ಬ್ರೇಕಿಂಗ್ ನ್ಯೂಸ್
20-09-22 06:47 pm HK News Desk ದೇಶ - ವಿದೇಶ
ಲಕ್ನೋ, ಸೆ.20: ಉತ್ತರ ಪ್ರದೇಶದಲ್ಲಿ ವಕ್ಫ್ ಮಂಡಳಿಯ ಆಸ್ತಿಗಳ ಬಗ್ಗೆ ಸಮೀಕ್ಷೆ ನಡೆಸಲು ಯೋಗಿ ಸರ್ಕಾರ ಆದೇಶ ಮಾಡಿದೆ. ಒಂದು ತಿಂಗಳೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ.
ಇದೇ ವೇಳೆ, ವಕ್ಫ್ ಮಂಡಳಿಯ ಆಸ್ತಿಗಳನ್ನು ಕಂದಾಯ ಇಲಾಖೆಯಲ್ಲಿ ದಾಖಲಿಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ರಾಜ್ಯಾದ್ಯಂತ 75 ಜಿಲ್ಲೆಗಳಲ್ಲಿರುವ ಎಲ್ಲ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ದಾಖಲಿಸಬೇಕು ಎಂದಿದ್ದಾರೆ.
ಸಮೀಕ್ಷೆ ವೇಳೆ ವಕ್ಫ್ ಮಂಡಳಿಯ ಆಸ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಬೇಕಿದೆ. ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿ ಮಾರಾಟ ಮಾಡುವುದನ್ನು ತಡೆಯುವುದು ಇದರ ಹಿಂದಿರುವ ಸರ್ಕಾರದ ಉದ್ದೇಶವಾಗಿದೆ. ಆದೇಶದ ಪ್ರಕಾರ, ಯುಪಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಿಯಾ ಮತ್ತು ಸುನ್ನಿ ವಕ್ಫ್ ಬೋರ್ಡ್‌ಗಳನ್ನು ತನಿಖೆ ಮಾಡಲಾಗುತ್ತದೆ. ಇದರೊಂದಿಗೆ 1989ರಲ್ಲಿ ಕಂದಾಯ ಇಲಾಖೆಯ ಆದೇಶವನ್ನು ರದ್ದುಪಡಿಸಿ ಒಂದು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸುವಂತೆ ಎಲ್ಲ ಜಿಲ್ಲೆಗಳಿಗೆ ಸರ್ಕಾರ ಸೂಚನೆ ನೀಡಿದೆ.
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮದರಸಾ ಸಮೀಕ್ಷೆಯ ಸಂದರ್ಭದಲ್ಲಿ ಇಸ್ಲಾಮಿಕ್ ಶಿಕ್ಷಣದ ಮುಖ್ಯ ಕೇಂದ್ರ ಇರುವ ದಾರೂಲ್ ಉಲೆಮಾ ದೇವಬಂದ್ ನಿಂದ ಇತ್ತಿಚೆಗೆ ಮಹತ್ವದ ಸಭೆ ನಡೆದಿತ್ತು. ಸಭೆಯಲ್ಲಿ ದಾರೂಲ್ ಉಲುಮಾ ದೇವಬಂದ್ ಸಂಘಟನೆ ಸರಕಾರದ ಮದರಸಾಗಳ ಸಮೀಕ್ಷೆಯ ಪ್ರಕ್ರಿಯೆಗೆ ಬೆಂಬಲ ನೀಡಿತ್ತು.
Amidst the ongoing survey of unrecognized madarsas in the state of Uttar Pradesh, CM Yogi Adityanath has issued an order directing the district administrations to survey the Waqf properties as well. The government has asked the district administrations to conduct the survey and submit the relevant report within a month.According to the reports, Uttar Pradesh CM Yogi Adityanath has ordered the officers to scrutinize and demarcate the Waqf properties in the revenue records.
29-11-24 04:12 pm
HK News Desk
BK HariPrasad Congress: ಸಚಿವ ಸ್ಥಾನಕ್ಕೇರುತ್ತಾರ...
28-11-24 10:41 pm
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
29-11-24 02:32 pm
HK News Desk
ಮೀನುಗಾರಿಕಾ ದೋಣಿಯಲ್ಲಿ 36,000 ಕೋಟಿ ರೂ. ಮೌಲ್ಯದ 6...
27-11-24 02:00 pm
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
29-11-24 12:20 pm
Mangalore Correspondent
Mangalore Mukka Srinivas College, Ragging: ಮು...
29-11-24 12:02 pm
Murder, Mulki, Mangalore Crime: ಮುಲ್ಕಿಯಲ್ಲಿ ಬ...
27-11-24 03:36 pm
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm