ಬ್ರೇಕಿಂಗ್ ನ್ಯೂಸ್
12-10-22 09:58 pm HK News Desk ದೇಶ - ವಿದೇಶ
ಶ್ರೀನಗರ, ಅ.12: ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಆಯೋಗ ಕಸರತ್ತು ಆರಂಭಿಸಿದೆ. ಇದರ ನಡುವೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಕನಿಷ್ಠ ಒಂದು ವರ್ಷದಿಂದ ವಾಸ ಇರುವ ಹೊರ ರಾಜ್ಯದವರಿಗೂ ಮತದಾನದ ಹಕ್ಕು ನೀಡುವಂತೆ ರಾಜ್ಯ ಸರಕಾರ ಆದೇಶ ಮಾಡಿದೆ. ಈ ಬಗ್ಗೆ ಜಮ್ಮು ಜಿಲ್ಲಾಧಿಕಾರಿ ತನ್ನ ಜಿಲ್ಲೆಯ ಎಲ್ಲ ತಹಸೀಲ್ದಾರರಿಗೆ ಸೂಕ್ತ ದಾಖಲೆ ಪತ್ರಗಳನ್ನು ಪಡೆದು ಹಕ್ಕುಪತ್ರ ನೀಡುವಂತೆ ತಿಳಿಸಿದ್ದಾರೆ.
ವ್ಯಕ್ತಿ ಒಂದು ವರ್ಷದಿಂದ ವಾಸ ಇದ್ದೇನೆ ಅನ್ನುವುದನ್ನು ತೋರಿಸಲು ಯಾವುದೇ ಐಡಿ ಪ್ರೂಫ್ ಅನ್ನು ನೀಡಬೇಕಾಗುತ್ತದೆ. ಆಧಾರ್ ಕಾರ್ಡ್, ನೀರು, ವಿದ್ಯುತ್ ಬಿಲ್, ಗ್ಯಾಸ್ ಸಂಪರ್ಕ, ಬ್ಯಾಂಕ್ ಪಾಸ್ ಬುಕ್, ಪಾಸ್ ಪೋರ್ಟ್, ಭೂದಾಖಲೆ ಪತ್ರಗಳು ಇತ್ಯಾದಿ ದಾಖಲೆಯನ್ನು ಒದಗಿಸಿ ತಾವು ಅಲ್ಲಿನ ನಿವಾಸಿಯೆಂದು ತಹಸೀಲ್ದಾರ್ ಮೂಲಕ ರುಜು ಮಾಡಬೇಕಾಗುತ್ತದೆ. ತಹಸೀಲ್ದಾರ್ ನೀಡುವ ನಿವಾಸ ಪತ್ರದ ದಾಖಲೆ ಮುಂದಿಟ್ಟು ಮತದಾರ ಪತ್ರದಲ್ಲಿ ಹೆಸರು ಸೇರ್ಪಡೆ ಮಾಡಬಹುದು ಎಂದು ಅ.12ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಜಮ್ಮು ಕಾಶ್ಮೀರದಿಂದ ಹೊರಗೆ ವಲಸೆ ಹೋದವರು ಅಥವಾ ವಲಸೆ ಬಂದವರು ಅಥವಾ ಮರಣಗೊಂಡವರು ಮತದಾರ ಪತ್ರದಲ್ಲಿ ಸರಿಪಡಿಸಲು ಅವಕಾಶ ಇರುತ್ತದೆ ಎಂದೂ ಹೇಳಿದೆ. ರಾಜ್ಯ ಸರಕಾರದ ಹೊಸ ಆದೇಶದ ಬಗ್ಗೆ ಸ್ಥಳೀಯ ರಾಜಕೀಯ ಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ. ನ್ಯಾಶನಲ್ ಕಾನ್ಫರೆನ್ಸ್ ಪಕ್ಷವು, ಬಿಜೆಪಿ ಚುನಾವಣೆಯಲ್ಲಿ ಸೋಲು ಕಾಣುತ್ತದೆ ಎಂದು ತಿಳಿದು ಈ ರೀತಿ ಮಾಡುತ್ತಿದೆ. ಆದರೆ ಸೋಲನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ರಾಜ್ಯದಲ್ಲಿ 25 ಲಕ್ಷ ಹೊರಗಿನ ನಿವಾಸಿಗಳನ್ನು ಮತದಾರ ಪಟ್ಟಿಗೆ ಸೇರಿಸಲು ರಾಜ್ಯ ಸರಕಾರ ಮಾಡುತ್ತಿರುವ ಹುನ್ನಾರ ಎಂದೂ ಟೀಕಿಸಿದೆ.
ಕಳೆದ ಆಗಸ್ಟ್ ನಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದ ಜಮ್ಮು ಕಾಶ್ಮೀರದ ಮುಖ್ಯ ಚುನಾವಣಾಧಿಕಾರಿ ಹರ್ದೇಶ್ ಕುಮಾರ್, ರಾಜ್ಯದಲ್ಲಿ 25 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಲಿದ್ದಾರೆ. ಅದರಲ್ಲಿ ಹೊರಗಿನವರೂ ಇರಲಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆಗೆ ಬಿಜೆಪಿ ಹೊರತುಪಡಿಸಿ ಇತರೇ ರಾಜಕೀಯ ಪಕ್ಷಗಳು ತೀವ್ರ ವಿರೋಧ ತೋರಿದ್ದವು.
Letter issued by Deputy Commissioner of Jammu for acceptance of documents for registration as electors authorizes all tehsildars to issue certificate of residence to people residing in Jammu "for more than one year." pic.twitter.com/V958ZAQilm
— ANI (@ANI) October 12, 2022
The Deputy Commissioner of Jammu on Tuesday sent out an order authorising all tehsildars(revenue officials) to issue certificates of residence to anyone who has lived in the district for more than one year. The order said the decision was taken to ensure that no eligible voter is left for registration in the ongoing special summary revision of electoral rolls.
16-07-25 11:47 am
HK News Desk
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
16-07-25 01:01 pm
Mangalore Correspondent
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
16-07-25 11:42 am
Mangalore Correspondent
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm