ಯುಪಿಯಲ್ಲಿ 8,000 ಕೋಟಿ ರೂ. ರಸ್ತೆ ನಿರ್ಮಾಣದ ಪ್ಯಾಕೇಜ್ ಘೋಷಣೆ  ; ಅಮೆರಿಕಕ್ಕಿಂತಲೂ ಉತ್ತಮವಾದ ರಸ್ತೆಗಳ ನಿರ್ಮಾಣ ಪಕ್ಕಾ ಎಂದ ಗಡ್ಕರಿ ! 

09-10-22 01:35 pm       HK News Desk   ದೇಶ - ವಿದೇಶ

ಉತ್ತರ ಪ್ರದೇಶದಲ್ಲಿ 8,000 ಕೋಟಿ ರೂ. ವೆಚ್ಚದ  ರಸ್ತೆ ಯೋಜನೆ ಘೋಷಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, 2024ಕ್ಕೂ ಮುನ್ನ ಅಮೆರಿಕಕ್ಕಿಂತಲೂ ಉತ್ತಮವಾದ ರಸ್ತೆಗಳನ್ನು ರಾಜ್ಯದಲ್ಲಿ ನಿರ್ಮಿಸಲಾಗುವುದು ಎಂದಿದ್ದಾರೆ.

ಲಖನೌ, ಅ.9: ಉತ್ತರ ಪ್ರದೇಶದಲ್ಲಿ 8,000 ಕೋಟಿ ರೂ. ವೆಚ್ಚದ  ರಸ್ತೆ ಯೋಜನೆ ಘೋಷಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, 2024ಕ್ಕೂ ಮುನ್ನ ಅಮೆರಿಕಕ್ಕಿಂತಲೂ ಉತ್ತಮವಾದ ರಸ್ತೆಗಳನ್ನು ರಾಜ್ಯದಲ್ಲಿ ನಿರ್ಮಿಸಲಾಗುವುದು ಎಂದಿದ್ದಾರೆ.

ಭಾರತೀಯ ರಸ್ತೆ ಕಾಂಗ್ರೆಸ್‌ನ (ಐಆರ್‌ಸಿ) 81ನೇ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಕೇಂದ್ರ ಸಚಿವ ಗಡ್ಕರಿ, ತಮ್ಮ ಭಾಷಣದ ವೇಳೆ ಈ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

"ಉತ್ತರ ಪ್ರದೇಶದ ರಸ್ತೆಗಳನ್ನು 2024ಕ್ಕೂ ಮುನ್ನ ಅಮೆರಿಕದ ರಸ್ತೆಗಳಿಗಿಂತಲೂ ಉತ್ತಮವಾಗಿ ಮಾಡಬೇಕಿದೆ. ಇದಕ್ಕಾಗಿ ಮೋದಿ ಸರ್ಕಾರವು ಮುಂಬರುವ ದಿನಗಳಲ್ಲಿ ಉತ್ತರ ಪ್ರದೇಶಗಳಲ್ಲಿ ಐದು ಲಕ್ಷ ಕೋಟಿ ರೂ ಮಂಜೂರು ಮಾಡುತ್ತಿದೆ" ಎಂದು ಗಡ್ಕರಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ, ಇಂದು ಎಂಟು ಸಾವಿರ ಕೋಟಿ ರೂ ಮೌಲ್ಯದ ಯೋಜನೆ ನೀಡಲಾಗುತ್ತಿದೆ ಎಂದು ಗಡ್ಕರಿ ಘೋಷಿಸಿದ್ದಾರೆ. "ಇದರಲ್ಲಿ ಶಹಬಾದ್- ಹಾರ್ದೋರ್ ಬೈಪಾಸ್, ಶಹಜಾನ್ಪುರ- ಶಹಬಾದ್ ಬೈಪಾಸ್, ಮೊರದಾಬಾದ್- ಠಾಕೂರ್‌ದ್ವಾರಾ- ಕಾಶೀಪುರ ಬೈಪಾಸ್, ಗಾಜಿಪುರ- ಬಲ್ಲಿಯಾ ಬೈಪಾಸ್, 13 ಆರ್‌ಒಬಿಗಳು ಸೇರಿದಂತೆ ಒಟ್ಟು 8,000 ಕೋಟಿ ರೂ ಮಂಜೂರು ಮಾಡಲಾಗಿದೆ" ಎಂದು ತಿಳಿಸಿದ್ದಾರೆ.

India will hopefully get highways of American standard in next three years: Nitin  Gadkari, Auto News, ET Auto

ಇದು ಇನ್ನೂ ಆರಂಭವಷ್ಟೇ. ಇಡೀ ಸಿನಿಮಾ ಬರಬೇಕಿದೆ ಎಂದಿದ್ದಾರೆ. "ಉತ್ತಮ ರಸ್ತೆಗಳನ್ನು ನಿರ್ಮಿಸಲು ಸರ್ಕಾರದ ಬಳಿ ಹಣದ ಕೊರತೆ ಇಲ್ಲ" ಎಂದು ಹೇಳಿದ್ದಾರೆ.

"ಈ ಮೂರು ದಿನಗಳ ಐಆರ್‌ಸಿಯ ಸಮಾವೇಶವು ಎಂಜಿನಿಯರ್‌ಗಳು, ವೃತ್ತಿಪರರು ಮತ್ತು ಭಾರತ ಹಾಗೂ ವಿದೇಶಗಳ ರಸ್ತೆ ವಲಯದ ಪರಿಣತರು ಜತೆಯಾಗಿ ಬರಲು ಮತ್ತು ಸುರಕ್ಷತೆ ಹಾಗೂ ಸುಸ್ಥಿರ ರಸ್ತೆಗಳ ನಿರ್ಮಾಣದ ಕಡೆಗೆ ಪ್ರಯತ್ನ ಮಾಡುವುದರ ಜತೆ, ಪ್ರಧಾನ ನರೇಂದ್ರ ಮೋದಿ ಅವರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಯೋಜನೆ ಸಾಧಿಸಲು ಮಹತ್ವದ ಅವಕಾಶವಾಗಿದೆ" ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

ಲಖನೌದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದಲ್ಲಿ ಗಡ್ಕರಿ ಪರಾಮರ್ಶನಾ ಸಭೆ ಕೂಡ ನಡೆಸಿದ್ದಾರೆ. ಉತ್ತರ ಪ್ರದೇಶದಲ್ಲಿನ ಎಲ್ಲ ಹಾಲಿ ಮತ್ತು ಭವಿಷ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.

Union Road Transport and Highways Minister Nitin Gadkari on Friday gifted road projects worth ₹ 8,000 crore to Uttar Pradesh and said that the roads of State will be made better than America's before 2024.