ಬ್ರೇಕಿಂಗ್ ನ್ಯೂಸ್
14-11-22 10:54 pm HK News Desk ದೇಶ - ವಿದೇಶ
ಕಾಸರಗೋಡು, ನ.14 : ಬಿಗ್ ಪ್ಲಸ್ ಫಿನ್ ಟ್ರೇಡಿಂಗ್ ಹೆಸರಲ್ಲಿ ಭಾರೀ ಚೈನ್ ಲಿಂಕ್ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಬೇಡಡ್ಕ ಬಳಿಯ ಕುಂಡಂಕುಳಿ ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಬಿಗ್‌ಪ್ಲಸ್ ಫಿನ್ ಟ್ರೇಡಿಂಗ್ ಕಂಪನಿ ಹಣ ಡಬಲ್ ಮಾಡುವುದಾಗಿ ಹೇಳಿ ನೂರಾರು ಮಂದಿಗೆ ಕೋಟಿಗಟ್ಟಲೆ ಮೋಸ ಮಾಡಿದೆ.
ಒಂದು ವರ್ಷದಲ್ಲಿ ದ್ವಿಗುಣಗೊಳಿಸುವ ಆಮಿಷದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಠೇವಣಿ ರೂಪದಲ್ಲಿ ಪಡೆದಿದ್ದು ಈಗ ಕಚೇರಿಗೆ ಬಾಗಿಲು ಎಳೆದಿದೆ. ವರ್ಷಕ್ಕೆ ಠೇವಣಿ ಮೇಲೆ 80 ಪ್ರತಿಶತದಷ್ಟು ಲಾಭ ನೀಡುತ್ತೇವೆ. ಒಂದು ವರ್ಷದಲ್ಲಿ ಹಣವನ್ನು ದ್ವಿಗುಣಗಳಿಸುವ ಭರವಸೆ ನೀಡಿ ನೂರಾರು ಕೋಟಿ ರೂಪಾಯಿ ಸಂಗ್ರಹ ಮಾಡಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಕಾಸರಗೋಡು ಪೊಲೀಸರು ತನಿಖೆ ನಡೆಸುತ್ತಿದ್ದು ಬಿಗ್ ಪ್ಲಸ್ ಫಿನ್ ಟ್ರೇಡಿಂಗ್ ಕಂಪನಿಯ ಎಂಟು ಬ್ಯಾಂಕ್ ಖಾತೆಗಳನ್ನು ಪೊಲೀಸರು ಸ್ಥಗಿತಗೊಳಿಸಿದ್ದಾರೆ. ಕಾಸರಗೋಡಿನ ಬೇಡಡ್ಕ ಪೊಲೀಸ್ ಠಾಣೆಯಲ್ಲಿ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯಿದೆ, 2019ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೋಜಿಕ್ಕೋಡ್, ಕಣ್ಣೂರು, ಕಾಸರಗೋಡು ಮತ್ತು ಕರ್ನಾಟಕದ ನೆರೆಯ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಜನರು ಕಂಪನಿಯ "ಮನಿ ಡಬ್ಲಿಂಗ್ ಯೋಜನೆ"ಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ.
ವಿನೋದ್ ಕುಮಾರ್ ಎಂಬಾತ ಕಂಪನಿಯ ರೂವಾರಿಯಾಗಿದ್ದು ತಾನು ಹೈಲೆವೆಲ್ ಸಂಪರ್ಕದ ವ್ಯಕ್ತಿಯೆಂದು ಪೋಸು ನೀಡುತ್ತಿದ್ದ.
ಬಿಗ್ ಪ್ಲಸ್ ಅನ್ನು ಗ್ಲೋಬಲ್ ಬ್ಯುಸಿನೆಸ್ ಗ್ರೂಪ್ (GBG) ಎಂಬ ಹೆಸರಲ್ಲಿ ಪ್ರಚಾರ ಮಾಡುತ್ತಿದ್ದ. ಸೆಲೆಬ್ರಿಟಿಗಳು, ರಾಜಕಾರಣಿಗಳು, ಉದ್ಯಮಿಗಳ ಜೊತೆಗಿದ್ದ ಫೋಟೋವನ್ನು ಹಂಚಿಕೊಳ್ಳುತ್ತಿದ್ದ. ಕೇರಳದ ರಾಜ್ಯಪಾಲರ ಜೊತೆಗಿರುವ ಫೋಟೋವನ್ನು ಈತ ತನ್ನ ವೆಬ್ ಸೈಟಿನಲ್ಲಿ ಹಾಕ್ಕೊಂಡಿದ್ದ. ಆಮೂಲಕ ಸಾಮಾನ್ಯ ಜನರನ್ನು ನಂಬಿಸುತ್ತಿದ್ದ.
ಕಾಸರಗೋಡು ಕಚೇರಿಯಲ್ಲಿ 31 ಕೋಟಿ ಸಂಗ್ರಹ
ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಕಚೇರಿಯಲ್ಲಿ 31 ಕೋಟಿ ರೂಪಾಯಿ ಸಂಗ್ರಹಿಸಿ ಬಡ ಠೇವಣಿದಾರರಿಗೆ ಮೋಸ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2015 ರಲ್ಲಿ ಇದೇ ರೀತಿ ವಿನೋದ್ ಕುಮಾರ್ ಕಂಪನಿ ಆರಂಭಿಸಿ ವಂಚನೆ ನಡೆಸಿದ್ದು ಆನಂತರ ಆ ಕಂಪೆನಿ ನಿಷೇಧಕ್ಕೆ ಒಳಗಾಗಿತ್ತು. ತದನಂತರ ಅಕ್ಟೋಬರ್ 31, 2020 ಬಂದು ಹೊಸ ಕಂಪನಿ ಪ್ರಾರಂಭಿಸಿದ್ದು ಎರಡೇ ವರ್ಷದಲ್ಲಿ ಬಿಗ್ ಪ್ಲಸ್ ಹೆಸರಲ್ಲಿ ನೂರಾರು ಕೋಟಿ ಸಂಗ್ರಹಿಸಿ ನಾಮ ಹಾಕಿದ್ದಾನೆ. ಬಿಗ್‌ಪ್ಲಸ್ ಫಿನ್ ಟ್ರೇಡಿಂಗ್ ಹೆಸರಲ್ಲಿ ಯೂಟ್ಯೂಬ್ ಚಾನೆಲ್ ಹೊಂದಿದ್ದು ನೀವು ನಮ್ಮೊಂದಿಗೆ ಕೈಜೋಡಿಸಿದರೆ, ಕಡಿಮೆ ಅವಧಿಯಲ್ಲಿ ಬಹಳಷ್ಟು ಸಾಧನೆ ಮಾಡಬಹುದು ಎಂದು ಹೇಳಿಕೊಂಡಿದ್ದ. ಜಾಲತಾಣದ ಮೂಲಕ ಗ್ರಾಹಕರನ್ನ ಸಂಪಾದಿಸಿ ಹೂಡಿಕೆ ಮಾಡಿಸಿದ್ದು ಈಗ ಮೋಸ ಮಾಡಿದ್ದಾನೆ.
Police have frozen at least eight bank accounts and launched an investigation into a company that promises 80 percent annual returns on deposits, post-tax. BigPlus Fin Trading, run from the sleepy village of Kundamkuzhy in Bedadka grama panchayat, has attracted crores of rupees as deposits, based on its claim to double the money in one year. A special branch officer tracking the company pegged the money raised at Rs 800 crore.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm