ಬ್ರೇಕಿಂಗ್ ನ್ಯೂಸ್
29-10-22 07:31 pm HK News Desk ದೇಶ - ವಿದೇಶ
ಇಂದೋರ್, ಅ.29 : ಪ್ರಿಯಕರ ಕಾಣಲು ಸಿಕ್ಕಿಲ್ಲ, ಫೋನ್ ರಿಸೀವ್ ಮಾಡಿಲ್ಲ ಎಂದು ನೊಂದುಕೊಂಡ 16 ವರ್ಷದ ವಿದ್ಯಾರ್ಥಿನಿ ತನ್ನ ಗೆಳತಿಯರ ಜೊತೆ ಸೇರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದೋರ್ ನಗರದಲ್ಲಿ ನಡೆದಿದೆ.
ಶಾಲೆಗೆ ಚಕ್ಕರ್ ಹೊಡೆದ 16 ವರ್ಷದ ಮೂವರು ಬಾಲಕಿಯರು ಒಟ್ಟಿಗೆ ವಿಷ ಸೇವಿಸಿದ್ದಾರೆ. ಈ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಒಬ್ಬಳ ಸ್ಥಿತಿ ಗಂಭೀರವಾಗಿದೆ. ಸೆಹೋರ್ ಜಿಲ್ಲೆಯ ಅಷ್ಟಾ ಪಟ್ಟಣದಲ್ಲಿ ಒಂದೇ ಶಾಲೆಯಲ್ಲಿ ಓದುತ್ತಿದ್ದ ಮೂವರು ಬಾಲಕಿಯರು ಶುಕ್ರವಾರ ಶಾಲೆಗೆ ರಜೆ ಹಾಕಿ 120 ಕಿ.ಮೀ ದೂರದ ಇಂದೋರ್ ಗೆ ಬಸ್ ನಲ್ಲಿ ಪ್ರಯಾಣಿಸಿದ್ದರು. ಅಲ್ಲಿ ವಿಷದ ಬಾಟಲ್ ಖರೀದಿಸಿ ನಿರ್ಜನ ಪ್ರದೇಶಕ್ಕೆ ತೆರಳಿ ವಿಷ ಸೇವನೆ ಮಾಡಿದ್ದಾರೆ. ಈ ಪೈಕಿ ಇಬ್ಬರು ನಿನ್ನೆ ರಾತ್ರಿ ಸಾವನ್ನಪ್ಪಿದ್ದರೆ, ಮತ್ತೊಬ್ಬಳು ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಳೆ. ಹದಿಹರೆಯದ ಹುಡುಗಿಯರು ವಿಷ ಸೇವಿಸಿರುವುದಕ್ಕೆ ಕಾರಣ ತಿಳಿದು ಪೊಲೀಸರು ಶಾಕ್ ಆಗಿದ್ದಾರೆ.
ಈ ಪೈಕಿ ಒಬ್ಬಳು ಹುಡುಗಿಗೆ ಇಂದೋರ್ ನಗರದ ಯುವಕನ ಜೊತೆಗೆ ಪ್ರೀತಿ ಇತ್ತು. ಆತ ಫೋನ್ ರಿಸೀವ್ ಮಾಡುತ್ತಿಲ್ಲ ಎಂದು ತನ್ನ ಗೆಳತಿಯರ ಜೊತೆಗೆ ಬಸ್ಸಿನಲ್ಲಿ ಹುಡುಗಿ ಬಂದಿದ್ದಳು. ಫೋನ್ ರಿಸೀವ್ ಮಾಡದೇ ಇದ್ದರೆ ಸಾಯುತ್ತೇನೆಂದು ಅಲ್ಲಿಯೇ ವಿಷ ಖರೀದಿಸಿ ಪಾರ್ಕ್ ಒಂದಕ್ಕೆ ಜೊತೆಯಾಗಿ ತೆರಳಿದ್ದರು. ಆ ಹುಡುಗಿ, ಪ್ರಿಯಕರ ಫೋನ್ ತೆಗೆಯುತ್ತಿಲ್ಲ ಎಂದು ಕಾರಣವೊಡ್ಡಿ ವಿಷ ಕುಡಿದಿದ್ದಾಳೆ. ಆಕೆಯ ಕ್ಲೋಸ್ ಫ್ರೆಂಡ್ ಆಗಿದ್ದ ಇನ್ನೊಬ್ಬ ಹುಡುಗಿ ತನ್ನ ಗೆಳತಿ ಸಾಯುತ್ತಿದ್ದಾಳೆ, ಆಕೆಯನ್ನು ಬಿಟ್ಟಿರಲಾರೆ ಎಂದು ನೊಂದು ತಾನೂ ವಿಷ ಕುಡಿದಿದ್ದಾಳೆ. ಇದನ್ನು ನೋಡಿದ ಮತ್ತೊಬ್ಬ ಹುಡುಗಿ, ತನ್ನ ಮನೆಯಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನಾನು ಕೂಡ ಸಾಯ್ತೀನಿ ಅಂತ ವಿಷ ಸೇವನೆ ಮಾಡಿದ್ದಾಳೆ. ಪಾರ್ಕಿನಲ್ಲಿ ವಿಷ ಸೇವಿಸಿ ನರಳಾಡುತ್ತಿದ್ದವರನ್ನು ಸ್ಥಳೀಯರು ಗಮನಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಇಬ್ಬರು ಸಾವು ಕಂಡಿದ್ದು ಈ ವೇಳೆ ಜೀವನ್ಮರಣ ಹೋರಾಟ ನಡೆಸುತ್ತಿರುವ ಹುಡುಗಿ ನಿಜ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾಳೆ.
Two 16-year-old girls studying in a school died and their classmate is in a critical condition after they allegedly consumed poison together for different reasons in Indore district of Madhya Pradesh, police said on Saturday. The incident took place on Friday after the girls bunked the class of their school in Ashta town of Sehore district, and reached Indore, more than 100 kms away, in a bus to meet the boyfriend of one of the deceased girls as he had stopped taking her calls.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm