ಬ್ರೇಕಿಂಗ್ ನ್ಯೂಸ್
31-10-22 05:38 pm HK News Desk ದೇಶ - ವಿದೇಶ
ಕೋಜಿಕ್ಕೋಡ್, ಅ.31 : ಕೇರಳದ ಕೋಝಿಕೋಡ್ ಜಿಲ್ಲೆಯ ನೈನಂವಳಪ್ಪು ಎಂಬಲ್ಲಿ ಸಮುದ್ರ ತೀರದಲ್ಲಿ ಹಠಾತ್ತಾಗಿ 50 ಮೀಟರ್ ಉದ್ದಕ್ಕೆ ಸಮುದ್ರ ಹಿಂದೆ ಸರಿದು ನಿಂತಿದ್ದಲ್ಲದೆ, ಸರೋವರದ ರೀತಿ ಅಲೆಗಳಿಲ್ಲದೆ ನಿಶ್ಚಲವಾಗಿ ನಿಂತ ಘಟನೆ ನಡೆದಿದ್ದು ಇದರ ವಿಡಿಯೋ ವೈರಲ್ ಆಗಿದೆ.
ಶನಿವಾರ ಸಂಜೆ ಈ ರೀತಿಯ ವಿದ್ಯಮಾನ ನಡೆದಿದ್ದು ವಿಷಯ ತಿಳಿಯುತ್ತಲೇ ಜನರು ವಿಸ್ಮಯ ನೋಡಲು ಬಂದಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳ ತಂಡ, ಇದೊಂದು ಪ್ರಕೃತಿ ಸಹಜ ಪ್ರಕ್ರಿಯೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದು ಯಾವುದೇ ರೀತಿಯ ಸುನಾಮಿ ಸಾಧ್ಯತೆಗಳನ್ನು ಅಲ್ಲಗಳೆದಿದೆ.
ಭಾರತೀಯ ಭೂಗರ್ಭಶಾಸ್ತ್ರ ಇಲಾಖೆಯಾಗಲಿ ಇತರೇ ಯಾವುದೇ ತಜ್ಞರು ಭೂಕಂಪ ಅಥವಾ ಸುನಾಮಿ ಬಗ್ಗೆ ಎಚ್ಚರಿಕೆಯ ಸಂದೇಶ ನೀಡಿಲ್ಲ. ಹೀಗಾಗಿ ಸಮುದ್ರ ತೀರದ ಪ್ರದೇಶದಲ್ಲಿರುವ ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಸಂಜೆ 4 ಗಂಟೆ ಸುಮಾರಿಗೆ 200 ಮೀಟರ್ ಉದ್ದಕ್ಕೆ ಸಮುದ್ರ ತೀರದಲ್ಲಿ ಸುಮಾರು 50 ಮೀಟರ್ ನಷ್ಟು ಸಮುದ್ರ ಹಿಂದಕ್ಕೆ ಸರಿದಿದ್ದು ಹಲವು ಗಂಟೆಗಳ ವರೆಗೂ ಅದೇ ಸ್ಥಿತಿ ಉಳಿದಿತ್ತು. ಇದರಿಂದ ಸ್ಥಳೀಯರಲ್ಲಿ ಗಾಬರಿ ಉಂಟಾಗಿತ್ತು. ಸುನಾಮಿ ಸಂದರ್ಭದಲ್ಲಿ ಸಮುದ್ರ ಹಿಂದಕ್ಕೆ ಹೋಗುವ ಪರಿಪಾಠ ಇದ್ದುದರಿಂದ ಜನರು ಭಯಕ್ಕೊಳಗಾಗಿದ್ದರು. 2004 ಮತ್ತು 2017ರಲ್ಲಿ ಭೂಕಂಪದಿಂದ ಸುನಾಮಿ ಉಂಟಾದ ಸಂದರ್ಭದಲ್ಲಿ ಒಮ್ಮೆಲೇ ಸಮುದ್ರ ಹಿಂದಕ್ಕೆ ಹೋದ ಘಟನೆ ನಡೆದಿತ್ತು. ಶನಿವಾರ ರಾತ್ರಿ ಕಳೆದು ಭಾನುವಾರ, ಸೋಮವಾರದ ವೇಳೆಗೆ ಸಮುದ್ರ ಎಂದಿನಂತೆ ಭೋರ್ಗರೆಯುತ್ತಾ ತೀರಕ್ಕೆ ಬಂದಿದ್ದು ಸಹಜವಾಗಿತ್ತು.
കോഴിക്കോട് നൈനാംവളപ്പ് ഭാഗത്ത് കടൽ ഉൾവലിഞ്ഞ ദൃശ്യം#Kozhikode #Kerala pic.twitter.com/JQDGq4uUHA
— News18 Kerala (@News18Kerala) October 29, 2022
For several hours on Saturday evening the sea receded up to 50 metres at the Kothi Beach near Nainamvalappu in Kozhikode. The Kerala State Disaster Management Authority ruled out the possibility of a Tsunami as the withdrawal of sea is normally treated as a natural warning.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 01:34 pm
Udupi Correspondent
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm