ಕನ್ನಡಿಗ ರೋಜರ್ ಬಿನ್ನಿ ಈಗ BCCI ನೂತನ ಕ್ಯಾಪ್ಟನ್ ! 

18-10-22 07:13 pm       HK News Desk   ದೇಶ - ವಿದೇಶ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನೂತನ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ  ನೇಮಕಗೊಂಡಿದ್ದಾರೆ.

ಮುಂಬೈ, ಅ.18: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನೂತನ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ  ನೇಮಕಗೊಂಡಿದ್ದಾರೆ.

ಬಿನ್ನಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಏಕೈಕ ಅಭ್ಯರ್ಥಿಯಾಗಿದ್ದರು. ಸೌರವ್ ಗಂಗೂಲಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬಿಸಿಸಿಐ (BCCI) ಅಧ್ಯಕ್ಷರಾಗಿ ಬಿನ್ನಿ ನೇಮಕಗೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ 2ನೇ ಅವಧಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿದಿದ್ದಾರೆ. ರಾಜೀವ್ ಶುಕ್ಲ ಬಿಸಿಸಿಐ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ.

ಭಾರತ-ಪಾಕಿಸ್ತಾನ ಪಂದ್ಯ| ತ್ರಿವರ್ಣ ಧ್ವಜ ಹಿಡಿಯಲು ಅಮಿತ್‌ ಶಾ ಪುತ್ರ ನಿರಾಕರಣೆ,  ವಿಡಿಯೋ ವೈರಲ್‌, ವ್ಯಾಪಕ ಟೀಕೆ | Eedina | ಈದಿನ

1955 ಜುಲೈ 19ರಂದು ಜನಿಸಿದ ರೋಜರ್ ಬಿನ್ನಿ 1979ರಿಂದ 1987ರ ವರೆಗೆ ಭಾರತ ಕ್ರಿಕೆಟ್ ತಂಡದಲ್ಲಿದ್ದರು. ಈವರೆಗೆ 27 ಟೆಸ್ಟ್ ಪದ್ಯಗಳಲ್ಲಿ 830 ರನ್‌ಗಳಿಸಿ, ಬೌಲಿಂಗ್‌ನಲ್ಲಿ 47 ವಿಕೆಟ್ ಪಡೆದಿದ್ದಾರೆ. 72 ಏಕದಿನ ಕ್ರಿಕೆಟ್ ಪಂದ್ಯದಲ್ಲಿ 629 ರನ್ ಗಳಿಸಿ, 77 ವಿಕೆಟ್ ಪಡೆದು ಮಿಂಚಿದ್ದಾರೆ. 

ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಧ್ಯಕ್ಷ ಸ್ಥಾನಕ್ಕೆ ಭಾರತದ ಪ್ರತಿನಿಧಿಯಾಗಿ ಸ್ಪರ್ಧಿಸಬೇಕೆಂದ ಧ್ವನಿ ಹೆಚ್ಚಾಗುತ್ತಿದೆ. ಈಗಾಗಲೇ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರ ಬರೆದು ಗಂಗೂಲಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು.

1983 World Cup veteran Roger Binny has been appointed as the new president of the Board of Control for Cricket in India (BCCI). Binny takes over reins from the former Indian cricket team captain Sourav Ganguly on Tuesday. Binny was appointed as the BCCI top boss at the Annual General Meeting of the cricket board at Mumbai’s Taj Hotel today.