಾಕೋಬ್ ಎಂಬ ಪುಟ್ಟ ಬಾಲಕಿಯೇ ಮೃತ ದುರ್ದೈವಿ. ನಾಲ್ಕು ವರ್ಷದ ಮಿನ್ಸಾ ಮರಿಯಮ್ ಜಾಕೋಬ್ ತನ್ನ ಹುಟ್ಟುಹಬ್ಬದಂದು ಸೆಪ್ಟೆಂಬರ್ 11 ರ ಭಾನುವಾರ ಶಾಲಾ ಬಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಿನ್ಸಾ ವಕ್ರಾದಲ್ಲಿ ಶಿಶು ವಿಹಾರದಲ್ಲಿ ಓದುತ್ತಿದ್ದಳು. ಅದೇ ಶಾಲೆಯ ಬಸ್‌ನಲ್ಲಿಯೇ ಬಂಧಿಯಾಗಿ ಬಾಲಕಿ ಮೃತಪಟ್ಟಿದ್ದಾಳೆ.
ಸ್ಕೂಲ್ ಬಸ್ಸಿನಲ್ಲಿ ನಿದ್ದೆ ಮಾಡುತ್ತಿದ್ದ ಬಾಲಕಿ
ಮಿನ್ಸಾ ಮರಿಯಮ್ ಜಾಕೋಬ್ ಭಾನುವಾರ ಬೆಳಗ್ಗೆ ತನ್ನ ಸ್ಕೂಲ್ ಬಸ್‌ನಲ್ಲಿ ಶಾಲೆಗೆ ಹೋಗಿದ್ದಳು. ಹಿಂದೆ ಕುಳಿತಿದ್ದ ಆಕೆ ದಾರಿ ಮಧ್ಯೆಯೇ ಬಸ್ಸಿನಲ್ಲಿ ನಿದ್ದೆ ಮಾಡಿದ್ದಳು. ಆದರೆ ಆಕೆ ನಿದ್ದೆ ಮಾಡಿದ್ದನ್ನು ಶಾಲಾ ಬಸ್ ಸಿಬ್ಬಂದಿ ಯಾರೂ ಗಮನಿಸಲಿಲ್ಲ. ಹೀಗಾಗಿ ಮಕ್ಕಳನ್ನು ಶಾಲೆಯಲ್ಲಿ ಇಳಿಸಿದ ಸಿಬ್ಬಂದಿ ಶಾಲಾ ವಾಹನವನ್ನು ಬಂದ್ ಮಾಡಿ ಬಿಟ್ಟು ಹೋಗಿದ್ದಾರೆ.
ಮಧ್ಯಾಹ್ನ ತರಗತಿ ಮುಗಿದ ನಂತರ ಬಸ್ಸಿನ ಚಾಲಕ ಮತ್ತು ಕಂಡಕ್ಟರ್ ಹಿಂತಿರುಗಿದಾಗ, ಬಸ್ ಒಳಗೆ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಆಕೆಯನ್ನು ಉಳಿಸಲಾಗಲಿಲ್ಲ. ಬಸ್ಸಿನ ಕಿಟಕಿ, ಬಾಗಿಲುಗಳನ್ನು ಕ್ಲೋಸ್ ಮಾಡಿದ್ದರಿಂದ ಬಾಲಕಿಗೆ ಉಸಿರಾಡಲು ಸಾಧ್ಯವಾಗಿಲ್ಲ. ಕತಾರ್‌ನಲ್ಲಿ ಗರಿಷ್ಠ ತಾಪಮಾನವು 36ರಿಂದ 43 ಡಿಗ್ರಿ ಇದೆ. ಇದರಿಂದಾಗಿ ಬಾಲಕಿ ಉಸಿರು ಕಟ್ಟಿ ಸಾವು ಕಂಡಿದ್ದಾಳೆ ಎನ್ನಲಾಗಿದೆ.
A four-year-old girl Kerala whose family is based in Doha died on Sunday after she was left locked inside her school bus for hours at Al Wakrah in Qatar. Apparently, the little girl had dozed off on her way to her kindergarten. The bus staff did not realise that the girl had fallen asleep inside the bus and they locked the bus after leaving it in the parking lot and left.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm