ಬ್ರೇಕಿಂಗ್ ನ್ಯೂಸ್
04-10-22 11:02 pm HK News Desk ದೇಶ - ವಿದೇಶ
ಕ್ಯಾಲಿಫೋರ್ನಿಯಾ, ಅ.4 : 8 ತಿಂಗಳ ಮಗು ಸೇರಿ ನಾಲ್ವರು ಭಾರತೀಯ ಮೂಲದ ಅಮೆರಿಕನ್ ಪ್ರಜೆಗಳನ್ನು ಕ್ಯಾಲಿಫೋರ್ನಿಯಾದಲ್ಲಿ ಅಪಹರಿಸಲಾಗಿದೆ. ನಗರದ ಮರ್ಸೀಡ್ ಕೌಂಟಿ ಪ್ರದೇಶದಲ್ಲಿ ನಾಲ್ವರಿದ್ದ ಭಾರತೀಯ ಕುಟುಂಬವನ್ನು ಅಪಹರಿಸಲಾಗಿದೆ. ಹಣಕ್ಕಾಗಿಯೇ ಅಪಹರಣ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ಧಾರೆ.
36 ವರ್ಷದ ಜಸ್‌ದೀಪ್ ಸಿಂಗ್, ಅವರ ಪತ್ನಿ 27 ವರ್ಷದ ಜಸ್‌ಲೀನ್ ಕೌರ್ ಹಾಗೂ ದಂಪತಿಯ 8 ತಿಂಗಳ ಮಗು ಅರೋಹಿ ಮತ್ತು ಮಗುವಿನ ಮಾವ 39 ವರ್ಷದ ಅಮನ್‌ದೀಪ್ ಸಿಂಗ್ ಅಪಹರಣಕ್ಕೆ ಒಳಗಾದವರು.
ಅಪಹರಣಕಾರರು ಶಸ್ತ್ರಧಾರಿಗಳಾಗಿದ್ದರು ಎಂದು ತಿಳಿದಬಂದಿದ್ದು, ಅವರ ವರ್ತನೆಯಿಂದ ಸಂಘಟಿತ ಅಪರಾಧ ಗುಂಪಿಗೆ ಸೇರಿದವರು ಎಂಬ ಅನುಮಾನವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಹರಣಕಾರರ ಜಾಡು ಹಿಡಿದು ಶೋಧ ಕಾರ್ಯ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
2019ರಲ್ಲಿ ಕ್ಯಾಲಿಫೊರ್ನಿಯಾದಲ್ಲಿ ನೆಲೆಸಿದ್ದ ತುಷಾರ್ ಆತ್ರೆ ಎಂಬ ಭಾರತೀಯ ಮೂಲದ ಅಮೆರಿಕನ್ ಪ್ರಜೆಯನ್ನು ಅಪಹರಿಸಲಾಗಿತ್ತು. ಆದರೆ ಅಪಹರಣಗೊಂಡ ಕೆಲವೇ ಗಂಟೆಗಳಲ್ಲಿ ತುಷಾರ್ ಆತ್ರೆ ಶವ ಅವರ ಗೆಳತಿಯ ಕಾರಿನಲ್ಲಿ ಸಿಕ್ಕಿತ್ತು. ಇದೀಗ ಒಂದೇ ಕುಟುಂಬದ ನಾಲ್ವರು ಭಾರತೀಯ ಮೂಲದ ಅಮೆರಿಕನ್ ಪ್ರಜೆಗಳನ್ನು ಅಪಹರಿಸಲಾಗಿದ್ದು, ಆತಂಕ ಮನೆ ಮಾಡಿದೆ.
ಸದ್ಯ ಅಪಹರಣಕ್ಕೀಡಾಗಿರುವವರ ಭಾವಚಿತ್ರಗಳನ್ನು ಬಿಡುಗಡೆ ಮಾಡಿರುವ ಪೊಲೀಸರು, ಇವರ ಬಗ್ಗೆ ಯಾವುದೇ ಮಾಹಿತಿ ಇದ್ದರೂ, ಕೂಡಲೇ ತಮ್ಮನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
Authorities said that an eight-month-old baby and his Indian-origin family were among 4 people kidnapped from Merced County in California on Monday (local time).According to a report by ABC 10, the victims have been identified as 36-year-old Jasdeep Singh, 27-year-old Jasleen Kaur, their eight-month-old child Aroohi Dheri, and their uncle 39-year-old Amandeep Singh.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm