ಬ್ರೇಕಿಂಗ್ ನ್ಯೂಸ್
19-10-22 02:39 pm HK News Desk ದೇಶ - ವಿದೇಶ
ನವದೆಹಲಿ, ಅ.19 : ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಗಂಭೀರ ಅಕ್ರಮ ನಡೆದಿದೆ ಎಂಬ ಬಗ್ಗೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಅಧ್ಯಕ್ಷ ಅಭ್ಯರ್ಥಿ ಶಶಿ ತರೂರ್ ಪರ ಏಜಂಟರು, ಕೇಂದ್ರೀಯ ಚುನಾವಣಾ ಸಮಿತಿಗೆ ಬರೆದಿರುವ ದೂರು ಪತ್ರ ಮಾಧ್ಯಮಕ್ಕೆ ಲೀಕ್ ಆಗಿದೆ.
ಈ ಬಗ್ಗೆ ಶಶಿ ತರೂರ್ ಟ್ವೀಟ್ ಮೂಲಕ ಸ್ಪಷ್ಟನೆ ಕೊಟ್ಟಿದ್ದು ಇದು ಪಕ್ಷದ ಒಳಗಿನ ವಿಷಯ. ದೂರು ಕೊಟ್ಟಿರುವುದು ಮಾಧ್ಯಮಕ್ಕೆ ಲೀಕ್ ಆಗಿದ್ದು ಹೇಗೆಂದು ತನಿಖೆ ನಡೆಯಬೇಕು. ಆದರೆ ಈ ಚುನಾವಣೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿದೆ. ಮತ್ತಷ್ಟು ಒಗ್ಗಟ್ಟು ಮಾಡಿಸಿದೆ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ತರೂರ್ ಪರ ಚುನಾವಣಾ ಪ್ರಚಾರ ಮ್ಯಾನೇಜರ್ ಆಗಿದ್ದ ಸಲ್ಮಾನ್ ಸೋಜ್, ಅಲ್ಲಿನ ಮತಗಟ್ಟೆಯಲ್ಲಿ ಅಕ್ರಮ ಆಗಿರುವ ಬಗ್ಗೆ ನಮ್ಮ ತಂಡವು ಕೇಂದ್ರಕ್ಕೆ ದೂರು ಪತ್ರ ಬರೆದಿತ್ತು. ಈ ಬಗ್ಗೆ ತನಿಖೆ ನಡೆಸುವುದಾಗಿ ಕೇಂದ್ರ ತಂಡ ಹೇಳಿದೆ. ನಾವು ಫಲಿತಾಂಶ ಎದುರು ನೋಡುತ್ತಿದ್ದೇವೆ ಎಂದರು.
ಉತ್ತರ ಪ್ರದೇಶದ ಲಕ್ನೋದಲ್ಲಿ ತರೂರ್ ಪರ ಪ್ರತಿನಿಧಿಗಳು ಇರಲಿಲ್ಲ. ಅಲ್ಲಿ ಚುನಾವಣಾ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಕೆಲವರು ಮತಗಟ್ಟೆಗೆ ಬಂದಾಗ, ಮತ ಹಾಕಲು ಬಿಡಲಿಲ್ಲ. ಅದಕ್ಕೂ ಮೊದಲೇ ಒಂದಷ್ಟು ಮಂದಿ ಮತ ಹಾಕಿದ್ದರು. ನಮ್ಮ ಏಜಂಟರು ಅಲ್ಲಿಗೆ ತೆರಳಿದಾಗ, ಒಳಗೆ ಹೋಗಲು ಬಿಡಲಿಲ್ಲ. ನಮ್ಮ ಏಜಂಟರನ್ನು ಅಲ್ಲಿದ್ದವರು ಬೆದರಿಸಿದ್ದಾರೆ ಎಂದು ದೂರು ಪತ್ರದಲ್ಲಿ ಹೇಳಿದ್ದಾರೆ.
ಮಧ್ಯಾಹ್ನ ಮೂರು ಗಂಟೆ ವೇಳೆಗೆ ಫಲಿತಾಂಶ ಬರಲಿದ್ದು ಬಹುತೇಕ ಮಲ್ಲಿಕಾರ್ಜುನ ಖರ್ಗೆ ಗೆಲ್ಲಲಿದ್ದಾರೆ. ತರೂರ್ ಪರವಾಗಿ ಕೆಲವು ರಾಜ್ಯಗಳಲ್ಲಿ ಪ್ರಚಾರ ನಡೆದಿದ್ದರೂ ಹೆಚ್ಚಿನ ಕಡೆ ಕಾಂಗ್ರೆಸ್ ಹೈಕಮಾಂಡ್ ಪರ ಖರ್ಗೆ ಅಭ್ಯರ್ಥಿ ಎನ್ನುವ ರೀತಿ ಬಿಂಬಿಸಲಾಗಿತ್ತು. ಹೀಗಾಗಿ ಖರ್ಗೆಯೇ ಗೆಲ್ಲುವುದು ಖಚಿತ ಎನ್ನಲಾಗುತ್ತಿದೆ.
As the counting for Congress’ top post at AICC headquarters in New Delhi is underway, the Shashi Tharoor-led camp has alleged irregularities in UttarPradesh. On October 19, Congress leader Salman Soz, on behalf of Lok Sabha MP, Shashi Tharoor, wrote a letter to Central Election Authority chairman Madhusudan Mistry alleging “extremely serious irregularities” in the conduct of the election process in Uttar Pradesh.
09-04-26 09:30 pm
HK News Staffer
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
09-04-26 11:03 pm
HK News Staffer
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
09-04-26 09:16 pm
HK News Staffer
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm