ದಾವಾತ್ ಇ-ಇಸ್ಲಾಮಿ ಗೆರಿಲ್ಲಾ ಯುದ್ಧ ; ದೇಶವನ್ನು ಸಾವಿರ ಇರಿತಗಳಿಂದ ರಕ್ತ ಚೆಲ್ಲುವುದೇ ಹಿಡನ್ ಅಜೆಂಡಾ! 20 ಕೋಟಿ ಮುಸ್ಲಿಮರೇ ಪಾಕ್ ಗುರಿ

05-10-22 07:57 pm       HK News Desk   ದೇಶ - ವಿದೇಶ

ಪಾಕಿಸ್ಥಾನ ಮೂಲದ ದಾವಾತ್ ಇ-ಇಸ್ಲಾಮಿ ಭಾರತದ ವಿರುದ್ಧ ಗೆರಿಲ್ಲಾ ಯುದ್ಧ ಸಾರಿರುವ ಬಗ್ಗೆ ಇಂಡಿಯಾ ಟುಡೇ ಮತ್ತಷ್ಟು ಮಾಹಿತಿಗಳನ್ನು ಹರವಿಟ್ಟಿದೆ.

ನವದೆಹಲಿ, ಅ.5: ಪಾಕಿಸ್ಥಾನ ಮೂಲದ ದಾವಾತ್ ಇ-ಇಸ್ಲಾಮಿ ಭಾರತದ ವಿರುದ್ಧ ಗೆರಿಲ್ಲಾ ಯುದ್ಧ ಸಾರಿರುವ ಬಗ್ಗೆ ಇಂಡಿಯಾ ಟುಡೇ ಮತ್ತಷ್ಟು ಮಾಹಿತಿಗಳನ್ನು ಹರವಿಟ್ಟಿದೆ. ಈ ಬಗ್ಗೆ ಜಮ್ಮು ಕಾಶ್ಮೀರದ ನಿವೃತ್ತ ಡಿಜಿಪಿ ಶೇಷ್ ಪೌಲ್ ವೈದ್ ಹೇಳಿಕೆ ನೀಡಿದ್ದು, ದಾವಾತ್ ಇ-ಇಸ್ಲಾಮಿ ಪಾಕಿಸ್ಥಾನದ ಮೂಲ ಅಜೆಂಡಾವನ್ನು ಇಟ್ಟುಕೊಂಡು ಭಾರತದ ಮುಸ್ಲಿಮರನ್ನು ತೀವ್ರವಾದಿಗಳನ್ನಾಗಿಸುತ್ತಿದೆ. ಭಾರತವನ್ನು ಸಾವಿರಾರು ಇರಿತಗಳಿಂದ ಕತ್ತರಿಸಿ ರಕ್ತ ಚೆಲ್ಲುವುದೇ ಅವರ ಹಿಡನ್ ಅಜೆಂಡಾ ಎನ್ನುವುದನ್ನು ತಿಳಿಸಿದ್ದಾರೆ.

ಸೂಫಿ ಹೆಸರಿನಲ್ಲಿ ತೀವ್ರಗಾಮಿ ಇಸ್ಲಾಮಿಕ್ ಶಿಕ್ಷಣವನ್ನು ದಾವಾತ್ ಇಸ್ಲಾಮಿ ನೀಡುತ್ತಿದೆ. ಭಾರತದ ಮುಸ್ಲಿಮ್ ಯುವಕರನ್ನು ಟಾರ್ಗೆಟ್ ಮಾಡಿಕೊಂಡು ಅವರನ್ನು ದೇಶದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಪಾಕಿಸ್ಥಾನದ ಅಜೆಂಡಾವನ್ನು ಮುಸ್ಲಿಮ್ ಯುವಕರ ತಲೆಗೆ ತುಂಬುತ್ತಿದ್ದಾರೆ. ಎರಡು ಸಮುದಾಯಗಳನ್ನು ಎತ್ತಿಕಟ್ಟುವುದು, ಸಮಾಜದಲ್ಲಿ ಸಂಘರ್ಷ ಏರ್ಪಡಿಸುವ ದ್ವೇಷದ ಸಂಚನ್ನು ಭೇದಿಸದೇ ಇದ್ದರೆ ಭವಿಷ್ಯ ಕಷ್ಟವಿದೆ, ಯಾಕಂದ್ರೆ ಭಾರತದಲ್ಲಿರುವ 20 ಕೋಟಿ ಮುಸ್ಲಿಮರನ್ನು ಅವರು ಟಾರ್ಗೆಟ್ ಮಾಡ್ಕೊಂಡಿದ್ದಾರೆ. ಇಷ್ಟೊಂದು ಮುಸ್ಲಿಮರು ತಿರುಗಿ ಬಿದ್ದರೆ ದೇಶಕ್ಕೆ ಕಷ್ಟವಿದೆ ಎಂದು ಶೇಷ್ ಪೌಲ್ ಹೇಳಿದ್ದಾರೆ. ಭದ್ರತಾ ಏಜನ್ಸಿಗಳು ಈ ಬಗ್ಗೆ ಅಲರ್ಟ್ ಆಗಬೇಕಾಗಿದೆ. ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಧಾರ್ಮಿಕ ಗುರುಗಳ ಬಗ್ಗೆಯೂ ಗಂಭೀರ ಚಿಂತನೆ ಮಾಡಬೇಕಿದೆ ಎಂದು ಪೌಲ್ ಹೇಳಿದ್ದಾರೆ.

ಜಿಯಾ ಕಾಲದಲ್ಲಿಯೇ ಗೆರಿಲ್ಲಾ ಯುದ್ಧ ಶುರು

ನಿವೃತ್ತ ಸೇನಾಧಿಕಾರಿ ಲೆ.ಜ. ಸೈಯದ್ ಅಟಾ ಹಸ್ನೈನ್ ಕೂಡ ಪಾಕಿಸ್ಥಾನಿ ಅಜೆಂಡಾದ ಬಗ್ಗೆ ಹೇಳಿದ್ದಾರೆ. ಯುವಕರನ್ನು ಪ್ರಚೋದಿಸುವುದು, ತೀವ್ರಗಾಮಿಗಳಾಗಿಸುವ ಪ್ರಕ್ರಿಯೆ 45-50 ವರ್ಷಗಳ ಹಿಂದಿನಿಂದಲೇ ನಡೆದುಬಂದಿದೆ. 1977ರಲ್ಲಿ ಜಿಯಾ ಕಾಲದಲ್ಲಿಯೇ ಇಂತಹ ಅಜೆಂಡಾವನ್ನು ಪಾಕಿಗಳು ರೂಪಿಸಿಕೊಂಡಿದ್ದಾರೆ. ಯಾಕಂದ್ರೆ, ಭಾರತವನ್ನು ನೇರ ಯುದ್ಧದಿಂದ ಸೋಲಿಸುವುದು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದಾರೆ. ಅದಕ್ಕಾಗಿ ದೇಶದಲ್ಲಿರುವ ಜಾತಿ ಪದ್ಧತಿ, ಧಾರ್ಮಿಕ ಕಟ್ಟುಪಾಡುಗಳನ್ನೇ ಗುರಾಣಿಯಾಗಿಸ್ಕೊಂಡಿದ್ದಾರೆ. ಭಾರತವನ್ನು ಸತತವಾಗಿ ಗಾಯಗೊಳಿಸುತ್ತಾ ರಕ್ತ ಒಸರುವಂತೆ ಮಾಡಲು ಇಲ್ಲಿನ ಹುಳುಕುಗಳನ್ನೇ ಬಳಸಿಕೊಂಡಿದ್ದರು. ಯುವಕರ ಮೆದುಳನ್ನು ಪ್ರಚೋದಿಸಿ, ವಿಷ ಬಿತ್ತಿ ಆಡಳಿತದ ವಿರುದ್ಧ ಛೂಬಿಡುತ್ತಿದ್ದಾರೆ. ಸಮಾಜದಲ್ಲಿ ವರ್ಗ ಸಂಘರ್ಷ ಎಬ್ಬಿಸಿ, ಗೆರಿಲ್ಲಾ ಯುದ್ಧವನ್ನು ಮಾಡುತ್ತಲೇ ಇದ್ದಾರೆ ಎಂದು ಸೈಯದ್ ಹಸ್ನೈನ್ ಹೇಳಿದ್ದಾರೆ.

ಪಾಕಿಸ್ಥಾನದ ಈ ಅಜೆಂಡಾ ಈಗಾಗ್ಲೇ ಕಾಶ್ಮೀರದಲ್ಲಿ ಯಶಸ್ವಿಯಾಗಿ ಜಾರಿಗೆ ಬಂದಿದೆ. ನಾವಿನ್ನೂ ಈ ಗೆರಿಲ್ಲಾ ನೀತಿಯನ್ನು ಅರ್ಥ ಮಾಡಿಕೊಂಡಿಲ್ಲ. ಹೈಬ್ರಿಡ್ ವಾರ್ ಅನ್ನುವ ಪರಿಕಲ್ಪನೆಯ ಮೂಲ ತಂತುವೇ ರೇಡಿಕಲೈಸೇಶನ್(ತೀವ್ರವಾದ ಹಬ್ಬಿಸುವುದು.) ಪಾಕಿಸ್ಥಾನ ಈ ರೀತಿಯ ಯುದ್ಧಕ್ಕಾಗಿ ಭಾರತದ ಮುಸ್ಲಿಮರನ್ನು ಎತ್ತಿ ಕಟ್ಟುತ್ತಲೇ ಇದೆ ಎಂದು ಹಸ್ನೈನ್ ತಿಳಿಸಿದ್ದಾರೆ. ಕರಾಚಿಯಿಂದ ಪ್ರಸಾರವಾಗುವ ದಾವಾತ್ ಇ-ಇಸ್ಲಾಮಿ ಭಾರತದ ಪ್ರತಿ ಮುಸ್ಲಿಮನ ಮನೆಗೂ ತನ್ನ ವಿಷ ಬೀಜಗಳನ್ನು ಬಿತ್ತುತ್ತಿದೆ. ಇದನ್ನು ವೀಕ್ಷಿಸುವ, ದಾವಾತ್ ಇ-ಇಸ್ಲಾಮಿ ಅನುಸರಣೆ ಮಾಡುವ ಮಂದಿ ಭಾರತ ವಿರೋಧಿ ಧೋರಣೆ ತಳೆಯುತ್ತಾ ಪಾಕಿಸ್ಥಾನ ಪರವಾಗಿ ಇಸ್ಲಾಮಿಕ್ ದೇಶ ಕಟ್ಟುವತ್ತ ಮುಂದಾಗುತ್ತಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. 

Former Director General of Police (DGP) of Jammu and Kashmir Shesh Paul Vaid has said that the role of Dawat-e-Islami in radicalising Indian youth suits Pakistan's agenda to "bleed India by a thousand cuts".SP Vaid was reacting to India Today's exclusive probe that Dawat-e-Islami, a Karachi-based Islamic organisation, has exploited digital technology in order to push its radical agenda into the homes of Indian Muslims.