ಬ್ರೇಕಿಂಗ್ ನ್ಯೂಸ್
18-10-22 05:36 pm HK News Desk ದೇಶ - ವಿದೇಶ
ಚೆನ್ನೈ, ಅ.18: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಪ್ರಕರಣದಲ್ಲಿ ಆಕೆಯ ಸ್ನೇಹಿತೆ ಶಶಿಕಲಾ ಅವರ ಕೈವಾಡದ ಬಗ್ಗೆ ಆರೋಪ ಕೇಳಿಬಂದಿದೆ. ಈ ಬಗ್ಗೆ ನ್ಯಾಯಮೂರ್ತಿ ಆರ್ಮುಗಸ್ವಾಮಿ ತನಿಖಾ ಆಯೋಗದ ವರದಿಯನ್ನು ತಮಿಳುನಾಡು ಅಸೆಂಬ್ಲಿಯಲ್ಲಿ ಮಂಡನೆ ಮಾಡಲಾಗಿದೆ.
ಅರ್ಮುಗಸ್ವಾಮಿ ತನಿಖಾ ಆಯೋಗದ ವರದಿಯಲ್ಲಿ ಜಯಲಲಿತಾ ಸಾವಿನಲ್ಲಿ ಆಗಿನ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಸಿ.ವಿಜಯಭಾಸ್ಕರ್, ಆರೋಗ್ಯ ಇಲಾಖೆಯ ಸೆಕ್ರಟರಿಯಾಗಿದ್ದ ಜೆ.ರಾಧಾಕೃಷ್ಣನ್ ಮತ್ತು ಚಿಕಿತ್ಸೆ ನೀಡಿದ್ದ ಕೆ.ಎಸ್ ಶಿವಕುಮಾರ್ ಕಡೆಯಿಂದ ತಪ್ಪಾಗಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಯೋಗದ ವರದಿಯಲ್ಲಿ ಸರಕಾರಕ್ಕೆ ಆಗ್ರಹ ಮಾಡಲಾಗಿದೆ.

ಸರಕಾರದ ಮುಖ್ಯ ಕಾರ್ಯದರ್ಶಿ ರಾಮಮೋಹನ್ ರಾವ್ ಮತ್ತು ಚಿಕಿತ್ಸೆ ನೀಡಿದ್ದ ಇನ್ನಿತರ ವೈದ್ಯರ ವಿರುದ್ಧವೂ ತನಿಖೆಗೆ ಶಿಫಾರಸು ಮಾಡಲಾಗಿದೆ. ಜಯಲಲಿತಾ ಸಾವಿನ ಸಂದರ್ಭದಲ್ಲಿ ಆರೋಗ್ಯ ಸಚಿವರಾಗಿದ್ದ ವಿಜಯಭಾಸ್ಕರ್ ಹಾಲಿ ಶಾಸಕರು ಮತ್ತು ಎಐಎಡಿಎಂಕೆ ನಾಯಕರಾಗಿದ್ದಾರೆ. ಅರ್ಮುಗಸ್ವಾಮಿ ಆಯೋಗವು ಈ ಹಿಂದೆಯೇ ತನ್ನ ವರದಿಯನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ನೀಡಿತ್ತು. ಇದೀಗ ತಮಿಳುನಾಡು ವಿಧಾನಸಭೆಯಲ್ಲಿ ವರದಿಯನ್ನು ಮಂಡಿಸಲಾಗಿದೆ.
ವರದಿಯಲ್ಲಿ ಹಿಂದಿನ ಮುಖ್ಯಮಂತ್ರಿಯಾಗಿದ್ದವರು ಜಯಲಲಿತಾ ಅವರನ್ನು ವಿದೇಶಕ್ಕೆ ಯಾಕೆ ಚಿಕಿತ್ಸೆಗೆ ಒಯ್ಯಲಿಲ್ಲ ಎಂದು ಪ್ರಶ್ನೆ ಮಾಡಲಾಗಿದೆ. ಚಿಕಿತ್ಸೆ ನೀಡುತ್ತಿದ್ದ ಇಂಗ್ಲೆಂಡಿನ ವೈದ್ಯ ಡಾ.ರಿಚರ್ಡ್ ಬೀಲೆ ಅವರು ವಿದೇಶಕ್ಕೆ ಚಿಕಿತ್ಸೆ ಒಯ್ಯಲು ಶಿಫಾರಸು ಮಾಡಿದ್ದರೂ, ಸರಕಾರ ನಿರ್ಲಕ್ಷ್ಯ ವಹಿಸಿತ್ತು. ಇನ್ನೊಂದೆಡೆ, ರಾಜ್ಯ ಸರಕಾರದ ಅಹವಾಲಿನಂತೆ ಅಮೆರಿಕ ಮತ್ತು ಇಂಗ್ಲೆಂಡಿನ ಪರಿಣತ ವೈದ್ಯರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ಕರೆಸಲಾಗಿತ್ತು. ಆಂಜಿಯೋಪ್ಲಾಸ್ಟಿ ನಡೆಸುವುದಕ್ಕೆ ಸಿದ್ಧತೆ ನಡೆಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಆಂಜಿಯೋಪ್ಲಾಸ್ಟಿ ನಡೆಸದೆ ನಿರ್ಲಕ್ಷ್ಯ ಮಾಡಲಾಗಿತ್ತು. ಕೆಲವು ಸ್ಥಾಪಿತ ಹಿತಾಸಕ್ತಿಗಳ ಒತ್ತಡಕ್ಕೆ ಕಟ್ಟುಬಿದ್ದು ವೈದ್ಯರು ಶಸ್ತ್ರಚಿಕಿತ್ಸೆಯನ್ನು ಮುಂದೂಡಿದ್ದರು. ಇದಕ್ಕಾಗಿ ಇವೆಲ್ಲ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಯೋಗ ತನ್ನ 500 ಪುಟಗಳ ವರದಿಯಲ್ಲಿ ಸರಕಾರಕ್ಕೆ ಶಿಫಾರಸು ಮಾಡಿದೆ.

2011ರ ಬಳಿಕ ಶಶಿಕಲಾ ಅವರನ್ನು ಎಐಎಡಿಎಂಕೆ ಪಕ್ಷದಿಂದ ಉಚ್ಚಾಟಿಸಿದ್ದಲ್ಲದೆ, ಜಯಲಲಿತಾ ಅವರು ತಮ್ಮ ಪೋಯೆಸ್ ಗಾರ್ಡನ್ ನಿವಾಸದಿಂದ ಹೊರಕ್ಕೆ ಇರಿಸಿದ್ದರು. ಆವತ್ತಿನಿಂದಲೇ ಇವರ ನಡುವೆ ಸಂಬಂಧ ಹಳಸಿತ್ತು. ಆನಂತರ, ಸಂಬಂಧ ಸರಿಯಾಗಿದ್ದರೂ ಜಯಲಲಿತಾ, ಶಶಿಕಲಾ ಅವರನ್ನು ಅಧಿಕಾರ ವಲಯದಿಂದ ದೂರವೇ ಇಟ್ಟಿದ್ದರು. ಇದೇ ಹಗೆತನದಲ್ಲಿ ಶಶಿಕಲಾ ಕೊನೆಗೆ ಬೆನ್ನಿಗೆ ಇರಿದಿದ್ದಾರೆ ಎನ್ನುವ ಶಂಕೆ ಮೂಡಿದೆ. 2016ರ ಸೆಪ್ಟಂಬರ್ ತಿಂಗಳಲ್ಲಿ ತಮ್ಮ ನಿವಾಸದಿಂದಲೇ ಜಯಲಲಿತಾ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರಿಗೆ ಏನಾಗಿತ್ತು ಅನ್ನುವುದು ಕೊನೆಯ ವರೆಗೂ ನಿಶ್ಚಿತ ವರದಿಯನ್ನು ವೈದ್ಯರು ನೀಡಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಅವರು ಡಿಸೆಂಬರ್ 5ರಂದು ಮೃತಪಟ್ಟಿದ್ದಾಗಿ ರಾಜ್ಯ ಸರಕಾರ ಘೋಷಣೆ ಮಾಡಿತ್ತು. ಈ ನಡುವೆ, ಅವರಿಗೆ ನೀಡಿದ್ದ ಚಿಕಿತ್ಸೆ, ವೈದ್ಯರ ನಿರ್ಲಕ್ಷ್ಯ, ವಿದೇಶಕ್ಕೆ ಒಯ್ಯದೆ ಶಸ್ತ್ರ ಚಿಕಿತ್ಸೆ ಮುಂದೂಡಿರುವುದು ಶಂಕೆಗೀಡು ಮಾಡಿದ್ದು, ಈ ಬಗ್ಗೆ ತನಿಖೆಗೆ ಆಯೋಗ ಸರಕಾರಕ್ಕೆ ಶಿಫಾರಸು ಮಾಡಿದೆ.
The Tamil Nadu government on Tuesday tabled the report of the Justice A Arumughaswamy Commission of Inquiry that probed into the circumstances that led to the death of former Tamil Nadu chief minister J Jayalalithaa in 2016.In a lengthy report, the Commission slammed at least one top government official, VK Sasikala, the close aide of the politician who lived with her, and concluded that an investigation must be done.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 07:49 pm
Mangalore Correspondent
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm