ಬ್ರೇಕಿಂಗ್ ನ್ಯೂಸ್
13-11-22 05:01 pm HK News Desk ದೇಶ - ವಿದೇಶ
ನವದೆಹಲಿ, ನ.13: ದೆಹಲಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ ಸಿಕ್ಕಿಲ್ಲವೆಂದು ಆಮ್ ಆದ್ಮಿ ಪಕ್ಷದ ಮಾಜಿ ಕಾರ್ಪೊರೇಟರ್ ಒಬ್ಬ ಹೈಟೆನ್ಶನ್ ವಿದ್ಯುತ್ ತಂತಿ ಹಾದುಹೋಗುವ ಟವರ್ ಏರಿ ಕುಳಿತ ಘಟನೆ ದೆಹಲಿಯಲ್ಲಿ ನಡೆದಿದೆ.
ಹಸೀಬ್ ಉಲ್ ಹಸನ್ ಟವರ್ ಏರಿ ಕುಳಿತ ವ್ಯಕ್ತಿ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್ ನಿರಾಕರಿಸಲಾಗಿದೆ. ಅಲ್ಲದೆ, ತನ್ನ ಒರಿಜಿನಲ್ ದಾಖಲೆ ಪ್ರತಿಗಳನ್ನು ತೆಗೆದಿಟ್ಟು ಸ್ವತಂತ್ರ ಸ್ಪರ್ಧೆಗೂ ಅವಕಾಶ ಸಿಗದಂತೆ ಮಾಡಿದ್ದಾರೆ ಎಂದು ಆರೋಪಿಸಿ ಟವರ್ ಏರಿ ಹೈಡ್ರಾಮಾ ನಡೆಸಿದ್ದಾನೆ.
ಅಲ್ಲದೆ, ಆಮ್ ಆದ್ಮಿ ಪಕ್ಷದ ನಾಯಕರಾದ ಆತಿಷಿ, ದುರ್ಗೇಶ್ ಪಾಠಕ್ ಮತ್ತು ಸಂಜಯ್ ಸಿಂಗ್, ತನಗೆ ಟಿಕೆಟ್ ಕೊಡಬೇಕಿದ್ದರೆ ಮೂರು ಕೋಟಿ ರೂಪಾಯಿ ಹಣ ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದಾರೆ. ನನ್ನಲ್ಲಿ ಅಷ್ಟು ಕೊಡಲು ಹಣ ಇಲ್ಲ. ನನ್ನ ಬದಲಿಗೆ ದೀಪು ಚೌಧರಿ ಬಳಿ ಮೂರು ಕೋಟಿ ರೂಪಾಯಿ ಹಣ ಪಡೆದು ಟಿಕೆಟ್ ನೀಡಿದ್ದಾರೆ ಎಂದು ಹಸೀಬುಲ್ ಹಸನ್ ಆರೋಪಿಸಿದ್ದಾನೆ.
ಶಾಸ್ತ್ರಿ ಪಾರ್ಕ್ ವೃತ್ತದಲ್ಲಿ ಘಟನೆ ನಡೆದಿದ್ದು, ಪೊಲೀಸರು, ಆಮ್ ಆದ್ಮಿ ಪಕ್ಷದ ಪ್ರತಿನಿಧಿಗಳು ಆಗಮಿಸಿ ಹಸೀಬುಲ್ ನನ್ನು ಮನವೊಲಿಸಿ ಕೆಳಕ್ಕೆ ಇಳಿಸಿದ್ದಾರೆ. ಹೈಟೆನ್ಶನ್ ವಿದ್ಯುತ್ ಹರಿಯುವ ಟವರ್ ಆಗಿದ್ದರಿಂದ ವಿದ್ಯುತ್ ಸಂಪರ್ಕವನ್ನೂ ಕಡಿತ ಮಾಡಲಾಗಿತ್ತು. ಡಿ.4ರಂದು ದೆಹಲಿ ಪಾಲಿಕೆ ಚುನಾವಣೆ ನಡೆಯಲಿದ್ದು, ಆಮ್ ಆದ್ಮಿ ಪಕ್ಷದಿಂದ 117 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. 250 ಸದಸ್ಯ ಬಲದಲ್ಲಿ 117 ಸ್ಥಾನದ ಟಿಕೆಟ್ ಫೈನಲ್ ಮಾಡಲಾಗಿದ್ದು, ಶನಿವಾರ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಹಸೀಬುಲ್ ಗೆ ಸ್ಥಾನ ಸಿಗದೇ ಇರುವುದಕ್ಕೆ ಭಾನುವಾರ ಟವರ್ ಏರಿ ಡ್ರಾಮಾ ನಡೆಸಿದ್ದಾನೆ.
Disgruntled over not being given a ticket to the upcoming civic polls, a former councillor of the Aam Aadmi Party (AAP) on Sunday climbed up a transmission tower in Delhi.Former AAP councillor Haseeb-ul-Hasan was reportedly uphappy after he was denied a ticket to the upcoming Municipal Corporation of Delhi (MCD) elections, and climbed a transmission tower Shashtri Park metro station.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm