ಬಾಂಗ್ಲಾದೇಶದಲ್ಲಿ ಕಾಳಿ ದೇಗುಲ ಧ್ವಂಸ ;  ವಿಗ್ರಹಗಳನ್ನು ಅರ್ಧ ಕಿಮೀ ದೂರ ಎಸೆದ ಕಿಡಿಗೇಡಿಗಳು ! 

09-10-22 12:09 pm       HK News Desk   ದೇಶ - ವಿದೇಶ

ದಸರ ಸಂಭ್ರಮ ಮುಕ್ತಾಯದ ಬೆನ್ನಲ್ಲಿಯೇ ಬಾಂಗ್ಲಾದೇಶದ ಜೆನೈದಾ ಜಿಲ್ಲೆಯ ದೌತಿಯಾ ಗ್ರಾಮದಲ್ಲಿ ಪ್ರಾಚೀನ ಕಾಲದ ಕಾಳಿ ದೇಗುಲವನ್ನು ಧ್ವಂಸಗೊಳಿಸಲಾಗಿದೆ. ಅದರಲ್ಲಿ ಇರುವ ಕಾಳಿ ವಿಗ್ರಹವನ್ನು ತುಂಡು ತುಂಡು ಮಾಡಿದ್ದಾರೆ.

ಢಾಕಾ, ಅ.9: ದಸರ ಸಂಭ್ರಮ ಮುಕ್ತಾಯದ ಬೆನ್ನಲ್ಲಿಯೇ ಬಾಂಗ್ಲಾದೇಶದ ಜೆನೈದಾ ಜಿಲ್ಲೆಯ ದೌತಿಯಾ ಗ್ರಾಮದಲ್ಲಿ ಪ್ರಾಚೀನ ಕಾಲದ ಕಾಳಿ ದೇಗುಲವನ್ನು ಧ್ವಂಸಗೊಳಿಸಲಾಗಿದೆ. ಅದರಲ್ಲಿ ಇರುವ ಕಾಳಿ ವಿಗ್ರಹವನ್ನು ತುಂಡು ತುಂಡು ಮಾಡಿದ್ದಾರೆ.

ಕಾಳಿ ಮಾತೆಯ ಶಿರವನ್ನು ದೇಗುಲದಿಂದ ಅರ್ಧ ಕಿಮೀ ದೂರದಲ್ಲಿ ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಢಾಕಾ ವಿವಿಯಲ್ಲಿ ಗಣಿತ ಶಾಸ್ತ್ರದ ಪ್ರಾಧ್ಯಾ ಪಕ ಚಂದನಾಥ್‌ ಪೊದ್ದರ್‌ ಮಾತನಾಡಿ ಇದೊಂದು ಖಂಡನೀಯ ಮತ್ತು ದುರ ದೃಷ್ಟಕರ ಘಟನೆ ಎಂದು ಹೇಳಿದ್ದಾರೆ. ಜೆನೈದಾ ಜಿಲ್ಲೆಯ ಸಹಾಯಕ ಪೊಲೀಸ್‌ ವರಿಷ್ಠಾ ಧಿಕಾರಿ ಅಮಿತ್‌ ಕುಮಾರ್‌ ಬರ್ಮನ್‌ ಮಾತನಾಡಿ ಪ್ರಕರಣದ ಬಗ್ಗೆ ಪೊಲೀಸರು ಕೇಸು ದಾಖಲಿಸಿ, ತನಿಖೆ ನಡೆಸಿದ್ದಾರೆ ಎಂದಿದ್ದಾರೆ.

ಮಾ.17ರಂದು ಢಾಕಾದಲ್ಲಿನ ಇಸ್ಕಾನ್‌ ದೇಗುಲದ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದರು. ಬಾಂಗ್ಲಾ ದೇಶದ ಒಟ್ಟು 16.19 ಕೋಟಿ ಜನಸಂಖ್ಯೆಯ ಪೈಕಿ ಶೇ.10 ಮಂದಿ ಹಿಂದೂಗಳಿದ್ದಾರೆ.

A few unidentified people vandalised an idol of a deity at a colonial-era Hindu temple in west Bangladesh, police said, adding they had launched a manhunt Authorities of the Kali temple in Dautiya village in Bangladeshs Jhenaidah district discovered the idol smashed into pieces on Friday. The miscreants had dumped the idols upper portion on a street, half a kilometer from the temples premises, said Sukumar Kunda, president of the temple committee.