ಗಾ‌ಂಧಿ ನಿಷ್ಠ ಖರ್ಗೆ, ಬದಲಾವಣೆ ಬಯಸುವ ಶಶಿ ತರೂರ್ ; ಯಾರಿಗೆ ಕಾಂಗ್ರೆಸ್ ಅಧ್ಯಕ್ಷ ಗಾದಿ ? 96 ಶೇ. ಮತದಾನ 

17-10-22 08:57 pm       HK News Desk   ದೇಶ - ವಿದೇಶ

137 ವರ್ಷಗಳ ಇತಿಹಾಸ ಇರುವ ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆದಿದೆ. ದೇಶದ ಎಲ್ಲ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಘಟಕದ ಚುನಾಯಿತ ಪ್ರತಿನಿಧಿಗಳು ಮತ ಚಲಾಯಿಸಿದ್ದಾರೆ.‌

ನವದೆಹಲಿ, ಅ.17: 137 ವರ್ಷಗಳ ಇತಿಹಾಸ ಇರುವ ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆದಿದೆ. ದೇಶದ ಎಲ್ಲ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಘಟಕದ ಚುನಾಯಿತ ಪ್ರತಿನಿಧಿಗಳು ಮತ ಚಲಾಯಿಸಿದ್ದಾರೆ.‌

ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆದಿದೆ. ದೇಶಾದ್ಯಂತ 65 ಮತಗಟ್ಟೆಗಳಲ್ಲಿ ಮತದಾನಕ್ಕೆ ಅವಕಾಶ ಮಾಡಲಾಗಿತ್ತು. ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ. ಗಾಂಧಿ ಕುಟುಂಬದ ನಿಷ್ಠ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದಲ್ಲಿ ಬದಲಾವಣೆ ಬಯಸುತ್ತಿರುವ ಸಂಸದ ಶಶಿ ತರೂರ್ ಮಧ್ಯೆ ನೇರ ಚುನಾವಣೆ ನಡೆದಿದ್ದು ಯಾರೇ ಅಧ್ಯಕ್ಷರಾದ್ರೂ ಗಾಂಧಿ ಕುಟುಂಬದ ಹೊರತಾದವರು ಪಕ್ಷದ ಚುಕ್ಕಾಣಿ ಹಿಡಿಯಲಿದ್ದಾರೆ. ಸುಮಾರು 137 ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆರನೇ ಬಾರಿಗೆ ಚುನಾವಣೆ ನಡೆದಿದ್ದು, ನೇರವಾಗಿ ಪಿಸಿಸಿ ಮತ್ತು ಎಐಸಿಸಿ ಪ್ರತಿನಿಧಿಗಳು ಅಧ್ಯಕ್ಷರ ಆಯ್ಕೆ ನಡೆಸಲಿದ್ದಾರೆ. ಒಟ್ಟು 9500 ಮತದಾರರ ಪೈಕಿ 96 ಶೇ. ಮತದಾನ ಆಗಿದೆ. 

About 9,500 Congress delegates voted in party's presidential poll

ಮತದಾನ ಮುಕ್ತಾಯದ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯುತ್ತಮವಾಗಿ ನಡೆದಿದೆ. ಒಟ್ಟು 9,500 ಪ್ರತಿನಿಧಿಗಳು ಮತ ಚಲಾಯಿಸಿದ್ದಾರೆ. ಶೇ. 96 ರಷ್ಟು ಮತದಾನವಾಗಿದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ 503 ಮತಗಳಿದ್ದು, 501 ಮತಗಳು ಚಲಾವಣೆಗೊಂಡಿವೆ. ನಿವೇದಿತ್ ಆಳ್ವ ಹಾಗೂ ಪ್ರಶಾಂತ್ ದೇಶಪಾಂಡೆ ವಿದೇಶದಲ್ಲಿದ್ದ ಕಾರಣ, ಅವರು ಮತದಾನ ಮಾಡಿಲ್ಲ. ಅಂದಹಾಗೆ, ಸೋನಿಯಾ ಗಾಂಧಿ ಅಧ್ಯಕ್ಷ ಗಾದಿಗೇರಿದ 22 ವರ್ಷಗಳ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗಿದೆ. 

Shashi Tharoor Could Lose, But Congress under Mallikarjun Kharge Should  Adopt His 10 'Ideas'

ಯಾರಿಗೆ ಮತದಾನ ಅವಕಾಶ ? 

ಕಾಂಗ್ರೆಸ್ ಪಕ್ಷದ ಪ್ರತೀ ಬ್ಲಾಕ್ ಮಟ್ಟದಲ್ಲಿ ಒಬ್ಬರು ಪ್ರದೇಶ ಕಾಂಗ್ರೆಸ್ ಘಟಕದ ಸದಸ್ಯರು ಇರುತ್ತಾರೆ. ಕರ್ನಾಟಕದಲ್ಲಿ 448 ಬ್ಲಾಕ್ ಗಳಿದ್ದೂ ಅಷ್ಟೂ ಸದಸ್ಯರು ಮತದಾನಕ್ಕೆ ಅರ್ಹರು. ಉಳಿದಂತೆ, ಎಐಸಿಸಿ ಪ್ರತಿನಿಧಿಗಳಿಗೂ ಮತದಾನದ ಅವಕಾಶ ಇದೆ. ಒಟ್ಟು 503 ಮಂದಿ ಸದಸ್ಯರು ಕರ್ನಾಟಕದಲ್ಲಿ ಅಧ್ಯಕ್ಷರ ಆಯ್ಕೆಗೆ ಮತ ಚಲಾಯಿಸಲು ಅರ್ಹತೆ ಹೊಂದಿದ್ದರು.

"I am standing for change", Congress presidential poll candidate Shashi Tharoor said on Monday after casting his vote along with 264 other party delegates from the state. Of the total 310 delegates in Kerala, 264 cast their vote till 1 PM in favour of either Tharoor or his rival Mallikarjun Kharge, who has been openly supported by the senior party leaders in the southern state. Polling will end at 4 PM. Prior to casting his vote, Tharoor told reporters here that there is a need for a change in how the party functions and this poll was part of that.