ಬ್ರೇಕಿಂಗ್ ನ್ಯೂಸ್
04-10-22 05:04 pm HK News Desk ದೇಶ - ವಿದೇಶ
ಹೈದರಾಬಾದ್, ಅ.4: ಪಾಕಿಸ್ಥಾನದ ಐಎಸ್ಐ ಸೂಚನೆಯಂತೆ ಹೈದರಾಬಾದ್ ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಹವಣಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಬ್ದುಲ್ ಝಾಯೇದ್, ಮೊಹಮ್ಮದ್ ಸಮೀಯುದ್ದೀನ್, ಮಾಝ್ ಹಸನ್ ಫಾರೂಕ್ ಎಂದು ಗುರುತಿಸಲಾಗಿದೆ.
ಆರೋಪಿಗಳು ಬಾಂಬ್ ಬ್ಲಾಸ್ಟ್ ಅಥವಾ ಸುಸೈಡ್ ದಾಳಿ ನಡೆಸಲು ಸಂಚು ಹೂಡಿದ್ದರು. ಅವರಿಂದ ನಾಲ್ಕು ಹ್ಯಾಂಡ್ ಗ್ರೆನೇಡ್ ಮತ್ತು 5.41 ಲಕ್ಷ ರೂ. ನಗದು ಹಾಗೂ ಒಂದು ಮೋಟರ್ ಸೈಕಲನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಸಿ.ವಿ ಆನಂದ್ ತಿಳಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ಪೊಲೀಸರು ಪಾಲಕ್ ಪೇಟ್ ಎಂಬಲ್ಲಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ಪೈಕಿ ಅಬ್ದುಲ್ ಝಾಯೇದ್ ಈ ಹಿಂದೆಯೂ ಉಗ್ರವಾದಿ ಸಂಬಂಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ. 2005ರಲ್ಲಿ ಹೈದರಾಬಾದಿನ ಸಿಟಿ ಪೊಲೀಸ್ ಕಮಿಷನರೇಟ್ ಕಚೇರಿಯ ಟಾಸ್ಕ್ ಫೋರ್ಸ್ ಆಗಿದ್ದ ಬೇಗುಂಪೇಟ್ ನಲ್ಲಿದ್ದ ಕಚೇರಿ ಮೇಲೆ ನಡೆದಿದ್ದ ಆತ್ಮಹತ್ಯಾ ದಾಳಿ ಪ್ರಕರಣದಲ್ಲಿ ಆರೋಪಿಯಾಗಿದ್ದ. ಅಲ್ಲದೆ, ಈ ಮೂವರು ಕೂಡ ಪಾಕಿಸ್ಥಾನದ ಐಎಸ್ಐ ಏಜನ್ಸಿ ಜೊತೆ ನಿಕಟ ಸಂಪರ್ಕದಲ್ಲಿದ್ದರು. ಸದ್ಯ ಐಎಸ್ಐನಲ್ಲಿರುವ, ಮೂಲತಃ ಹೈದರಾಬಾದಿನವರಾದ ಪರ್ಹಾತುಲ್ಲಾ ಘೋರಿ, ಸಿದ್ದಿಕ್ ಬಿನ್ ಓಸ್ಮಾನ್ ಮತ್ತು ಅಬ್ದುಲ್ ಮಜೀದ್ ಅಲಿಯಾಸ್ ಚೋಟು ಎಂಬವರ ಜೊತೆ ನೇರ ಸಂಪರ್ಕದಲ್ಲಿದ್ದರು. ಇವರು ಈಗ ಪಾಕಿಸ್ತಾನದಲ್ಲಿಯೇ ಸೆಟ್ಲ್ ಆಗಿದ್ದು, ಹೈದರಾಬಾದಿನಲ್ಲಿ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.
ಈ ಹಿಂದೆ ಹೈದರಾಬಾದಿನಲ್ಲಿ ಹಲವು ಯುವಕರನ್ನು ಬ್ರೇನ್ ವಾಷ್ ಮಾಡಿ ವಿಧ್ವಂಸಕ ಕೃತ್ಯಗಳಿಗೆ ಪ್ರೇರಣೆ ನೀಡುತ್ತಿದ್ದರು. 2002ರಲ್ಲಿ ದಿಲ್ ಕುಶ್ ನಗರದಲ್ಲಿ ಸಾಯಿಬಾಬ್ ದೇಗುಲದ ಮೇಲಿನ ದಾಳಿ, ಮುಂಬೈನ ಘಾಟ್ ಕೋಪರ್ ನಲ್ಲಿ ಬಸ್ ಬ್ಲಾಸ್ಟ್, 2005ರಲ್ಲಿ ಬೇಗುಂಪೇಟ್ ನಲ್ಲಿ ದಾಳಿ ಪ್ರಕರಣದಲ್ಲಿ ಇವರು ಆರೋಪಿಗಳಾಗಿದ್ದರು. 2004ರಲ್ಲಿ ಸಿಕಂದರಾಬಾದ್ ನಲ್ಲಿ ಗಣೇಶ್ ದೇವಸ್ಥಾನದ ಮೇಲಿನ ದಾಳಿ ಪ್ರಕರಣದಲ್ಲಿಯೂ ಆರೋಪಿಗಳಾಗಿದ್ದರು. ಈಗ ಬಂಧಿತನಾಗಿರುವ ಅಬ್ದುಲ್ ಝಾಯೇದ್, ಪಾಕಿಸ್ಥಾನದಲ್ಲಿರುವ ಮೂವರು ಹರಾಮಿಗಳ ಸೂಚನೆಯ ಬಗ್ಗೆ ಬಾಯಿಬಿಟ್ಟಿದ್ದಾನೆ. ಹೈದರಾಬಾದಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಆ ಮೂವರು ಹಣಕಾಸು ನೆರವು ನೀಡಿದ್ದಲ್ಲದೆ, ಯುವಕರನ್ನು ಪ್ರಚೋದಿಸಿ ಕೃತ್ಯಕ್ಕೆ ತಯಾರಿ ನಡೆಸಿದ್ದರು. ಅದರಂತೆ ಸಮೀಯುದ್ದೀನ್ ಮತ್ತು ಮಾಝ್ ಹಸನ್ ಎಂಬವರನ್ನು ಕೃತ್ಯಕ್ಕಾಗಿ ಸೇರಿಸಿಕೊಂಡಿದ್ದಾಗಿ ಝಾಯೇದ್ ಪೊಲೀಸರಲ್ಲಿ ತಿಳಿಸಿದ್ದಾನೆ.
According to the preliminary information gathered by the police, Zahed was previously involved in several terror-related cases in Hyderabad including suicide attack on the Hyderabad City Police Commissioner’s task force office Begumpet in 2005The Hyderabad police on Sunday arrested three persons who were allegedly planning to carry out terror attacks in the city at the behest of Inter-Service Intelligence (ISI) of Pakistan, officials said.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:40 pm
Mangalore Correspondent
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
15-07-25 10:57 pm
HK News Desk
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm