ಬ್ರೇಕಿಂಗ್ ನ್ಯೂಸ್
01-11-22 03:04 pm HK News Desk ದೇಶ - ವಿದೇಶ
ಅಹ್ಮದಾಬಾದ್, ನ.1: ಮೋರ್ಬಿ ತೂಗುಸೇತುವೆ ಕುಸಿದು ಬಿದ್ದಿರುವುದಕ್ಕೆ ಗುಜರಾತ್ ಸರಕಾರದ ಅತಿಯಾದ ಭ್ರಷ್ಟಾಚಾರ ಕಾರಣ. ಸೇತುವೆ ದುರಸ್ತಿ ಬಗ್ಗೆ ಅನುಭವ ಇಲ್ಲದ ಗಡಿಯಾರ ಕಂಪನಿಗೆ ಸೇತುವೆ ದುರಸ್ತಿ ಹೊಣೆ ವಹಿಸಿದ್ದು ಯಾಕೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಗುಜರಾತ್ ಸರಕಾರದ ಭ್ರಷ್ಟಾಚಾರದ ಕಾರಣ ಜನರು ಸಾಯುವ ಸ್ಥಿತಿಯಾಗಿದ್ದು, ಇದರ ನೈತಿಕ ಹೊಣೆ ಹೊತ್ತು ಗುಜರಾತ್ ಸರಕಾರ ವಿಸರ್ಜಿಸಿ, ಮುಖ್ಯಮಂತ್ರಿ ರಾಜಿನಾಮೆ ನೀಡಬೇಕು. ಕೂಡಲೇ ಜನರೆದುರು ಹೋಗಿ ಚುನಾವಣೆ ಎದುರಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಸತ್ತವರ ಜೀವ ಮರಳಿ ಬರುವುದಿಲ್ಲ ; ಠಾಕ್ರೆ
ಗುಜರಾತ್ ಸರಕಾರ ತನ್ನ ಹೊಣೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಸರಕಾರವೇ ಹೊಣೆ ಹೊತ್ತುಕೊಳ್ಳಬೇಕು. ಇವರು ಹೊಣೆ ಜಾರಿಸಿಕೊಂಡ ಮಾತ್ರಕ್ಕೆ ಸತ್ತವರ ಜೀವ ಮರಳಿ ಬರುವುದಿಲ್ಲ ಎಂದು ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ. ಈ ಘಟನೆಯನ್ನು ಮೋಸದ ನಾಟಕ ಎನ್ನಬೇಕೇ, ಸಂಚು ಅಥವಾ ಘೋರ ದುರಂತ ಎನ್ನಬೇಕೇ.. ಸೇತುವೆ ಹೊಣೆ ಹೊತ್ತಿದ್ದ ಕಂಪನಿಯನ್ನು ಹೊಣೆಗಾರನನ್ನಾಗಿಸಿ ತನಿಖೆ ನಡೆಸಬೇಕು. ಹಾಗಂತ, ಗುಜರಾತ್ ಸರಕಾರ ಇದರಿಂದ ದೂರ ಉಳಿಯುವಂತಿಲ್ಲ. ಜನರ ರಕ್ಷಣೆ ಸರಕಾರದ್ದಾಗಿರುತ್ತದೆ ಎಂದು ಸಾಮ್ನಾ ಪತ್ರಿಕೆಯಲ್ಲಿ ಉದ್ಧವ್ ಠಾಕ್ರೆ ಬರೆದಿದ್ದಾರೆ.

ಈ ನಡುವೆ, ಮೋರ್ಬಿ ಸೇತುವೆ ಕುಸಿತ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟಿಗೆ ಪಿಐಎಲ್ ಸಲ್ಲಿಕೆಯಾಗಿದ್ದು, ಮುಖ್ಯ ನ್ಯಾಯಮೂರ್ತಿ ನ.14ರಂದು ವಿಚಾರಣೆಗೆ ಪರಿಗಣಿಸುವುದಾಗಿ ಹೇಳಿದ್ದಾರೆ. ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚನೆ ಮಾಡಬೇಕು ಎಂದು ಅರ್ಜಿಯಲ್ಲಿ ಬೇಡಿಕೆ ಇಡಲಾಗಿದೆ.
Delhi Chief Minister Arvind Kejriwal on Tuesday said the Morbi bridge collapse in Gujarat, which has claimed 135 lives so far, was a result of “massive corruption”. “Why was a watchmaking company which had no experience of bridge construction allowed to do so?” he said during a press conference.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm