ಬ್ರೇಕಿಂಗ್ ನ್ಯೂಸ್
09-10-22 06:00 pm HK News Desk ದೇಶ - ವಿದೇಶ
ಹೈದರಾಬಾದ್, ಅ.9: ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರಿಗೆ ಮಂತ್ರ-ತಂತ್ರಗಳ ಮೇಲೆ ನಂಬಿಕೆ ಜಾಸ್ತಿ. ತೆಲಂಗಾಣ ಕ್ಯಾಬಿನೆಟ್ನಲ್ಲಿ ಮಹಿಳೆಯರಿದ್ದರೇ ಒಳ್ಳೆಯದಲ್ಲ ಎಂದು ಯಾರೋ ಹೇಳಿದ್ದರಿಂದ 2014 ರಿಂದ 2018ರ ವರೆಗೂ ತೆಲಂಗಾಣ ಕ್ಯಾಬಿನೆಟ್ನಲ್ಲಿ ಮಹಿಳೆಯರನ್ನು ತೆಗೆದುಕೊಂಡಿರಲಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ಮಾಡಿದ್ದಾರೆ.
ಪ್ರತ್ಯೇಕ ತೆಲಂಗಾಣ ಸ್ಥಾಪನೆಗಾಗಿಯೇ ಪಕ್ಷವನ್ನು ರಚನೆ ಮಾಡಿದ್ದೆವು ಎಂದು ಹೇಳುತ್ತಿದ್ದ ಕೆಸಿಆರ್ ಇಂದು ಪಕ್ಷದ ಹೆಸರನ್ನೇ ಬದಲಿಸಿದ್ದಾರೆ. ಇದರ ಹಿಂದಿರುವ ಆಂತರ್ಯವೇನು ಎಂದು ಕೇಂದ್ರ ಸಚಿವೆ ಪ್ರಶ್ನೆ ಮಾಡಿದ್ದಾರೆ. ನೀರು, ನಿಧಿಗಳು, ನೇಮಕಾತಿಗಳು ಎಂಬ ಘೋಷ ವಾಕ್ಯದಡಿ ಟಿಆರ್ಎಸ್ ಪಕ್ಷ ಸ್ಥಾಪನೆ ಮಾಡಿ, ಅಧಿಕಾರಕ್ಕೆ ಬಂದ ಬಳಿಕ 3 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲ ಮಾಡಿ, ಆ ಭಾರವನ್ನು ಜನರ ಮೇಲೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಮಂತ್ರವಾದಿ ಹೇಳಿದ ಮಾತುಗಳಿಂದ ಪ್ರೇರಿತರಾಗಿ ಸಿಎಂ ಇದುವರೆಗೂ ಸಚಿವಾಲಯಕ್ಕೆ ಹೋಗದೆ, ಕೇವಲ ಫಾರ್ಮ್ ಹೌಸ್, ಪ್ರಗತಿ ಭವನಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಅಲ್ಲದೆ, ಈ ಹಿಂದೆ ಟಿಆರ್ಎಸ್ ಪಾರ್ಟಿ ತೆಲಂಗಾಣ ಜನರಿಗೆ ನೀಡಿರುವ ಭರವಸೆಗಳು ಏನಾಗಬೇಕು..? ತೆಲಂಗಾಣ ಮೇಲಿನ ಸೆಂಟಿಮೆಂಟ್ನಿಂದಲೇ ಜನರು ಟಿಆರ್ಎಸ್ ಪರ ವೋಟ್ ಹಾಕಿದ್ದರು. ಆದರೆ ಈಗ ಪಕ್ಷದಲ್ಲಿ ತೆಲಂಗಾಣ ಹೆಸರೇ ಇಲ್ಲದಂತೆ ಮಾಡಿದ್ದಾರೆ. ಸಿಎಂ ಆಗಿ ಇದ್ದಾಗಲೇ ಕೆಸಿಆರ್ ರಾಜ್ಯದ ಜನರಿಗೆ ಏನೂ ಮಾಡಿಲ್ಲ, ಇನ್ನು ದೇಶದ ಜನರಿಗೆ ಇವರು ಏನು ಮಾಡ್ತಾರೆ..? ತೆಲಂಗಾಣ ಜನರಿಗೆ ಸರಿಯಾದ ವ್ಯವಸ್ಥೆಗಳನ್ನು ಮಾಡದಿರೋರು ದೇಶದ ಜನರಿಗೆ ಏನೋ ಮಾಡ್ತಾರೆ ಅಂತ ಹೇಳಿದ್ರೆ ಯಾರು ನಂಬುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Union finance minister Nirmala Sitharaman alleged that KCR deliberately changed his party's name to Bharat Rashtra Samithi (BRS) "on the advice of Tantriks."
20-12-25 03:05 pm
Bangalore Correspondent
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 01:09 pm
Mangalore Correspondent
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm