ಬ್ರೇಕಿಂಗ್ ನ್ಯೂಸ್
25-10-22 06:19 pm HK News Desk ದೇಶ - ವಿದೇಶ
ನವದೆಹಲಿ, ಅ.25: ವಾಟ್ಸಪ್ ಜಾಲತಾಣ ಇಂದು ಮಧ್ಯಾಹ್ನ ಎರಡು ಗಂಟೆಗಳ ಕಾಲ ಸರ್ವರ್ ಡೌನ್ ಆಗಿ ದೇಶಾದ್ಯಂತ ಕೋಟ್ಯಂತರ ಬಳಕೆದಾರರು ಪರದಾಟ ನಡೆಸುವಂತಾಯಿತು. ಮಧ್ಯಾಹ್ನ 12ರಿಂದ ಎರಡು ಗಂಟೆ ಕಾಲ ಜನರು ವಾಟ್ಸಪ್ ಮೆಸೇಜ್ ಆಗಲೀ, ವಾಟ್ಸಪ್ ಕರೆಯನ್ನಾಗಲೀ ಮಾಡಲು ಸಾಧ್ಯವಾಗಲಿಲ್ಲ. ವಾಟ್ಸಪ್ ಸಂದೇಶ ಹೋಗದೆ ಕೆಲವರು ತಮ್ಮ ಮೊಬೈಲ್ ಏನೋ ಎಡವಟ್ಟು ಮಾಡಿಕೊಂಡಿದ್ಯೋ ಅಂತ ಸಂಶಯಕ್ಕೀಡಾದರೆ, ಇನ್ನು ಕೆಲವರು ವಾಟ್ಸಪ್ ಸಮಸ್ಯೆಗೀಡಾಗಿದ್ದನ್ನು ಅರಿತು ಹಿಡಿಶಾಪ ಹಾಕಿದರು.
ವಾಟ್ಸಪ್ ಬಳಕೆದಾರರು ಕೂಡಲೇ ಮಾತೃಕಂಪೆನಿ ಮೆಟಾಗೆ ಮೆಸೇಜ್ ಹಾಕಿದ್ರು. ವಾಟ್ಸಪ್ ಸರ್ವರ್ ಡೌನ್ ಅಂತ ಬರೆದು ಟ್ವಿಟರ್ ನಲ್ಲಿ ಕಮೆಂಟ್ ಹಾಕಿದ್ದು ಭಾರೀ ಟ್ರೆಂಡ್ ಆಗಿತ್ತು. ಆನಂತರ, ವಾಟ್ಸಪ್ ಕಂಪನಿಯ ವಕ್ತಾರರು ಶೀಘ್ರದಲ್ಲೇ ಸರಿ ಪಡಿಸಲಾಗುವುದು ಎಂದು ಹೇಳಿಕೆ ಬಿಡುಗಡೆ ಮಾಡಿದರು. ವಾಣಿಜ್ಯ ಬಳಕೆಯ ವಾಟ್ಸಪ್ ಬಳಕೆದಾರರು ದಿಢೀರ್ ಸರ್ವರ್ ಸಮಸ್ಯೆ ಆಗಿದ್ದರಿಂದ ಕಷ್ಟ ಪಡಬೇಕಾಯಿತು. ಇದೇ ವೇಳೆ, ಮೆಟಾ ಕಂಪನಿಯಿಂದಲೇ ನಡೆಸಲ್ಪಡುವ ಫೇಸ್ಬುಕ್, ಇನ್ ಸ್ಟಾಗ್ರಾಮ್, ಮೆಸೆಂಜರ್, ಟ್ವಿಟರ್ ಜಾಲತಾಣಗಳಲ್ಲಿ ಯಾವುದೇ ಸಮಸ್ಯೆ ಆಗಿರಲಿಲ್ಲ. ವಾಟ್ಸಪ್ ಡೌನ್ ಅನ್ನುವುದು ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿತ್ತು. ಲಕ್ಷಾಂತರ ಜನರು ಅದೇ ಪೋಸ್ಟನ್ನು ಷೇರ್ ಮಾಡಿದ್ದರು.
ಏನಾಗಿತ್ತು ವಾಟ್ಸಪ್ ಸಮಸ್ಯೆ
ಮೆಟಾ ಕಂಪನಿ ಇನ್ನೂ ವಾಟ್ಸಪ್ ಸಮಸ್ಯೆಗೆ ಖಚಿತ ಕಾರಣ ಏನೆಂದು ಹೇಳಿಲ್ಲ. ವಾಟ್ಸಪ್ ಸಮಸ್ಯೆಗೀಡಾಗಿದ್ದು ಇದು ಮೊದಲೇನಲ್ಲ. ಕಳೆದ 2021ರ ಅಕ್ಟೋಬರ್ ನಲ್ಲಿ ಇದೇ ರೀತಿ ವಾಟ್ಸಪ್ ಸರ್ವರ್ ಡೌನ್ ಆಗಿ ಸ್ತಬ್ಧ ಆಗಿತ್ತು. ಆಗ ಡಿಎನ್ಎಸ್ ವೈಫಲ್ಯದಿಂದಾಗಿ ಸಮಸ್ಯೆ ಆಗಿತ್ತು ಎಂದು ಕಂಪನಿ ಹೇಳಿಕೊಂಡಿತ್ತು. ಇಂದು ಮಧ್ಯಾಹ್ನ ಎರಡು ಗಂಟೆ ನಂತರ ಸಮಸ್ಯೆ ಸ್ವಲ್ಪ ಮಟ್ಟಿಗೆ ಸರಿಯಾಗಿತ್ತು. ಆದರೆ ಕೆಲವು ಭಾಗದಲ್ಲಿ ಆನಂತರವೂ ಸಮಸ್ಯೆ ಮುಂದುವರಿದಿತ್ತು. ಭಾರತದಲ್ಲಿ ಅತಿ ಹೆಚ್ಚು ವಾಟ್ಸಪ್ ಬಳಕೆದಾರರಿದ್ದು ಇಡೀ ಜಗತ್ತಿನಲ್ಲಿ ಹೋಲಿಸಿದರೆ ಭಾರತದಲ್ಲಿಯೇ ಹೆಚ್ಚು ಬಳಕೆದಾರರಿದ್ದಾರೆ.
#WhatsApp is working now
— Priya Singh (@priyasi90) October 25, 2022
WhatsApp went down in a major outage affecting the communications app for two hours today. The service started experiencing issues at around 3AM ET, with users greeted with a “connecting” message. WhatsApp web also showed a “make sure your computer has an active internet connection” error. The issues affected users globally, and were resolved around 5AM ET.
16-07-25 07:05 pm
Bangalore Correspondent
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
16-07-25 01:01 pm
Mangalore Correspondent
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
16-07-25 04:37 pm
HK News Desk
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm