ಬ್ರೇಕಿಂಗ್ ನ್ಯೂಸ್
05-10-22 02:59 pm HK News Desk ದೇಶ - ವಿದೇಶ
ನವದೆಹಲಿ, ಅ.5: ಇತ್ತೀಚೆಗೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ಪೈಗಂಬರ್ ಬಗ್ಗೆ ನೀಡಿದ್ದ ಹೇಳಿಕೆಯ ಸಂದರ್ಭದಲ್ಲಿ ಉಂಟಾಗಿದ್ದ ವಿವಾದ, ಆಕ್ರೋಶದ ನಡುವೆ ಮುಸ್ಲಿಮರ ಪ್ರತಿಭಟನೆಗಳಲ್ಲಿ ‘’ಸರ್ ತಾನ್ ಸೇ ಜುದಾ’’ ಎನ್ನುವ ಘೋಷಣೆಗಳು ಕೇಳಿಬಂದಿದ್ದವು. ಪೈಗಂಬರ್ ಬಗ್ಗೆ ಅವಹೇಳನ ಮಾಡಿದವರಿಗೆ ಶಿರಚ್ಛೇದವೇ ಶಿಕ್ಷೆ ಎನ್ನುವ ಅರ್ಥವುಳ್ಳ ಉರ್ದು ಭಾಷೆಯ ಘೋಷಣೆಯದು. ಆದರೆ ಈ ಸರ್(ತಲೆ), ತಾನ್(ದೇಹ) ಸೇ ಜುದಾ (ಪ್ರತ್ಯೇಕಿಸು) ಎಂಬ ಘೋಷವಾಕ್ಯವೇ ಪಾಕಿಸ್ಥಾನದಲ್ಲೀಗ ಲಾಭ ತರುವ ಆನ್ಲೈನ್ ಉದ್ಯಮವಾಗಿದೆ ಎನ್ನುವ ಆಘಾತಕಾರಿ ಅಂಶ ಬಯಲಾಗಿದೆ.
ಇಂಡಿಯಾ ಟುಡೇ ಸಂಸ್ಥೆಯು ಪಾಕಿಸ್ಥಾನದ ಕರಾಚಿ ಮೂಲದ ದವಾತ್ –ಇ ಇಸ್ಲಾಮಿ ಸಂಘಟನೆಯ ಕುರಿತಾಗಿ ಸ್ಫೋಟಕ ಮಾಹಿತಿಗಳನ್ನು ಪ್ರಸಾರ ಮಾಡಿದೆ. ದವಾತ್ ಇ-ಇಸ್ಲಾಮಿ ಪಾಕಿಸ್ಥಾನದಲ್ಲಿದ್ದುಕೊಂಡು ಭಾರತದ ವಿರುದ್ಧ ಯುದ್ಧ ಸಾರಿರುವುದು ಮತ್ತು ಅದಕ್ಕಾಗಿ ಭಾರತೀಯ ಮುಸ್ಲಿಮ್ ಯುವಕರನ್ನು ಪ್ರಚೋದಿಸಿ ದೇಶದ ವಿರುದ್ಧ ಎತ್ತಿಕಟ್ಟುವ ಕೆಲಸದಲ್ಲಿ ತೊಡಗಿದೆ. ಅದಕ್ಕಾಗಿ ಆನ್ಲೈನ್ ತರಗತಿಗಳನ್ನು ಭಾರತೀಯ ಮುಸ್ಲಿಮರಿಗೆಂದೇ ನಡೆಸುತ್ತಿದೆ ಎನ್ನುವ ಬಗ್ಗೆ ಮಾಹಿತಿಗಳನ್ನು ಆಧರಿಸಿ ಸುದ್ದಿ ಪ್ರಸಾರ ಮಾಡಿದೆ. ಈ ವರದಿಗೆ ಪುಷ್ಟಿ ನೀಡುವಂತೆ, ಕೆಲವು ತಜ್ಞರ ಹೇಳಿಕೆಯನ್ನೂ ದಾಖಲಿಸಿದೆ.
ಮೌಲಾನಾ ಆಜಾದ್ ನೇಶನಲ್ ಯೂನಿವರ್ಸಿಟಿಯ ಮಾಜಿ ಚಾನ್ಸಲರ್ ಆಗಿರುವ ಝಫರ್ ಸಾರೇಶ್ ವಾಲಾ ಅವರಲ್ಲಿ ಈ ಬಗ್ಗೆ ಅಭಿಪ್ರಾಯ ಕೇಳಿದಾಗ, ಸರ್ ತಾನ್ ಸೇ ಜುದಾ ಅನ್ನುವುದು ಪಾಕಿಸ್ಥಾನ ಉತ್ಪಾದಿತ ಘೋಷಣೆ. ಮತ್ತು ಅಲ್ಲೀಗ ಇದೇ ಘೋಷವಾಕ್ಯ ಭಾರೀ ಲಾಭಕಾರಿ ಉದ್ಯಮವಾಗಿದೆ ಎಂಬುದನ್ನು ಹೇಳಿದ್ದಾರೆ. ಐದು ತಿಂಗಳ ಹಿಂದೆ ಪಾಕಿಸ್ಥಾನದ ಇಸ್ಲಾಮಿಕ್ ಧಾರ್ಮಿಕ ಗುರುವೊಬ್ಬ ಶುಕ್ರವಾರದ ಧರ್ಮೋಪದೇಶ ಭಾಷಣದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು ಸರ್ ತಾನೇ ಸೇ ಜುದಾ ಅನ್ನುವುದು ಪಾಕಿಸ್ಥಾನದಲ್ಲಿ ಮಲ್ಟಿ ಮಿಲಿಯನ್ ಡಾಲರ್ ಗಳಿಸುವ ಉದ್ಯಮ ಎಂದು ಹೇಳಿಕೊಂಡಿರುವುದಾಗಿ ಸಾರೇಶ್ ವಾಲಾ ತಿಳಿಸಿದ್ದಾರೆ.
ದಾವಾತ್ ಇ-ಇಸ್ಲಾಮಿ ಸಂಘಟನೆಯ ವಿಷ ಬಿತ್ತುವ ನೀತಿಯನ್ನು 25 ವರ್ಷಗಳ ಹಿಂದೆಯೇ ವಿರೋಧಿಸಿದ್ದೆ. ಹತ್ತು ವರ್ಷಗಳ ಹಿಂದೆ ಅಲ್ಲಿನ ಧಾರ್ಮಿಕ ಗುರುಗಳಲ್ಲಿಯೂ ಹೇಳಿದ್ದೆ. ಇಂತಹ ವಿಷ ಹರಡುವುದನ್ನು ತಡೆಯಿರಿ ಎಂದು ಮನವಿ ಮಾಡಿದ್ದೆ ಎಂದು ಝಫರ್ ಸಾರೇಶ್ ವಾಲಾ ಹೇಳಿದ್ದಾರೆ. ಉದಯಪುರದಲ್ಲಿ ಟೈಲರ್ ಕನ್ನಯ್ಯಲಾಲ್ ನನ್ನು ಶಿರಚ್ಛೇದ ಮಾಡಿರುವ ಘಟನೆ ಆಧರಿಸಿ, ಇಂಡಿಯಾ ಟುಡೇ ವಿಶೇಷ ವರದಿ ಪ್ರಕಟಿಸಿದ್ದು, ದಾವಾತ್ ಇ-ಇಸ್ಲಾಮಿ ಸಂಘಟನೆ ಭಾರತದ ವಿರುದ್ಧ ಡಿಜಿಟಲ್ ತಂತ್ರಜ್ಞಾನ ಬಳಸಿ ಭಾರತದ ಯುವಕರನ್ನು ತೀವ್ರವಾದಿಗಳನ್ನಾಗಿಸುತ್ತಿವೆ ಎಂಬುದಾಗಿ ಹೇಳಿದೆ.
ದಾವಾತ್ -ಇ-ಇಸ್ಲಾಮಿ ತನ್ನ ವೆಬ್ ಸೈಟಿನಲ್ಲಿ ಧಾರ್ಮಿಕ ವಿಚಾರಗಳನ್ನು ಬಿತ್ತರಿಸುತ್ತಿದ್ದು, ಜಗತ್ತಿನಾದ್ಯಂತ ಇರುವ ಮುಸ್ಲಿಮರನ್ನೇ ಟಾರ್ಗೆಟ್ ಮಾಡಿಕೊಂಡಿದೆ. ಆಸ್ಟ್ರೇಲಿಯಾ, ಅಮೆರಿಕ, ಬಾಂಗ್ಲಾದೇಶ, ಕೆನಡಾ, ಹಾಂಕಾಂಗ್, ಕೊರಿಯಾ, ಯುಕೆಯಲ್ಲಿ ತನ್ನ ಕಾರ್ಯಾಚರಣೆ ಇರುವುದಾಗಿ ದಾವಾತ್ ಹೇಳಿಕೊಂಡಿದೆ. ಆದರೆ ಭಾರತ ಈ ಲಿಸ್ಟ್ ನಲ್ಲಿ ಇರುವ ಬಗ್ಗೆ ಉಲ್ಲೇಖ ಇಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
'Sar tan se juda' has become a business in Pakistan: @zafarsareshwala, political analyst.#IndiaFirst @gauravcsawant pic.twitter.com/q6GM6qEExe
— IndiaToday (@IndiaToday) October 4, 2022
Reacting to India Today's exclusive probe into the Dawat-e-Islami, political analyst and the former chancellor of Maulana Azad National Urdu University, Zafar Sareshwala, on Tuesday said that 'Sar tan se juda' has emanated from Pakistan and has now become a business.Sareshwala said, “Five months back, an Islamic scholar of Pakistan in his Friday sermon mentioned that ‘sar tan se juda’ has now become a multi-billion dollar business.”
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm