ಬ್ರೇಕಿಂಗ್ ನ್ಯೂಸ್
15-09-22 10:51 pm HK News Desk ದೇಶ - ವಿದೇಶ
ನವದೆಹಲಿ, ಸೆ.15: ಬ್ಯಾಂಕ್ ಸಿಬಂದಿಯ ಎಡವಟ್ಟಿನಿಂದಾಗಿ ಹುಡುಗಿಯೊಬ್ಬಳು ದಿಢೀರ್ ಆಗಿ ಕೋಟ್ಯಧೀಶೆ ಆಗಿದ್ದು ಬೇಕಾಬಿಟ್ಟಿ ಖರ್ಚು ಮಾಡಲಾರಂಭಿಸಿದ್ದಳು. ಸದ್ದಿಲ್ಲದೇ ಅವಳು ತನ್ನ ಖಾತೆಯಿಂದ 18 ಕೋಟಿ ರೂ. ಹೆಚ್ಚು ಹಣ ಖರ್ಚು ಮಾಡಿದ್ದು ಐಷಾರಾಮಿ ಜೀವನ ನಡೆಸಿಯೇ ಸಿಕ್ಕಿಬಿದ್ದಿದ್ದಾಳೆ.
ಆಸ್ಟ್ರೇಲಿಯಾದ ವೆಸ್ಟ್‌ಪ್ಯಾಕ್ ಬ್ಯಾಂಕ್ ಆಕಸ್ಮಿಕವಾಗಿ ಮಲೇಷ್ಯಾ ಮೂಲದ 21 ವರ್ಷದ ಕ್ರಿಸ್ಟಿನ್ ಜಿಯಾಕ್ಸಿನ್ ಎಂಬ ವಿದ್ಯಾರ್ಥಿನಿಗೆ ಈ ಓವರ್‌ಡ್ರಾಫ್ಟ್ ಸೌಲಭ್ಯವನ್ನು ನೀಡಿದ್ದು, ಅದು ಕೂಡ ಅನಿಯಮಿತವಾಗಿತ್ತು! ಕ್ರಿಸ್ಟಿನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಲು ಆಸ್ಟ್ರೇಲಿಯಾದ ಸಿಡ್ನಿಗೆ ಹೋಗಿದ್ದಳು.
ವೆಸ್ಟ್‌ಪ್ಯಾಕ್ ಬ್ಯಾಂಕ್ ತಪ್ಪಾಗಿ ಕ್ರಿಸ್ಟೀನ್ ಖಾತೆಯಲ್ಲಿ ಅನಿಯಮಿತ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಅನುಮತಿಸಿತ್ತು. ವಿಷಯ ತಿಳಿದಾಗ, ಅವಳು ಬ್ಯಾಂಕ್‌ಗೆ ತಿಳಿಸದೆ ಹಣವನ್ನು ಎಗರಿಸಲು ಪ್ರಾರಂಭಿಸಿದ್ದು, ಪಾರ್ಟಿ, ಟ್ರಾವೆಲಿಂಗ್, ಶಾಪಿಂಗ್ , ಚಿನ್ನಾಭರಣ ಸೇರಿ ಐಷಾರಾಮಿ ಜೀವನವನ್ನು ಪ್ರಾರಂಭಿಸಿ ಹಣವನ್ನು ಮನಬಂದಂತೆ ವ್ಯಯಿಸಿದ್ದಾಳೆ. ಅಷ್ಟೇ ಅಲ್ಲ ಕ್ರಿಸ್ಟಿನ್ ದುಬಾರಿ ಅಪಾರ್ಟ್ ಮೆಂಟ್ ಕೂಡ ತೆಗೆದುಕೊಂಡಿದ್ದಾಳೆ. ಇದಲ್ಲದೆ, ಅವಳ ಇನ್ನೊಂದು ಖಾತೆಗೆ ಸುಮಾರು 2.5 ಲಕ್ಷ ರೂ. ಟ್ರಾನ್ಸ್ ಫರ್ ಮಾಡಿಕೊಂಡಿದ್ದಾಳೆ.

ಸುಮಾರು 11 ತಿಂಗಳ ವರೆಗೆ, ಕ್ರಿಸ್ಟಿನ್ ಬ್ಯಾಂಕ್‌ನಿಂದ ಹಣವನ್ನು ಸುಲಿಗೆ ಮಾಡುತ್ತಲೇ ಇದ್ದಳು. ಕೊನೆಗೆ ಇದು ಬಹಿರಂಗಗೊಳ್ಳುತ್ತಲೇ ಕ್ರಿಸ್ಟಿನ್ ಅನ್ನು ಬಂಧಿಸಲಾಯಿತು. ವಿಷಯ ನ್ಯಾಯಾಲಯದ ಮೆಟ್ಟಿಲೇರಿದಾಗ, ಕ್ರಿಸ್ಟೀನ್ ವಿರುದ್ಧದ ಎಲ್ಲಾ ಆರೋಪಗಳನ್ನು ವಜಾಗೊಳಿಸಿದ್ದು ಅವಳನ್ನು ಬಿಡುಗಡೆ ಮಾಡಲಾಗಿದೆ.
ನನ್ನ ಪೋಷಕರು ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿದ್ದಾರೆ ಎಂದು ನಾನು ಭಾವಿಸಿದೆ ಎಂದು ಕ್ರಿಸ್ಟಿನ್ ತನ್ನ ವಿವರಣೆಯಲ್ಲಿ ಹೇಳಿದ್ದಾರೆ. ಅದೇ ಸಮಯದಲ್ಲಿ, ಬ್ಯಾಂಕ್ ತಪ್ಪು ಮಾಡಿದ್ದರಿಂದ ಕ್ರಿಸ್ಟಿನ್ ವಂಚನೆಯಲ್ಲಿ ತಪ್ಪಿತಸ್ಥಳಲ್ಲ ಎಂದು ಅವರ ವಕೀಲರು ವಾದಿಸಿದರು. ಮತ್ತೊಂದೆಡೆ, ಕ್ರಿಸ್ಟಿನ್ ಅವರ ಗೆಳೆಯ ವಿನ್ಸೆಂಟ್ ಕಿಂಗ್ ಅವರು ಕ್ರಿಸ್ಟಿನ್ ಬಳಿಯಿರುವ ಇಷ್ಟು ದೊಡ್ಡ ಪ್ರಮಾಣದ ಹಣದ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ನಂತರ, ಕ್ರಿಸ್ಟಿನ್ ಸಿಡ್ನಿಯಿಂದ ಮಲೇಷ್ಯಾದ ತನ್ನ ಮನೆಗೆ ಮರಳಿದ್ದಾಳೆ. ಆದಾಗ್ಯೂ, ತನಿಖಾ ಸಂಸ್ಥೆಗಳು ಕ್ರಿಸ್ಟಿನ್ ಳಿಂದ 9 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿವೆ.
A student spent 2 million pound on lavish life style designer hand bag after a bank accidentally gave her unlimited overdraft. Christine jiaxin lee, who was studying in Australia at the time also splashed out on pricey apartment while hiding chuncks of the money by transfering around 2500 pounds into secret bank accounts.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm