ಕಾಬೂಲ್ ಬಾಂಬ್ ದಾಳಿ, ಹೆಣ್ಮಕ್ಕಳ ಶಿಕ್ಷಣವೇ ಟಾರ್ಗೆಟ್, 46 ವಿದ್ಯಾರ್ಥಿನಿಯರು ಸಾವಿನ ಬಗ್ಗೆ ಅಮೆರಿಕ ಮಾಹಿತಿ

03-10-22 10:17 pm       HK News Desk   ದೇಶ - ವಿದೇಶ

ಶಾಲೆಯ ಕ್ಲಾಸ್ ರೂಮ್ ಒಳಗಡೆ ಆತ್ಮಹತ್ಯಾ ಬಾಂಬ್ ದಾಳಿ ಘಟನೆಯಲ್ಲಿ ಹೆಣ್ಮಕ್ಕಳೇ ಟಾರ್ಗೆಟ್ ಆಗಿದ್ದರು ಅನ್ನೋದು ದೃಢಪಟ್ಟಿದೆ. ಘಟನೆಯಲ್ಲಿ 46 ಹೆಣ್ಮಕ್ಕಳು ಸಾವನ್ನಪ್ಪಿದ್ದಾರೆ.

ಕಾಬೂಲ್, ಅ.3: ಶಾಲೆಯ ಕ್ಲಾಸ್ ರೂಮ್ ಒಳಗಡೆ ಆತ್ಮಹತ್ಯಾ ಬಾಂಬ್ ದಾಳಿ ಘಟನೆಯಲ್ಲಿ ಹೆಣ್ಮಕ್ಕಳೇ ಟಾರ್ಗೆಟ್ ಆಗಿದ್ದರು ಅನ್ನೋದು ದೃಢಪಟ್ಟಿದೆ. ಘಟನೆಯಲ್ಲಿ 46 ಹೆಣ್ಮಕ್ಕಳು ಸಾವನ್ನಪ್ಪಿದ್ದಾರೆ. ಇತರ ಮಹಿಳೆಯರು ಸೇರಿ ಒಟ್ಟು 53 ಮಂದಿ ಸಾವು ಕಂಡಿದ್ದಾರೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಹೇಳಿಕೆ ನೀಡಿದೆ.

ಅಪ್ಘಾನಿಸ್ತಾನದಲ್ಲಿರುವ ಮಾನವ ಹಕ್ಕು ಸಂಘಟನೆ ಸದಸ್ಯರ ಮಾಹಿತಿ ಆಧರಿಸಿ ಅಮೆರಿಕ ಸುದ್ದಿ ಬಿತ್ತರಿಸಿದೆ. ಸೆ.30ರಂದು ಬೆಳಗ್ಗೆ ಕಾಬೂಲಿನ ಕಾಜ್ ಎಜುಕೇಶನ್ ಸೆಂಟರ್ ಶಾಲೆಯ ಒಳಭಾಗದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗ ಆತ್ಮಹತ್ಯಾ ದಾಳಿ ನಡೆದಿತ್ತು. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ಬಾಂಬ್ ದಾಳಿ ಬಗ್ಗೆ ನಮ್ಮ ಮಾನವ ಹಕ್ಕು ಸದಸ್ಯರು ತನಿಖೆ ನಡೆಸುತ್ತಿದ್ದಾರೆ. ಖಚಿತ ಮಾಹಿತಿಗಳೊಂದಿಗೆ ವರದಿ ಸಂಗ್ರಹಿಸುತ್ತಿದ್ದಾರೆ ಎಂದು ಅಮೆರಿಕ ಹೇಳಿದೆ.

46 girls and women among 53 killed in Friday's Afghan suicide bombing: UN -  Times of India

ಕೆಲವು ವರದಿಗಳ ಪ್ರಕಾರ ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತು. ಈ ಬಗ್ಗೆ ಅಪ್ಘಾನಿಸ್ತಾನ ಯಾವುದೇ ಖಚಿತ ಮಾಹಿತಿಗಳನ್ನು ನೀಡಿರಲಿಲ್ಲ. ಅಪ್ಘಾನಿಸ್ತಾನದ ಅಲ್ಪಸಂಖ್ಯಾತ ಹಝಾರಾ ಜನಾಂಗದ ಮಕ್ಕಳೇ ಸತ್ತವರಲ್ಲಿ ಹೆಚ್ಚಿದ್ದರು. ಹೀಗಾಗಿ ಘಟನೆಯನ್ನು ಖಂಡಿಸಿ ಹಝಾರಾ ವರ್ಗದ ಜನರು ಪ್ರತಿಭಟನೆಯನ್ನೂ ನಡೆಸಿದ್ದರು. ಹೆಣ್ಮಕ್ಕಳು ಶಿಕ್ಷಣ ಪಡೆಯುವುದನ್ನು ಸಿರಿಯಾದ ಐಸಿಸ್ ಉಗ್ರರು ವಿರೋಧಿಸುತ್ತಾರೆ. ಅದೇ ಕಾರಣಕ್ಕೆ ಆತ್ಮಹತ್ಯಾ ದಾಳಿ ನಡೆದಿದೆ ಎನ್ನಲಾಗುತ್ತಿದೆ. 

The United Nations (UN) on Monday stated that 46 girls and women were among 53 killed in Kabul classroom suicide bombing on Friday, September 30. The UN Mission in Afghanistan informed that the human toll from Friday's bombing in Hazara neighbourhood of the Afghan capital has now risen to 53. It also said that 110 people were injured in the explosion."Our human rights team continues documenting the crime: verifying facts & establishing reliable data to counter denial & revisionism," UN mission in Afghanistan tweeted.