ಮಕ್ಕಳ ಆರೈಕೆ ಕೇಂದ್ರಕ್ಕೆ ನುಗ್ಗಿದ ಆಗಂತುಕ ; ಥಾಯ್ಲೆಂಡ್ ನಲ್ಲಿ ಭೀಕರ ರಕ್ತಪಾತ, ಮಕ್ಕಳು ಸೇರಿ 30ಕ್ಕೂ ಹೆಚ್ಚು ಜನರ ಹತ್ಯೆ ! 

06-10-22 05:46 pm       HK News Desk   ದೇಶ - ವಿದೇಶ

ಥಾಯ್ಲೆಂಡ್ ನಲ್ಲಿ ಆಗಂತುಕನೊಬ್ಬ ಮಕ್ಕಳ ಆರೈಕೆ ಕೇಂದ್ರಕ್ಕೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿ ರಕ್ತಪಾತ ನಡೆಸಿದ್ದು ಮಕ್ಕಳು ಸೇರಿ 30ಕ್ಕೂ ಮಂದಿ ಮೃತಪಟ್ಟಿದ್ದಾರೆ.

ಬ್ಯಾಂಕಾಕ್, ಅ.6 : ಥಾಯ್ಲೆಂಡ್ ನಲ್ಲಿ ಆಗಂತುಕನೊಬ್ಬ ಮಕ್ಕಳ ಆರೈಕೆ ಕೇಂದ್ರಕ್ಕೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿ ರಕ್ತಪಾತ ನಡೆಸಿದ್ದು ಮಕ್ಕಳು ಸೇರಿ 30ಕ್ಕೂ ಮಂದಿ ಮೃತಪಟ್ಟಿದ್ದಾರೆ.  

ಥಾಯ್ಲೆಂಡಿನ ನೊಂಗ್ಬುವಾ ಲಂಫೂ ಪಟ್ಟಣದಲ್ಲಿ ಘಟನೆ ನಡೆದಿದ್ದು ಗುರುವಾರ ಮಧ್ಯಾಹ್ನ ಮಕ್ಕಳ ಆರೈಕೆ ನುಗ್ಗಿದ ಬಂದೂಕುಧಾರಿ ಯದ್ವಾತದ್ವಾ ಗುಂಡು ಹಾರಿಸಿದ್ದಾನೆ. ಮಕ್ಕಳ ನಿಗಾ ಕೇಂದ್ರದಲ್ಲಿ 30 ಮಕ್ಕಳಿದ್ದರು. ಮೊದಲಿಗೆ ಅಲ್ಲಿದ್ದ ನಾಲ್ಕು ಮಂದಿ ಶಿಕ್ಷಕರ ಮೇಲೆ ದಾಳಿ ನಡೆಸಿದ್ದಾನೆ. ಅದರಲ್ಲಿ ಒಬ್ಬಾಕೆ ಟೀಚರ್ ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಕೈಯಲ್ಲಿ ಚೂರಿಯನ್ನೂ ಹಿಡಿದಿದ್ದ ಆತ ಕೈಗೆ ಸಿಕ್ಕವರ ಮೇಲೆ ಇರಿದಿದ್ದಾನೆ. ಬಳಿಕ ಮಕ್ಕಳ ಮೇಲೆ ಶೂಟ್ ಮಾಡಿದ್ದಾನೆ. ಅಲ್ ಜಜೀರಾ ಮಾಹಿತಿ ಪ್ರಕಾರ ಒಟ್ಟು 34 ಜನ ಮೃತಪಟ್ಟಿದ್ದಾರೆ. 

Thailand shooting: 36 people killed including kids in attack at day care  centre - World News - Mirror Online

ಕೃತ್ಯದ ಬಳಿಕ ಬಂದೂಕುಧಾರಿ ವ್ಯಕ್ತಿಯೂ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಗಂತುಕ ವ್ಯಕ್ತಿಯನ್ನು ಮಾಜಿ ಪೊಲೀಸ್ ಅಧಿಕಾರಿ ಫಾನ್ಯಾ ಖಮ್ರಾಬ್ ಎಂದು ಗುರುತಿಸಿದ್ದು ಮಕ್ಕಳು ಮಲಗಿದ್ದ ಕೋಣೆಗೆ ಬಲವಂತದಿಂದ ನುಗ್ಗಿ ಕೃತ್ಯ ನಡೆಸಿದ್ದಾನೆ. ಅಲ್ಲಿಂದ ತನ್ನ ಮನೆಗೆ ತೆರಳಿ ಪತ್ನಿ ಮತ್ತು ಮಗುವನ್ನೂ ಸಾಯಿಸಿ ಸಾವಿಗೆ ಶರಣಾಗಿದ್ದಾನೆ. ಇದರ ನಡುವೆ, ಬೈಕಿನಲ್ಲಿ ತೆರಳುತ್ತಿದ್ದ ಒಬ್ಬಾಕೆಯನ್ನು ಕೊಂದು ಅದೇ ಬೈಕಿನಲ್ಲಿ ತನ್ನ ಮನೆಗೆ ತೆರಳಿದ್ದ. ಬ್ಯಾಂಕಾಕ್ ನಗರದಲ್ಲಿ ಅತ್ಯಂತ ಭೀಭತ್ಸಕಾರಿ ಕೃತ್ಯ ನಡೆದಿದ್ದು ಎಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.‌

At least 34 people, including 22 kids, were killed Thursday in a mass shooting at a children’s day-care centre in a northeastern province of Thailand, reported news agency Reuters citing a police official. The gunman was an ex-police officer and he took his own life following the shooting, it added.The official confirmed to Reuters the gunman killed his wife and child and himself during the incident. He was reportedly discharged from the police force last year.