ಬ್ರೇಕಿಂಗ್ ನ್ಯೂಸ್
23-09-22 02:41 pm HK News Desk ದೇಶ - ವಿದೇಶ
ನವದೆಹಲಿ, ಸೆ.23: ದೇಶದ 15 ರಾಜ್ಯಗಳ 93 ಕಡೆಗಳಲ್ಲಿ ಎನ್ಐಎ ಮತ್ತು ಇಡಿ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದು, ಒಟ್ಟು 45 ಮಂದಿ ಪಿಎಫ್ಐ ಸಂಘಟನೆಯ ಮುಂಚೂಣಿ ಪದಾಧಿಕಾರಿಗಳನ್ನು ಬಂಧಿಸಿದ್ದಾರೆ. ಕೇರಳದಲ್ಲಿ 19, ತಮಿಳುನಾಡಿನಲ್ಲಿ 11, ಕರ್ನಾಟಕದಲ್ಲಿ ಏಳು, ಆಂಧ್ರಪ್ರದೇಶದಲ್ಲಿ ನಾಲ್ಕು, ರಾಜಸ್ಥಾನದಲ್ಲಿ ಇಬ್ಬರು, ಉತ್ತರ ಪ್ರದೇಶ ಮತ್ತು ತೆಲಂಗಾಣದಲ್ಲಿ ತಲಾ ಒಬ್ಬರನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಪಿಎಫ್ಐ ಸಂಘಟನೆಯ ಪದಾಧಿಕಾರಿಗಳು ಭಯೋತ್ಪಾದಕ ಚಟುವಟಿಕೆಗೆ ಫಂಡಿಂಗ್ ಮಾಡುತ್ತಿದ್ದಾರೆ, ಐಸಿಸ್ ಭಯೋತ್ಪಾದಕ ಸಂಘಟನೆಗಳಿಗೆ ಯುವಕರನ್ನು ಸೇರ್ಪಡೆ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಗಳನ್ನು ಆಧರಿಸಿ ಎನ್ಐಎ ಅಧಿಕಾರಿಗಳು ಐದು ಎಫ್ಐಆರ್ ಗಳನ್ನು ದಾಖಲು ಮಾಡಿದ್ದಾರೆ. ಕಳೆದ ಜುಲೈ 7ರಂದು ಹೈದರಾಬಾದಿನ ನಿಜಾಮಬಾದ್ ಪೊಲೀಸ್ ಠಾಣೆಯಲ್ಲಿ ಪಿಎಫ್ಐ ಸಂಘಟನೆಯ 25 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ತನಿಖೆಯ ವೇಳೆ ಆರೋಪಿಗಳು, ಭಯೋತ್ಪಾದಕ ಕೃತ್ಯಗಳಿಗಾಗಿ ಪಿಎಫ್ಐನಿಂದ ಯುವಕರಿಗೆ ತರಬೇತಿ ಶಿಬಿರಗಳನ್ನು ಏರ್ಪಡಿಸುತ್ತಿರುವುದು ಮತ್ತು ಧರ್ಮದ ಆಧಾರದಲ್ಲಿ ಗುಂಪುಗಳ ನಡುವೆ ಹಿಂಸೆಗೆ ಪ್ರಚೋದಿಸುತ್ತಿರುವ ಬಗ್ಗೆ ಮಾಹಿತಿಗಳನ್ನು ನೀಡಿದ್ದರು. ಇದಕ್ಕೆ ಪೂರಕವಾಗಿ ಪಿಎಫ್ಐ ಪ್ರಭಾವ ಇರುವ ರಾಜ್ಯಗಳಲ್ಲಿ ಹಲವಾರು ಅಪರಾಧ ಕೃತ್ಯಗಳು ಸಾಬೀತಾಗಿದ್ದಲ್ಲದೆ, ಎಫ್ಐಆರ್ ದಾಖಲಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಎನ್ಐಎ ತನಿಖೆ ಕೈಗೆತ್ತಿಕೊಂಡಿತ್ತು.
ದೇಶಾದ್ಯಂತ ದಾಳಿ ಕಾರ್ಯಾಚರಣೆ ಬಗ್ಗೆ ಎನ್ಐಎ ಪತ್ರಿಕಾ ಮಾಹಿತಿ ನೀಡಿದ್ದು, ಬಂಧಿತರ ಬಗ್ಗೆ ವಿವರಗಳನ್ನೂ ನೀಡಿದೆ. ದೆಹಲಿ ಎನ್ಐಎ ಕಚೇರಿಯಲ್ಲಿ ದಾಖಲಾದ ಎಫ್ಐಆರ್ ಸಂಬಂಧಿಸಿ ಕರ್ನಾಟಕದ ಪಿಎಫ್ಐ ಪ್ರಮುಖರಾದ ಅನೀಸ್ ಅಹ್ಮದ್, ಅಫ್ಸರ್ ಪಾಶಾ, ಅಬ್ದುಲ್ ವಹೀದ್ ಸೇಠ್, ಯಾಸರ್ ಅರಾಫತ್ ಹಸನ್, ಮೊಹಮ್ಮದ್ ಶಕೀಬ್ ಅಲಿಯಾಸ್ ಶಕೀಬ್, ಮೊಹಮ್ಮದ್ ಫಾರೂಕ್ ಉರ್ ರಹ್ಮಾನ್, ಶಾಹೀದ್ ನಾಸೀರ್ ಎಂಬ ಏಳು ಮಂದಿಯನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದೆ. ಇದೇ ಎಫ್ಐಆರ್ ಸಂಬಂಧಿಸಿ ಕೇರಳದಲ್ಲಿ ಪಿಎಫ್ಐ ರಾಷ್ಟ್ರೀಯ ಅಧ್ಯಕ್ಷ ಓಎಂ ಅಬ್ದುಲ್ ಸಲಾಂ, ಜಾಸೀರ್ ಕೆಪಿ, ವಿಪಿ ನಜರುದ್ದೀನ್ ಎಳಮರಂ, ಮೊಹಮ್ಮದ್ ಬಶೀರ್, ಶಫೀರ್ ಕೆಪಿ, ಇ. ಅಬುಬಕ್ಕರ್, ಪ್ರೊ.ಪಿ.ಕೋಯಾ ಅಲಿಯಾಸ್ ಕಲೀಂ ಕೋಯಾ, ಇ.ಎಂ. ಅಬ್ದುಲ್ ರಹಿಮಾನ್ ಬಂಧಿತರಾಗಿದ್ದಾರೆ.
ಅಲ್ಲದೆ, ದೆಹಲಿಯಲ್ಲಿ ದಾಖಲಾದ ಅದೇ ಪ್ರಕರಣದಲ್ಲಿ ತಮಿಳುನಾಡಿನ ಎಂ.ಮಹಮ್ಮದ್ ಆಲಿ ಜಿನ್ನಾ, ಮೊಹಮ್ಮದ್ ಯೂಸುಫ್, ಎ.ಎಸ್.ಇಸ್ಮಾಯಿಲ್, ಉತ್ತರ ಪ್ರದೇಶದಲ್ಲಿ ವಾಸೀಮ್ ಅಹ್ಮದ್, ರಾಜಸ್ಥಾನದಲ್ಲಿ ಮೊಹಮ್ಮದ್ ಆಸಿಫ್, ಸಾದಿಕ್ ಶರೀಫ್ ತಲಾಬ್ ಪಾಡ ಎಂಬವರನ್ನು ಬಂಧಿಸಲಾಗಿದೆ. ದೆಹಲಿ ಎನ್ಐಎ ಕಚೇರಿಯಲ್ಲಿ ದಾಖಲಾದ ಇನ್ನೊಂದು ಎಫ್ಐಆರ್ ಸಂಬಂಧಿಸಿ ತಮಿಳುನಾಡಿನಲ್ಲಿ ಸೈಯದ್ ಇಶಾಕ್, ಅಡ್ವಕೇಟ್ ಖಾಲಿದ್ ಮಹಮ್ಮದ್, ಎ.ಎಂ. ಇದ್ರಿಸ್, ಮೊಹಮ್ಮದ್ ಅಬು ತಾಹಿರ್, ಎಸ್.ಖಾಜಾ ಮೊಹಿದ್ದೀನ್, ಯಾಸರ್ ಅರಾಫತ್, ಬರಾಕತುಲ್ಲಾ, ಫಯಾಜ್ ಅಹ್ಮದ್ ಎಂಬವರನ್ನು ಬಂಧಿಸಲಾಗಿದೆ.
ಕೊಚ್ಚಿ ಎನ್ಐಎ ಕಚೇರಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ನಜುಮುದ್ದೀನ್, ಸೈನುದ್ದೀನ್ ಟಿಎಸ್, ಯಾಹಿಯಾ ಕೋಯಾ ತಂಗಳ್, ಕೆ. ಮಹಮ್ಮದಾಲಿ, ಪಿ.ಕೆ. ಉಸ್ಮಾನ್, ಕರಮಣ ಅಶ್ರಫ್ ಮೌಲವಿ, ಸಾದಿಕ್ ಅಹ್ಮದ್, ಶಿಹಾಸ್, ಅನ್ಸಾರಿ ಪಿ., ಎಂ.ಎಂ.ಮುಜೀಬ್ ಎಂಬವರನ್ನು ಬಂಧಿಸಲಾಗಿದೆ. ಹೈದರಾಬಾದ್ ಎನ್ಐಎ ಕಚೇರಿಯಲ್ಲಿ ದಾಖಲಾದ ಪ್ರಕರಣ ಸಂಬಂಧಿಸಿ ಆಂಧ್ರಪ್ರದೇಶದಲ್ಲಿ ಅಬ್ದುಲ್ ರಹೀಂ, ಅಬ್ದುಲ್ ವಾಹೀದ್ ಆಲಿ, ಶೇಖ್ ಜಫರುಲ್ಲಾ, ರಿಯಾಜ್ ಅಹ್ಮದ್ ಮತ್ತು ತೆಲಂಗಾಣದಲ್ಲಿ ಅಬ್ದುಲ್ ವಾರೀಸ್ ಎಂಬವರನ್ನು ಬಂಧಿಸಲಾಗಿದೆ.
ಕಾರ್ಯಾಚರಣೆ ವೇಳೆ ಮಹತ್ವದ ದಾಖಲೆಗಳು, ನಗದು ಹಣ, ಹರಿತ ಆಯುಧಗಳು, ಅತಿ ಹೆಚ್ಚು ಡಿಜಿಟಲ್ ಸಾಕ್ಷ್ಯಗಳು ಸಿಕ್ಕಿದ್ದಾಗಿ ಎನ್ಐಎ ತಿಳಿಸಿದೆ. ನೂರಕ್ಕೂ ಹೆಚ್ಚು ಮಂದಿಯನ್ನು ಕಾರ್ಯಾಚರಣೆ ಸಂದರ್ಭದಲ್ಲಿ ವಶಕ್ಕೆ ಪಡೆದಿದ್ದರೂ, ಎನ್ಐಎ ಅಧಿಕಾರಿಗಳು 45 ಮಂದಿಯನ್ನು ಮಾತ್ರ ಬಂಧಿಸಿದ್ದಾಗಿ ತೋರಿಸಿದ್ದಾರೆ. ಇತರರನ್ನು ಆಯಾ ರಾಜ್ಯಗಳಲ್ಲಿ ದಾಖಲಾದ ಪ್ರತ್ಯೇಕ ಪ್ರಕರಣಗಳಲ್ಲಿ ಕೋಮು ದ್ವೇಷದ ಕಾರಣಕ್ಕೆ ಬಂಧನ ತೋರಿಸಲಾಗಿದೆ.
NIA carries out searches in 93 locations of 15 states of India viz Kerala, Tamil Nadu, Karnataka, Andhra Pradesh, Telengana, Uttar Pradesh, Rajasthan, Delhi, Assam, Madhya Pradesh, Maharashtra, Goa, West Bengal, Bihar and Manipur. These searches were conducted at the houses and offices of the top PFI leaders and members in connection with 5 cases registered by the NIA following continued inputs and evidence that the PFI leaders and cadres were involved in funding of terrorism and terrorist activities, organising training camps for providing armed training and radicalising people to join banned organisations. While 19 accused have been arrested from Kerala, 11 have been arrested from Tamil Nadu, 7 from Karnataka, 4 from Andhra Pradesh, 2 from Rajasthan, 1 each from UP and Telangana.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm