ಬ್ರೇಕಿಂಗ್ ನ್ಯೂಸ್
22-09-22 11:05 pm HK News Desk ದೇಶ - ವಿದೇಶ
ನವದೆಹಲಿ, ಸೆ.22 : ಅಖಿಲ ಭಾರತ ಇಮಾಮ್ ಸಂಘಟನೆ ಮುಖ್ಯಸ್ಥ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು 'ರಾಷ್ಟ್ರಪಿತ' ಎಂದು ಬಣ್ಣಿಸಿದ್ದಾರೆ. ದೇಶದಲ್ಲಿ ಸೌಹಾರ್ದತೆ ನೆಲೆಸುವ ಪ್ರಯತ್ನದ ಭಾಗವಾಗಿ ಮುಸ್ಲಿಂ ನಾಯಕರನ್ನು ಭೇಟಿ ಮಾಡುತ್ತಿರುವ ಮೋಹನ್ ಭಾಗವತ್, ದೆಹಲಿಯಲ್ಲಿ ಗುರುವಾರ ಪ್ರಮುಖ ಮುಸ್ಲಿಂ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿದ್ದಾರೆ.
ಮೋಹನ್ ಭಾಗವತ್ ಅವರು ನನ್ನ ಆಹ್ವಾನದಂತೆ ಇಂದು ಭೇಟಿ ಮಾಡಿದ್ದರು. ಅವರು 'ರಾಷ್ಟ್ರಪಿತ' ಮತ್ತು ರಾಷ್ಟ್ರ ಋಷಿ'. ಅವರ ಭೇಟಿಯಿಂದಾಗಿ ಹೊರಗೆ ಉತ್ತಮ ಸಂದೇಶ ರವಾನೆಯಾಗಲಿದೆ. ನಾವು ದೇವರನ್ನು ಆರಾಧಿಸುವ ಮಾರ್ಗ ಬೇರೆ. ಆದರೆ ಅತಿ ದೊಡ್ಡ ಧರ್ಮವೆಂದರೆ ಅದು ಮಾನವೀಯತೆ. ದೇಶ ಮೊದಲು ಎಂಬುದರಲ್ಲಿ ನಾವು ನಂಬಿಕೆ ಇರಿಸಿದ್ದೇವೆ ಎಂದು ಉಮರ್ ಅಹ್ಮದ್ ಇಲ್ಯಾಸಿ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ದೆಹಲಿಯಲ್ಲಿ ಮಸೀದಿ ಮತ್ತು ಮದರಸಾಕ್ಕೆ ಭೇಟಿ ನೀಡಿದ ಮೋಹನ್ ಭಾಗವತ್, ಅಖಿಲ ಭಾರತ ಇಮಾಮ್ ಸಂಘಟನೆ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದರು. ರಾಜಧಾನಿಯ ಕಸ್ತೂರ್‌ಬಾ ಗಾಂಧಿ ರಸ್ತೆಯಲ್ಲಿನ ಮಸೀದಿಗೆ ತೆರಳಿದ ಅವರು, ನಂತರ ಉತ್ತರ ದಿಲ್ಲಿಯ ಅಜಾದ್‌ಪುರದಲ್ಲಿನ ಮದರಸ ತಾಜವೀದುಲ್ ಖುರಾನ್‌ಗೆ ಭೇಟಿ ನೀಡಿದರು. ಕಳೆದ ಒಂದು ತಿಂಗಳಿನಿಂದ ಮುಸ್ಲಿಂ ಬುದ್ದಿಜೀವಿಗಳ ಜತೆ ಆರೆಸ್ಸೆಸ್ ಮುಖ್ಯಸ್ಥರು ನಡೆಸುತ್ತಿರುವ ಎರಡನೇ ಭೇಟಿ ಇದಾಗಿದೆ. ಇದಕ್ಕೂ ಮುನ್ನ ಅವರು ಕೋಮು ಸೌಹಾರ್ದ ಬಲಪಡಿಸುವ ಸಂಬಂಧ ಐವರು ಮುಸ್ಲಿಂ ಬುದ್ದಿಜೀವಿಗಳನ್ನು ಭೇಟಿ ಮಾಡಿದ್ದರು.
Rashtriya Swayamsevak Sangh (RSS) chief Mohan Bhagwat met Imam Umar Ahmed Ilyasi, head of ‘All India Imam Sangathan’, at a mosque in Delhi on Thursday. The assembly befell in a closed room on the Kasturba Gandhi Marg mosque for greater than an hour. The workplace of All India Imam Group is situated right here.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm