ಆದಿಪುರುಷ್ ಚಿತ್ರದಲ್ಲಿ ರಾಮಾಯಣ ಇಸ್ಲಾಮೀಕರಣ ಆರೋಪ ; ಹನುಮಂತ, ರಾವಣರನ್ನು ಮೊಘಲನಂತೆ ಚಿತ್ರಿಸಿದ್ದಕ್ಕೆ ಆಕ್ಷೇಪ 

06-10-22 10:07 pm       HK News Desk   ದೇಶ - ವಿದೇಶ

‘ಆದಿಪುರುಷ್‌’ ಬಾಲಿವುಡ್ ಸಿನಿಮಾದ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ವಿವಾದಕ್ಕೆ ತುತ್ತಾಗಿದೆ. ಸಿನಿಮಾದಲ್ಲಿ ರಾಮ, ರಾವಣ ಸೇರಿ ಬಹುತೇಕ ರಾಮಾಯಣದ ಪಾತ್ರಧಾರಿಗಳನ್ನು ಕೆಟ್ಟ ರೀತಿಯಲ್ಲಿ ತೋರಿಸಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. 

ಮುಂಬೈ, ಅ.7 : ‘ಆದಿಪುರುಷ್‌’ ಬಾಲಿವುಡ್ ಸಿನಿಮಾದ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ವಿವಾದಕ್ಕೆ ತುತ್ತಾಗಿದೆ. ಸಿನಿಮಾದಲ್ಲಿ ರಾಮ, ರಾವಣ ಸೇರಿ ಬಹುತೇಕ ರಾಮಾಯಣದ ಪಾತ್ರಧಾರಿಗಳನ್ನು ಕೆಟ್ಟ ರೀತಿಯಲ್ಲಿ ತೋರಿಸಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. 

ಈ ಬಗ್ಗೆ ಸರ್ವ ಬ್ರಾಹ್ಮಣ ಮಹಾಸಭಾ ಚಿತ್ರದ ನಿರ್ದೇಶಕರಿಗೆ ನೋಟಿಸ್‌ ನೀಡಿದ್ದು, ಏಳು ದಿನಗಳ ಒಳಗೆ ಚಿತ್ರದ ಎಲ್ಲ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದೆ. ಸರ್ವ ಬ್ರಾಹ್ಮಣ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸುರೇಶ್ ಮಿಶ್ರಾ ಪರವಾಗಿ ವಕೀಲ ಕಮಲೇಶ್ ಶರ್ಮಾ, ನಿರ್ದೇಶಕ ಓಂ ರಾವತ್ ಅವರಿಗೆ ನೋಟಿಸ್ ನೀಡಿದ್ದಾರೆ. ಚಿತ್ರದಲ್ಲಿ ನಿರ್ದೇಶಕರು ರಾಮಾಯಣವನ್ನು ಇಸ್ಲಾಮೀಕರಣಗೊಳಿಸಿದ್ದು, ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ನೋಟಿಸ್‌ನಲ್ಲಿ ಆಕ್ಷೇಪಿಸಿದ್ದಾರೆ.

Adipurush' Teaser Kicks Off Meme Fest: Twitter Compares It To 'GOT',  'Brahmastra' And Anime From The '90s - Entertainment

ಮೊಘಲನಂತೆ ಚಿತ್ರಿಸಿದ ಹನುಮಂತ ! 

ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ಮತ್ತು ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಕೃತಿ ಸನೂನ್ ಸೀತೆಯಾಗಿದ್ದಾರೆ. ಆದರೆ ಸಿನಿಮಾದಲ್ಲಿ ಪಾತ್ರಗಳ ಚಿತ್ರಣವನ್ನು ನೆಗೆಟಿವ್ ರೀತಿ ತೋರಿಸಲಾಗಿದೆ. ರಾವಣನ ಮುಖವನ್ನೂ ಮೊಘಲ್ ರಾಜನ ರೀತಿ ಚಿತ್ರಿಸಲಾಗಿದೆ. ಈ ಬಗ್ಗೆ ಪ್ರಬಲ ಆಕ್ಷೇಪ ಕೇಳಿಬಂದಿದ್ದು ಹಿಂದೂ ದೇವತೆಗಳನ್ನು ಚಿತ್ರದಲ್ಲಿ ಕೆಟ್ಟದಾಗಿ ತೋರಿಸಲಾಗಿದೆ. ರಾಮ ಚರ್ಮದ ಉಡುಗೆಯನ್ನು ಧರಿಸಿ ಕೆಟ್ಟದಾಗಿ ಮಾತನಾಡುವಂತೆ ಚಿತ್ರಿಸಲಾಗಿದೆ. ಚಿತ್ರದಲ್ಲಿ ಕೀಳುಮಟ್ಟದ ಭಾಷೆ ಬಳಸಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಚಿತ್ರದ ಟೀಸರ್‌ನಲ್ಲಿ ಹನುಮಂತನನ್ನು ಮೊಘಲ್ ಮುಸ್ಲಿಮನಂತೆ ತೋರಿಸಲಾಗಿದೆ. ಹನುಮಂತನಿಗೆ ಮೀಸೆಯಿಲ್ಲದೇ ಗಡ್ಡವನ್ನು ಅಂಟಿಸಿದ್ದಾರೆ. ಈ ಅವತಾರದಲ್ಲಿರುವ ಹಿಂದೂ ಯಾರು? ಒಟ್ಟಾರೆಯಾಗಿ ಈ ಚಿತ್ರದಲ್ಲಿ ರಾಮ, ಸೀತೆ, ಹನುಮಂತ ಸೇರಿ ಬಹುತೇಕ ಎಲ್ಲವೂ ಇಸ್ಲಾಮೀಕರಣವಾಗಿದೆ. ಚಿತ್ರದಲ್ಲಿ ರಾವಣನಾಗಿ ನಟಿಸಿರುವ ಸೈಫ್ ಅಲಿ ಖಾನ್ ಖಿಲ್ಜಿಯಂತೆ ಕಾಣುತ್ತಾರೆ ಎಂದು ಆಕ್ಷೇಪಿಸಿದ್ದಾರೆ.

The head priest of Ram temple in Ayodhya has demanded an immediate ban on Bollywood movie ‘Adipurush’, alleging that it has wrongly portrayed Lord Ram, Hanuman and Ravana. A 1.46-minute teaser of the movie, based on the Hindu epic Ramayana, was launched in a grand ceremony in Ayodhya. However, it has been receiving blowback since then for a number of ‘issues’.The Vishva Hindu Parishad echoed Ayodhya priest priest Satyendra Das’s objections, and criticised the portrayal of Lord Ram, Lakshman and Ravana in the teaser of the film, claiming that it “ridiculed Hindu society".