ಬ್ರೇಕಿಂಗ್ ನ್ಯೂಸ್
23-09-22 07:15 pm HK News Desk ದೇಶ - ವಿದೇಶ
ಲಕ್ನೋ, ಸೆ.23 : ಮಗಳು ಪ್ರಿಯಕರನ ಜೊತೆ ಓಡಿಹೋಗಿ ಮದುವೆಯಾದ ಕಾರಣಕ್ಕೆ ಮಗಳು ಮತ್ತು ಆಕೆಯ ಪತಿಯನ್ನು ಉಪಾಯದಿಂದ ಮನೆಗೆ ಕರೆಸಿ ಕೊಚ್ಚಿ ಕೊಲೆಗೈದು ಮರ್ಯಾದಾ ಹತ್ಯೆ ಮಾಡಿದ್ದ ಅಪ್ಪ- ಅಮ್ಮ ಸೇರಿದಂತೆ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿ ಉತ್ತರ ಪ್ರದೇಶದ ಬದೌನ್ ಕೋರ್ಟ್ ಆದೇಶ ಮಾಡಿದೆ.
2017ರಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಗೋವಿಂದ್ (24) ಮತ್ತು ಆಶಾ (19) ಎಂಬ ದಂಪತಿ ಬಲಿಯಾಗಿದ್ದರು. ಘಟನೆ ಬಳಿಕ ಬಂಧಿಸಲ್ಪಟ್ಟಿದ್ದ ಕುಟುಂಬಸ್ಥರಿಗೆ ಈಗ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿದೆ.
ಬದೌನ್ ಜಿಲ್ಲೆಯ ಉರೈನ ಗ್ರಾಮದ ನಿವಾಸಿ ಪಪ್ಪು ಸಿಂಗ್ ಎಂಬವರ ಮಗ ಗೋವಿಂದ್ ಹಾಗೂ ಕಿಶನ್‌ಪಾಲ್ ಎಂಬವರ ಪುತ್ರಿ ಆಶಾ ಪ್ರೀತಿಸಿದ್ದು ಮನೆಯವರ ಒಪ್ಪಿಗೆ ಸಿಗದ ಕಾರಣ ಇಬ್ಬರೂ ದೆಹಲಿಗೆ ಪರಾರಿಯಾಗಿ ಮದುವೆಯಾಗಿದ್ದರು.
ಇದರಿಂದ ಸಿಟ್ಟಾಗಿದ್ದ ಆಶಾ ಕುಟುಂಬಸ್ಥರು, ಮಗಳು ಹಾಗೂ ಆಕೆಯ ಪತಿಯನ್ನು ಮುಗಿಸುವ ಪ್ಲ್ಯಾನ್ ಹಾಕಿದ್ದರು. ಆನಂತರ, ಉಪಾಯದಿಂದ ತಾವೇ ಮುಂದೆ ನಿಂತು ಇಬ್ಬರ ಮದುವೆ ಮಾಡಿಸುವುದಾಗಿ ಹೇಳಿ ಇಬ್ಬರನ್ನೂ ಮನೆಗೆ ಕರೆಸಿಕೊಂಡಿದ್ದರು. ಇದನ್ನು ನಂಬಿ ಆಶಾ ಮತ್ತು ಗೋವಿಂದ್ ಮನೆಗೆ ವಾಪಸಾಗಿದ್ದರು. ಆದರೆ ಮನೆಯಲ್ಲಿ ಭೀಕರ ಕೊಲೆಯೇ ನಡೆದು ಹೋಗಿತ್ತು.
ಮೊದಲೇ ಹಾಕಿದ್ದ ಯೋಜನೆಯಂತೆ, ಆಶಾ ತಂದೆ ಕಿಶನ್‌ಪಾಲ್, ತಾಯಿ ಜಲಧಾರಾ ಹಾಗೂ ಸಹೋದರರಾದ ವಿಜಯಪಾಲ್ ಮತ್ತು ರಾಮ್‌ವೀರ್ ಸೇರಿ ಮೊದಲು ಗೋವಿಂದನ ಕುತ್ತಿಗೆಯನ್ನು ಹಿಂಬದಿಯಿಂದ ಹಗ್ಗದಿಂದ ಬಿಗಿದು ಆನಂತರ ಮಚ್ಚಿನಲ್ಲಿ ಹೊಡೆದು ಸಾಯಿಸಿದ್ದರು. ಇದನ್ನು ನೋಡಿ ತಪ್ಪಿಸಲು ಬಂದ ಆಶಾಳನ್ನೂ ಅದೇ ಕೊಡಲಿಯಿಂದ ಹೊಡೆದು ಸಾಯಿಸಿದ್ದರು. ಯುವಕ- ಯುವತಿ ಒಂದೇ ಜಾತಿಯವರಾಗಿದ್ದರೂ, ಯುವತಿ ಕುಟುಂಬ ಮದುವೆಗೆ ವಿರೋಧಿಸಿತ್ತು. ಕೃತ್ಯ ಎಸಗಿದ್ದಲ್ಲದೆ, ಯುವಕ- ಯುವತಿಯ ಶವವನ್ನು ತರಾತುರಿಯಲ್ಲಿ ಮನೆ ಬಳಿಯಲ್ಲೇ ಹೂತು ಹಾಕಿದ್ದರು. ಇದನ್ನು ನೆರೆಮನೆಯವರು ನೋಡಿದ್ದು ಗೋವಿಂದ್ ಹೆತ್ತವರಿಗೆ ಮಾಹಿತಿ ನೀಡಿದ್ದರು. ಈ ಕುರಿತು ಗೋವಿಂದನ ಪಾಲಕರು ಪೊಲೀಸರಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಬರ್ಬರ ಕೃತ್ಯ ಎಸಗಿದ್ದ ಐವರನ್ನು ಬಂಧಿಸಿದ್ದರು.
ಕೋರ್ಟ್ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದರಿಂದ ಮಗಳನ್ನು ಕೊಂದ ಹೆತ್ತವರು ಸೇರಿ ಆಕೆಯ ಸೋದರರಿಗೆ ನ್ಯಾಯಾಧೀಶ ಪಂಕಜ್ ಅಗರವಾಲ್ ಮರಣದಂಡನೆ ವಿಧಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬೇರೆ ಜಾತಿಯ ಯುವಕರನ್ನು ಪ್ರೀತಿಸಿ ಮದುವೆಯಾದಲ್ಲಿ ಈ ರೀತಿಯ ಮರ್ಯಾದಾ ಹತ್ಯೆ ನಡೆಯುವುದು ಕಾಮನ್ ಆಗಿದ್ದು ಹೆತ್ತವರೇ ಮಗಳು ಎನ್ನುವ ಕರುಣೆ ತೋರದೆ ಹೀನಾಯವಾಗಿ ಹೊಡೆದು ಕೊಂದ ಘೋರ ಕೃತ್ಯದ ಬಗ್ಗೆ ಘೋರ ಶಿಕ್ಷೆಯನ್ನೇ ನೀಡಿದ್ದಾರೆ.
A district court has sentenced parents to death for killing their daughter and her boyfriend.District judge Pankaj Kumar Agrawal awarded capital punishment to four people, including the mother and father of the girl who was murdered along with her boyfriend, in the Wazirganj area of Uttar Pradesh’s Badaun in 2017.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm