ಬ್ರೇಕಿಂಗ್ ನ್ಯೂಸ್
05-10-22 01:43 pm HK News Desk ದೇಶ - ವಿದೇಶ
ನಾಗಪುರ, ಅ.5: ನೈತಿಕ ಮೌಲ್ಯಗಳನ್ನು ಆಧರಿಸಿ ಜನಸಂಖ್ಯೆ ನಿಯಂತ್ರಣ ಆಗಬೇಕಾದ ಅವಶ್ಯವಿದೆ. ಅದನ್ನು ನಿರ್ಲಕ್ಷಿಸುವಂತಿಲ್ಲ. ಯಾವಾಗ ದೇಶದಲ್ಲಿ ಜನಸಂಖ್ಯೆಯ ಪ್ರಮಾಣದಲ್ಲಿ ವ್ಯತ್ಯಾಸ ಕಾಣುತ್ತದೋ ಅಂಥ ಸಂದರ್ಭದಲ್ಲಿ ದೇಶದ ಭೌಗೋಳಿಕ ವ್ಯಾಪ್ತಿಯೂ ವ್ಯತ್ಯಾಸಗೊಂಡಿದ್ದನ್ನು ನೋಡಿದ್ದೇವೆ. ಜನನ ಪ್ರಮಾಣದಲ್ಲಿ ಏರಿಳಿತ, ಒಂದು ವರ್ಗದ ಜನಸಂಖ್ಯೆಯಲ್ಲಿ ಏರುಮುಖ, ಮತಾಂತರ, ಒಳ ನುಸುಳುವಿಕೆಯ ಕಾರಣ ದೇಶದಲ್ಲಿ ಅಸಮಾನತೆ ಉಂಟಾಗುತ್ತದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕಳವಳ ವ್ಯಕ್ತಪಡಿಸಿದ್ದಾರೆ.
ವಿಜಯದಶಮಿ ಪ್ರಯುಕ್ತ ಆರೆಸ್ಸೆಸ್ ಪ್ರಧಾನ ಕಚೇರಿ ನಾಗಪುರದಲ್ಲಿ ನಡೆದ ವಾರ್ಷಿಕ ಸಮಾರಂಭದಲ್ಲಿ ಭಾಗವತ್ ಭಾಷಣ ಮಾಡಿದರು. ಜನಸಂಖ್ಯೆಗೆ ತಕ್ಕಷ್ಟು ಸಂಪನ್ಮೂಲವೂ ಇರಬೇಕು. ಒಂದ್ವೇಳೆ ಸೂಕ್ತ ಸಂಪನ್ಮೂಲ ಕ್ರೋಢೀಕರಿಸಿಕೊಳ್ಳದೆ ಜನಸಂಖ್ಯೆ ಹೆಚ್ಚಿದರೆ, ಅದರಿಂದ ದೇಶಕ್ಕೆ ಆಪತ್ತು ಉಂಟಾಗುತ್ತದೆ. ಆ ಸಂದರ್ಭದಲ್ಲಿ ಯಾವ ರೀತಿಯ ಜನಸಂಖ್ಯೆ ದೇಶಕ್ಕೆ ಆಸ್ತಿ ಅನ್ನುವುದನ್ನು ನೋಡಬೇಕಾಗುತ್ತದೆ. ಇದಕ್ಕಾಗಿ ನಾವು ಜನಸಂಖ್ಯೆ ನಿಯಂತ್ರಣಕ್ಕೆ ಸೂಕ್ತ ಮಾನದಂಡ ಅನುಸರಿಸಿ ಕಾನೂನು ಮಾಡಬೇಕಾಗಿದೆ ಎಂದು ಹೇಳಿದರು.
ಯೋಗ ಮತ್ತು ಶಾರೀರಿಕ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನ ಮತ್ತು ಸಾಮಾಜಿಕ ಸಹಭಾಗಿತ್ವವನ್ನು ಬೆಳೆಸಿಕೊಳ್ಳಬೇಕಾಗಿದೆ. ಇದನ್ನು ಜನರು ಮರೆತು ಹಳೆಯ ಅಭ್ಯಾಸಗಳನ್ನೇ ಮುಂದುವರಿಸಿದಲ್ಲಿ ಯಾವುದೇ ವ್ಯವಸ್ಥೆ ಇದ್ದರೂ, ಅದರಿಂದ ಸಾಮಾಜಿಕ ಆರೋಗ್ಯ ಸುಧಾರಣೆ ಆಗುವುದಿಲ್ಲ. ಹೆತ್ತವರು ಮಕ್ಕಳಿಗೆ ಸಂಸ್ಕಾರ ಕೊಡುವಲ್ಲಿ ಎಷ್ಟರ ಮಟ್ಟಿಗೆ ಪಾತ್ರ ವಹಿಸುತ್ತಾರೆ ಅನ್ನುವುದು ಮುಖ್ಯ. ಮನೆಯೊಳಗಿನ ವಾತಾವರಣ, ಹಬ್ಬ, ಹರಿದಿನಗಳಲ್ಲಿ ತೊಡಗಿಸಿಕೊಳ್ಳುವಿಕೆ, ಸಾಮಾಜಿಕ ಸಹಭಾಗಿತ್ವ, ಶಿಸ್ತು ಬೆಳೆಸಿಕೊಂಡರೆ ಅದರಿಂದ ಮಕ್ಕಳಿಗೂ ಸಂಸ್ಕಾರ ಸಿಗುತ್ತದೆ. ನಾವು ಇದರಲ್ಲಿ ಎಷ್ಟು ತೊಡಗಿಸುತ್ತೇವೆ ಅನ್ನುವುದನ್ನು ಪ್ರಶ್ನೆ ಮಾಡಿಕೊಳ್ಳಬೇಕು.
ಮಾತೃಭಾಷೆಯಲ್ಲಿಯೇ ಶಿಕ್ಷಣ ಸಿಗುವಂತಾಗಲು ಕಾನೂನು ರೂಪಿಸುವಂತೆ ಒತ್ತಡ ಹೇರಬೇಕಾಗಿದೆ. ಹೊಸ ಶಿಕ್ಷಣ ಪದ್ಧತಿಯಡಿ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ, ರಾಷ್ಟ್ರೀಯತೆ ಬೆಳೆಸ್ಕೊಂಡು ದೇಶದ ಸತ್ಪ್ರಜೆಯಾಗಲು ಅವಕಾಶ ನೀಡುತ್ತದೆ ಎಂದು ಭಾಗವತ್ ಹೇಳಿದ್ದಾರೆ. ದೇಶದಲ್ಲಿ ಬೆಳೆಯುತ್ತಿರುವ ಸನಾತನ ಧರ್ಮದ ಪ್ರಜ್ಞೆ, ಕಾಳಜಿಗೆ ಎದುರಾಗಿ ಭಾರತ ವಿರೋಧಿಗಳು ಸಕ್ರಿಯರಾಗುತ್ತಿದ್ದಾರೆ. ದೇಶದ ಬಗ್ಗೆ ಅಪಪ್ರಚಾರ, ಭಯೋತ್ಪಾದನೆ, ಅಪರಾಧಿ ಕೃತ್ಯ, ಸಾಮಾಜಿಕ ಸಂಘರ್ಷ ಬೆಳೆಸುವ ಮೂಲಕ ದೇಶದ ಕುರಿತು ಅಪಭ್ರಂಶ ವಿಚಾರಗಳನ್ನು ಪ್ರಚಾರಪಡಿಸುತ್ತಿದ್ದಾರೆ.
ಸ್ವತಂತ್ರ ಭಾರತದಲ್ಲಿಯೂ ಸ್ವಾರ್ಥ, ದ್ವೇಷದ ಭಾವನೆಯಿಂದ ಸಮಾಜದಲ್ಲಿ ವಿಘಟನೆ ಸೃಷ್ಟಿಸುವ ಪ್ರಕ್ರಿಯೆಗಳಾಗುತ್ತಿವೆ. ಈ ರೀತಿಯ ಪ್ರತ್ಯೇಕತಾವಾದಿ ಭಾವನೆ, ಭಾಷೆ, ವರ್ಗ, ಪ್ರಾಂತದ ವಿಚಾರದಲ್ಲಿ ಸಂಘರ್ಷ ಏರ್ಪಡಿಸುವ ಪ್ರಕ್ರಿಯೆಗಳಿಗೆ ಯಾವುದೇ ಭಯವಿಲ್ಲದೆ ಪ್ರತ್ಯುತ್ತರ ನೀಡಬೇಕಾಗಿದೆ. ಆತ್ಮನಿರ್ಭರ ಭಾರತ ಅನ್ನುವ ಪರಿಕಲ್ಪನೆ ರಾಷ್ಟ್ರ ಕಟ್ಟುವಲ್ಲಿ ಮಹತ್ತರ ಹೆಜ್ಜೆ. ಸರಕಾರ, ಆಡಳಿತ ಮತ್ತು ಸಮಾಜದ ನಡುವೆ ಸ್ವಾವಲಂಬಿ ಭಾವನೆ ಬೆಳೆಯಲು ಈ ಪರಿಕಲ್ಪನೆ ಸಹಕಾರಿ. ಆಧುನಿಕ ಬೆಳವಣಿಗೆಗಳು, ಹೊಸತಾಗಿ ಹುಟ್ಟಿಕೊಳ್ಳುವ ಅವಕಾಶಗಳ ನಡುವೆ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಹಾಗೆಂದು ನಾವು ನಮ್ಮ ಸನಾತನ ಧರ್ಮದ ಮೌಲ್ಯಗಳನ್ನು ಮರೆಯಬಾರದು ಎಂದು ಭಾಗವತ್ ಹೇಳಿದ್ದಾರೆ.
ಸಾಮಾನ್ಯ ಭಾರತೀಯ ನಾಗರಿಕನೂ ದೇಶದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾನೆ. ಭಾರತೀಯ ನಾಗರಿಕರಿಗಿದ್ದ ಗೌರವ ಜಗತ್ತಿನಲ್ಲಿ ಎತ್ತರಕ್ಕೇರುತ್ತಿದೆ. ಬದಲಾದ ಸನ್ನಿವೇಶಗಳಿಂದಾಗಿ ಭಾರತವು ಶ್ರೀಲಂಕಾದಲ್ಲಿ ಎದುರಾದ ಆಪತ್ತಿನ ಸಂದರ್ಭದಲ್ಲಿ, ಯುಕ್ರೇನ್- ರಷ್ಯಾ ಸಂಘರ್ಷದ ಮಧ್ಯೆ ಮಹತ್ವದ ಪಾತ್ರ ವಹಿಸುವಂತಾಗಿದೆ. ಜಗತ್ತಿನಲ್ಲಿ ಭಾರತದ ನಿಲುವುಗಳಿಗೆ ಹೆಚ್ಚು ಬಲ ಬರುವಂತಾಗಿದೆ ಎಂದು ಮೋಹನ್ ಭಾಗವತ್ ಅಭಿಪ್ರಾಯ ಪಟ್ಟಿದ್ದಾರೆ.
Population requires resources. If it grows without building resources, it becomes a burden. There is another view in which population is considered an asset. We need to work on a population policy for all, keeping both aspects in mind. Along with population control, population balance on an ethnic basis is also a matter of importance, which cannot be ignored. Whenever there is a demographic imbalance in a country, the geographical boundaries of that country also change. Besides inequality in the birth rate, other major reasons are greed, forced conversion and infiltration in the country.
29-11-24 05:01 pm
Bangalore Correspondent
Belagavi, Malamaruthi police station, Pooja:...
29-11-24 04:12 pm
BK HariPrasad Congress: ಸಚಿವ ಸ್ಥಾನಕ್ಕೇರುತ್ತಾರ...
28-11-24 10:41 pm
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
29-11-24 06:26 pm
HK News Desk
Sambhal Mosque, Fight: ಸಂಭಾಲ್ ಮಸೀದಿ ಸರ್ವೆ ಆದೇ...
29-11-24 06:22 pm
Raj Kundra Raid, Shilpa Shetty: ಬೆತ್ತಲೆ ಜಗತ್ತ...
29-11-24 02:32 pm
ಮೀನುಗಾರಿಕಾ ದೋಣಿಯಲ್ಲಿ 36,000 ಕೋಟಿ ರೂ. ಮೌಲ್ಯದ 6...
27-11-24 02:00 pm
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
29-11-24 06:19 pm
Mangalore Correspondent
Babu Pilar, U T Khader, Mangalore: ತೊಕ್ಕೊಟ್ಟಿ...
28-11-24 09:58 pm
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
29-11-24 12:20 pm
Mangalore Correspondent
Mangalore Mukka Srinivas College, Ragging: ಮು...
29-11-24 12:02 pm
Murder, Mulki, Mangalore Crime: ಮುಲ್ಕಿಯಲ್ಲಿ ಬ...
27-11-24 03:36 pm
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm