ಇರಾನಲ್ಲಿ ಹೆಚ್ಚಿದ ಹಿಜಾಬ್ ವಿರೋಧಿ ಪ್ರತಿಭಟನೆ ; ಬೀದಿಗಿಳಿದ ಯುವತಿಯರು, ಕಾಲೇಜು ವಿದ್ಯಾರ್ಥಿನಿಯರು ! ಪ್ರತಿಭಟನೆಯಲ್ಲಿ 90ಕ್ಕೂ ಹೆಚ್ಚು ಸಾವು ಆರೋಪ

06-10-22 03:47 pm       HK News Desk   ದೇಶ - ವಿದೇಶ

ಇರಾನ್ ದೇಶದಲ್ಲಿ ಹಿಜಾಬ್ ಬಗ್ಗೆ ಪ್ರಶ್ನೆ ಮಾಡಿದ್ದ ಯುವತಿಯೊಬ್ಬಳನ್ನು ಪೊಲೀಸರೇ ಕೊಂದು ಹಾಕಿದ್ದಾರೆಂಬ ವಿಚಾರದಲ್ಲಿ ಹೊತ್ತಿಕೊಂಡ ಪ್ರತಿಭಟನೆಯ ಬೆಂಕಿ ಈಗ ದೇಶವ್ಯಾಪಿ ಹರಡಿಕೊಂಡಿದೆ.

ಟೆಹ್ರಾನ್, ಅ.6: ಇರಾನ್ ದೇಶದಲ್ಲಿ ಹಿಜಾಬ್ ಬಗ್ಗೆ ಪ್ರಶ್ನೆ ಮಾಡಿದ್ದ ಯುವತಿಯೊಬ್ಬಳನ್ನು ಪೊಲೀಸರೇ ಕೊಂದು ಹಾಕಿದ್ದಾರೆಂಬ ವಿಚಾರದಲ್ಲಿ ಹೊತ್ತಿಕೊಂಡ ಪ್ರತಿಭಟನೆಯ ಬೆಂಕಿ ಈಗ ದೇಶವ್ಯಾಪಿ ಹರಡಿಕೊಂಡಿದೆ. ರಾಜಧಾನಿ ಟೆಹ್ರಾನ್ ನಗರದಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯರು ಕೂಡ ಸ್ಕಾರ್ಫ್, ಹಿಜಾಬ್ ತೆಗೆದಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಸರ್ವಾಧಿಕಾರಿ ಆಡಳಿತಗಾರನಿಗೆ ಗಲ್ಲು ಶಿಕ್ಷೆ ಕೊಡುವಂತೆ ಆಗ್ರಹ ಮಾಡಿದ್ದಾರೆ.

22 ವರ್ಷದ ಮಹ್ಸಾ ಅಮಿನಿ ಎಂಬ ಯುವತಿ ನಾಪತ್ತೆಯಾದ ಹತ್ತು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಳು. ಘಟನೆ ಹಿನ್ನೆಲೆಯಲ್ಲಿ ಯುವತಿಯರು, ಮಹಿಳೆಯರು ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ. ಪೊಲೀಸರು ಹೋರಾಟ ಹತ್ತಿಕ್ಕಲು ಬಲ ಪ್ರಯೋಗಿಸಿದ್ದಾರೆ. ಹಲವು ಕಡೆ ಯುವತಿಯರ ಮೇಲೆ ಗುಂಡು ಹಾರಿಸಿದ್ದಾರೆ. ಆದರೂ ಆಗಿಂದಾಗ್ಗೆ ಯುವತಿಯರ ಕಿಚ್ಚು ಸ್ಫೋಟಗೊಳ್ಳುತ್ತಿದೆ, ಅಲ್ಲದೆ, ಯುವತಿಯರು ಈಗ ತಮ್ಮ ಸ್ವಾತಂತ್ರ್ಯಕ್ಕಾಗಿ ದನಿ ಎತ್ತಿದ್ದಾರೆ.

ಟೆಹ್ರಾನ್ ನಗರದ ಖರಾಜಾದ ಸ್ಕೂಲ್ ಒಂದರಲ್ಲಿ ವಿದ್ಯಾರ್ಥಿನಿಯರು ಶಾಲೆಯ ಪ್ರಿನ್ಸಿಪಾಲನ್ನು ಬೈದು ಅಟ್ಟಿಸಿಕೊಂಡು ಹೋಗುವ ವಿಡಿಯೋ ಸೆರೆಯಾಗಿದ್ದು ಟ್ವಿಟರ್ ನಲ್ಲಿ ವೈರಲ್ ಆಗಿದೆ. ಇನ್ನೊಂದು ವಿಡಿಯೋದಲ್ಲಿ ಯುವತಿಯೊಬ್ಬಳು ಕಾರಿನ ಮೇಲೆ ಹತ್ತಿ ಆಜಾದಿ ಎಂದು ಘೋಷಣೆ ಕೂಗುತ್ತಿರುವುದು, ಸುತ್ತ ನೆರೆದಿರುವ ಯುವತಿಯರು ಅದನ್ನು ಅನುಸರಿಸುತ್ತಿರುವ ವಿಡಿಯೋ ದಾಖಲಾಗಿದೆ. ಯುವತಿಯನ್ನು ಬಳಿಕ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಈ ರೀತಿಯ ಪ್ರತಿಭಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶಾಲೆ, ಕಾಲೇಜುಗಳಲ್ಲಿ ಎದ್ದಿರುವ ಪ್ರತಿಭಟನೆಯನ್ನು ಹತ್ತಿಕ್ಕುವುದು ಸರಕಾರಕ್ಕೆ ಸವಾಲಾಗಿದೆ.

ಇದೇ ವೇಳೆ, 90ಕ್ಕೂ ಹೆಚ್ಚು ಯುವತಿಯರನ್ನು ಹಿಹಾಬ್ ವಿರುದ್ಧ ಪ್ರತಿಭಟನೆ ನಡೆಸಿದ ಕಾರಣಕ್ಕೆ ಕೊಲ್ಲಲಾಗಿದೆ ಎನ್ನುವ ಬಗ್ಗೆ ಇರಾನಿನ ಮಾನವ ಹಕ್ಕು ಸಂಘಟನೆಯ ಕಾರ್ಯಕರ್ತರು ದೂರಿದ್ದಾರೆ. ನಿಖಾ ಶಿಖರಾಮಿ ಎಂಬ 17 ಯುವತಿಯನ್ನು ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಕ್ಕಾಗಿ ಕೊಲ್ಲಲಾಗಿದೆ. ಇದರ ನಂತರ ಪ್ರತಿಭಟನೆ ವ್ಯಾಪಕವಾಗಿ ಹರಡಿದ್ದು ಇರಾನ್ ಅಧ್ಯಕ್ಷ ಹಯಾತುಲ್ಲಾ ಖೊಮೇನಿ ಅವರನ್ನು ನಿರಂಕುಶ ಆಡಳಿತ ಮಾಡುವುದಕ್ಕಾಗಿ ಗಲ್ಲು ಶಿಕ್ಷೆ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ.

ಇರಾನ್ ಇಸ್ಲಾಮ್ ಮೂಲಭೂತವಾದಿ ದೇಶವಾಗಿದ್ದು ಷರಿಯತ್ ಕಾನೂನು ಜಾರಿಯಲ್ಲಿದೆ. ಇಂಥ ದೇಶದಲ್ಲಿ ಯುವತಿಯರು ಬೀದಿಗಿಳಿದು ಹೋರಾಟ ನಡೆಸಿದ್ದೇ ದೊಡ್ಡ ಬೆಳವಣಿಗೆಯಾಗಿದ್ದು, ತಮ್ಮ ಸ್ವಾತಂತ್ರ್ಯಕ್ಕಾಗಿ ದನಿ ಎತ್ತಿದ್ದಾರೆ. 

At the funeral of 22-year-old Mahsa Amini, who died after being detained by Iran’s morality police, women took off their headscarves in protest against Iran’s forced hijab law. This was just the beginning of unprecedented protests that the country was set to witness in the next three weeks. And now, in a show of defiance, young schoolgirls have taken up the battle amid a crackdown by security forces.