ಬ್ರೇಕಿಂಗ್ ನ್ಯೂಸ್
29-09-22 09:11 pm HK News Desk ದೇಶ - ವಿದೇಶ
ತಿರುವನಂತಪುರಂ, ಸೆ.29: ಪಿಎಫ್ಐ ನಾಯಕರ ಬಂಧನ ಖಂಡಿಸಿ ಪಿಎಫ್ಐ ಕೇರಳ ರಾಜ್ಯದಲ್ಲಿ ಹರತಾಳ ಘೋಷಣೆ ಮಾಡಿದ್ದು ಈಗ ಕುತ್ತಿಗೆ ಹಿಡಿಯುವಂತಾಗಿದೆ. ಹರತಾಳ ಕರೆಗೆ ಗರಂ ಆಗಿದ್ದ ಕೇರಳ ಹೈಕೋರ್ಟ್ ಇದೀಗ ಬಂದ್ ಸಂದರ್ಭದಲ್ಲಿ ಆಗಿರುವ ನಷ್ಟ ಭರಿಸಲು 5.20 ಕೋಟಿ ರೂಪಾಯಿ ದಂಡ ವಿಧಿಸಿದೆ.
ಸೆ.22ರಂದು ಕೇರಳ ಸೇರಿದಂತೆ ದೇಶಾದ್ಯಂತ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ, ಪಿಎಫ್ಐ ನಾಯಕರನ್ನು ಬಂಧಿಸಿದ್ದರು. ಕೇರಳದಲ್ಲಿ 20ಕ್ಕೂ ಹೆಚ್ಚು ಪ್ರಮುಖರನ್ನು ಬಂಧಿಸಿದ್ದು ಪಿಎಫ್ಐ ಸಂಘಟನೆಯನ್ನು ಕೆರಳಿಸಿತ್ತು. ಇದರಿಂದ ಸಿಟ್ಟಿಗೆದ್ದ ಪಿಎಫ್ಐ ರಾಜ್ಯ ಕಾರ್ಯದರ್ಶಿ ಎ.ಅಬ್ದುಲ್ ಸತ್ತಾರ್ ರಾಜ್ಯವ್ಯಾಪಿ ಸೆ.23ರಂದು ಹರತಾಳಕ್ಕೆ ಕರೆ ನೀಡಿದ್ದರು. ಈ ವೇಳೆ, ರಾಜ್ಯದ ಹಲವು ಕಡೆಗಳಲ್ಲಿ ಕೆಎಸ್ಸಾರ್ಟಿಸಿ ಬಸ್ಸುಗಳಿಗೆ ಕಲ್ಲು ತೂರಾಟ ನಡೆದಿದ್ದು, ಪೊಲೀಸರ ಮೇಲೂ ಕಲ್ಲು ತೂರಲಾಗಿತ್ತು. ಖಾಸಗಿ ವಾಹನಗಳಿಗೂ ಕಲ್ಲು ತೂರಿದ್ದರಿಂದ ಹಲವರು ಗಾಯಗೊಂಡಿದ್ದರು. ಘಟನೆ ಬಗ್ಗೆ ಆವತ್ತೇ ಗರಂ ಆಗಿದ್ದ ಹೈಕೋರ್ಟ್, ಹರತಾಳ ಕರೆ ನೀಡಿದ್ದ ಸಂಘಟನೆ ನಾಯಕರ ವಿರುದ್ಧ ಕಠಿಣ ಕ್ರಮಕ್ಕೆ ಸರಕಾರಕ್ಕೆ ಸೂಚನೆ ನೀಡಿತ್ತು.
ಆನಂತರ, ಕೇರಳ ಸಾರಿಗೆ ಪ್ರಾಧಿಕಾರವು ರಾಜ್ಯಾದ್ಯಂತ ತನ್ನ 58 ಬಸ್ ಗಳಿಗೆ ಹಾನಿಯಾಗಿರುವುದು ಮತ್ತು 20 ಉದ್ಯೋಗಿಗಳು ಗಾಯಗೊಂಡಿರುವ ಬಗ್ಗೆ ಹೈಕೋರ್ಟಿಗೆ ಮಾಹಿತಿ ನೀಡಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟಿನ ಎ.ಕೆ. ಜಯಶಂಕರನ್ ನಂಬ್ಯಾರ್ ಮತ್ತು ಸಿಪಿ ಮೊಹಮ್ಮದ್ ನಿಯಾಸ್ ಅವರಿದ್ದ ನ್ಯಾಯಪೀಠ, ಬಂದ್ ನಿಂದ ಆಗಿರುವ ನಷ್ಟ ಭರಿಸುವಂತೆ ಪಿಎಫ್ಐ ಸಂಘಟನೆಗೆ ನಿರ್ದೇಶನ ನೀಡಿದೆ. ಅಲ್ಲದೆ, ಈ ಮೊತ್ತವನ್ನು ಭರಿಸದ ಹೊರತು ಬಂಧಿಸಲ್ಪಟ್ಟ ಯಾವುದೇ ಆರೋಪಿಗೂ ಜಾಮೀನು ನೀಡದಂತೆ ಕೆಳಗಿನ ಕೋರ್ಟುಗಳಿಗೆ ನಿರ್ದೇಶನ ನೀಡಿದೆ. ಇದಲ್ಲದೆ, ಬಂದ್ ಕರೆ ಕೊಟ್ಟಿದ್ದ ಪಿಎಫ್ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ನನ್ನು ಬಂದ್ ಸಂದರ್ಭದಲ್ಲಿ ದಾಖಲಾಗಿರುವ ಎಲ್ಲ ಕೇಸುಗಳಲ್ಲಿಯೂ ಆರೋಪಿಯನ್ನಾಗಿಸುವಂತೆ ರಾಜ್ಯ ಸರಕಾರಕ್ಕೆ ಖಡಕ್ ಸೂಚನೆ ನೀಡಿದೆ.
ಬಂದ್ ಕರೆಯ ಬಗ್ಗೆ ಕಟು ಮಾತುಗಳನ್ನು ಹೇಳಿರುವ ನ್ಯಾಯಪೀಠವು, ಯಾವುದೇ ಕಾರಣಕ್ಕೂ ಸಾಮಾನ್ಯ ನಾಗರಿಕನ ಜೀವವನ್ನು ಪಣಕ್ಕಿಡುವುದನ್ನು ಸಹಿಸಲಾಗದು. ಇದಕ್ಕೊಂದು ನಿಶ್ಚಿತ ಸಂದೇಶವನ್ನು ಗಟ್ಟಿ ಧ್ವನಿಯಲ್ಲಿ ಕೊಡಬೇಕಾಗಿದೆ. ಯಾರೇ ಆದರೂ ಈ ರೀತಿ ವರ್ತಿಸಿದಲ್ಲಿ ಇದೊಂದು ಪಾಠ ಆಗಬೇಕು. ಬಂದ್ ಕರೆ ಕೊಟ್ಟು ಅದರಿಂದ ತೊಂದರೆ ಅನುಭವಿಸಿದರೆ, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾದರೆ ಅವರೇ ಭರಿಸಬೇಕು. ಸಂವಿಧಾನ ಪ್ರಕಾರ ಪ್ರತಿಭಟನೆ ನಡೆಸಬಹುದು. ಆದರೆ ಹರತಾಳ, ಬಂದ್ ನಡೆಸುವುದು ಕಾನೂನು ಬಾಹಿರ ಎಂದು ಹೇಳಿದೆ.
2019ರಲ್ಲಿ ಹರತಾಳದ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದ್ದ ಹೈಕೋರ್ಟ್, ಹರತಾಳ ನಡೆಸುವುದಿದ್ದರೆ ಏಳು ದಿನಗಳ ಮೊದಲು ಸರಕಾರಕ್ಕೆ ನೋಟೀಸ್ ನೀಡಬೇಕು. ಹಠಾತ್ ಹರತಾಳ ನಡೆಸುವುದು ಕಾನೂನು ಬಾಹಿರವಾಗಿರುತ್ತದೆ ಎಂದು ಹೇಳಿತ್ತು. ಅದರಂತೆ, ಮೊನ್ನೆ ಪಿಎಫ್ಐ ಹರತಾಳ ಕರೆ ನೀಡಿದ್ದ ಬಗ್ಗೆ ಹೈಕೋರ್ಟ್ ಸ್ವಯಂ ಆಗಿ ಪ್ರಕರಣ ದಾಖಲಿಸಿಕೊಂಡಿತ್ತು. ಈಗ ನೀಡಿರುವ ಆದೇಶದಂತೆ ನಷ್ಟದ ಶುಲ್ಕವನ್ನು ಭರಿಸದಿದ್ದಲ್ಲಿ ಪಿಎಫ್ಐ ಸಹವರ್ತಿ ಸಂಘಟನೆಗಳಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆಯೂ ಹೈಕೋರ್ಟ್ ತಿಳಿಸಿದೆ.
The Kerala high court on Thursday directed the Popular Front of India (PFI) to pay in two weeks ₹5.20 crore as damages estimated to have been caused during the bandh it called against raids on the premises of the group and people associated with it last week.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm