ಬ್ರೇಕಿಂಗ್ ನ್ಯೂಸ್
17-11-22 05:51 pm HK News Desk ದೇಶ - ವಿದೇಶ
ನವದೆಹಲಿ, ನ.17: ದೇಶವನ್ನೇ ಬೆಚ್ಚಿ ಬೀಳಿಸಿದ ಪ್ರೀತಿಸುತ್ತಿದ್ದ ಹುಡುಗಿಯ ಕತ್ತರಿಸಿ ಕೊಂದು ಹಾಕಿದ್ದ ಪ್ರಕರಣದಲ್ಲಿ ದೆಹಲಿ ಪೊಲೀಸರು ಮತ್ತಷ್ಟು ವಿವರಗಳನ್ನು ಪತ್ತೆ ಮಾಡಿದ್ದಾರೆ. ತಲೆಬುರುಡೆಗಾಗಿ ಪೊಲೀಸರು ಶೋಧ ನಡೆಸುತ್ತಿರುವಾಗಲೇ ಅದನ್ನು ಗುರುತು ಸಿಗದಂತೆ ಸುಟ್ಟು ಹಾಕಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.
ತಲೆ ಬುರುಡೆಯನ್ನು ಕೊನೆಯ ಬಾರಿಗೆ ಕಸದ ಗುಂಡಿಗೆ ಎಸೆದು ಬಂದಿದ್ದ. ಆದರೆ, ಎಸೆಯುವುದಕ್ಕೂ ಮುನ್ನ ತಲೆಯ ಭಾಗವನ್ನು ಗುರುತು ಸಿಗದಂತೆ ಸುಟ್ಟು ಹಾಕಿದ್ದ. ಹಾಗಾಗಿ ಅರೆಬೆಂದ ತಲೆ ಬುರುಡೆಯನ್ನು ಬೀದಿ ನಾಯಿಗಳು ಅಥವಾ ಇತರ ಪ್ರಾಣಿಗಳು ತಿಂದು ಹಾಕಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆರೋಪಿ ಅಫ್ತಾಬ್ ನನ್ನು ಪೊಲೀಸರು ವಿವಿಧ ಕಡೆಗಳಿಗೆ ಕೊಂಡೊಯ್ದು ಯುವತಿಯ ದೇಹದ ಭಾಗಗಳಿಗಾಗಿ ಶೋಧ ನಡೆಸಿದ್ದಾರೆ. ಒಂದು ಕಡೆ ತೊಡೆಯ ಎಲುಬಿನ ಮಾದರಿ ಸಿಕ್ಕಿದ್ದು ಅದು ಕೊಲೆಯಾದ ಶ್ರದ್ಧಾಳದ್ದೇ ಎನ್ನುವ ಬಗ್ಗೆ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.
ಈ ನಡುವೆ, ಆರೋಪಿ ಅಫ್ತಾಬ್ ನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ. ಮಂಪರು ಪರೀಕ್ಷೆಗೆ ಕೋರ್ಟಿನಿಂದ ಅನುಮತಿ ಪಡೆಯಲಾಗಿದ್ದು, ಈ ಪರೀಕ್ಷೆಗೆ ಒಳಪಡಲು ಸ್ವತಃ ಆರೋಪಿಯೂ ತನ್ನ ಒಪ್ಪಿಗೆ ನೀಡಿದ್ದಾನೆ. ಆರೋಪಿ ಅಫ್ತಾಬ್ ತನ್ನ ಗೆಳತಿಯನ್ನು ಕೊಲೆಗೈದು ಶವವನ್ನು ಫ್ರಿಡ್ಜ್ ನಲ್ಲಿಟ್ಟಿದ್ದರೂ, ಡೇಟಿಂಗ್ ಏಪ್ ನಲ್ಲಿ ಸಕ್ರಿಯವಾಗಿದ್ದ. ಮನೆಯ ಒಳಗೆ ಹೆಣ ಇಟ್ಟುಕೊಂಡೇ ಬೇರೆ ಕೆಲವು ಯುವತಿಯರನ್ನು ಮನೆಗೆ ಕರೆಸಿಕೊಂಡು ಅವರ ಜೊತೆ ಮಲಗುತ್ತಿದ್ದ ಎಂಬ ವಿಚಾರವನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ.
ಅಫ್ತಾಬ್, ಶ್ರದ್ಧಾ ಇರುವಾಗಲೇ ಇತರೇ ಹುಡುಗಿಯರಿಗಾಗಿ ಡೇಟಿಂಗ್ ಏಪ್ ನಲ್ಲಿ ಹುಡುಕಾಟ ನಡೆಸುತ್ತಿದ್ದ. ಕೆಲವು ಹುಡುಗಿಯರ ಜೊತೆಗೆ ಸಂಪರ್ಕವನ್ನೂ ಇಟ್ಟುಕೊಂಡಿದ್ದ. ಈ ಬಗ್ಗೆ ತಿಳಿದುಕೊಂಡ ಶ್ರದ್ಧಾ ವಿರೋಧ ವ್ಯಕ್ತಪಡಿಸಿ ಜಗಳವಾಡುತ್ತಿದ್ದಳು. ಅದೇ ವಿಚಾರದಲ್ಲಿ ಇಬ್ಬರು ಜಗಳವಾಡುತ್ತಿದ್ದರು. ಶ್ರದ್ಧಾಳನ್ನು ಕೊಲೆಗೈದ ಬಳಿಕ ಡೇಟಿಂಗ್ ಏಪ್ ನಲ್ಲಿ ಸಂಪರ್ಕದಲ್ಲಿದ್ದ ಯುವತಿಯರನ್ನು ತನ್ನ ಮನೆಗೆ ಕರೆಸಿಕೊಂಡು ಸುಖಿಸುತ್ತಿದ್ದ ಎಂಬ ಆಘಾತಕಾರಿ ವಿಚಾರವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹಾಗಾಗಿ ಅಫ್ತಾಬ್ ಕೇವಲ ಕ್ರೂರಿ ಮಾತ್ರವಲ್ಲ, ವಿಕೃತ, ವಿಘ್ನ ಸಂತೋಷಿಯಾಗಿದ್ದ ಎನ್ನುವುದು ತಿಳಿದುಬರುತ್ತದೆ.
ಕಸದ ಗುಂಡಿಗಳಿಗೆ ಪ್ಲಾಸ್ಟಿಕ್ ನಲ್ಲಿ ಕಟ್ಟಿದ ಬಾಕ್ಸ್ ನಲ್ಲಿ ಶವದ ತುಂಡುಗಳನ್ನು ಎಸೆಯುತ್ತಿದ್ದರಿಂದ ಪೊಲೀಸರು ಕಸವನ್ನು ರಾಶಿ ಹಾಕುವ ಜಾಗದಲ್ಲಿಯೂ ಎಲುಬು ಪತ್ತೆಗಾಗಿ ಶೋಧ ನಡೆಸಿದ್ದಾರೆ. ಲಾರಿಯಲ್ಲಿ ಕಸವನ್ನು ಒಂದೆಡೆ ಸುರಿಯುವ ಎರಡು ಜಾಗದಲ್ಲಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಕೃತ್ಯ ನಡೆದು ಐದು ತಿಂಗಳು ಕಳೆದಿರುವುದರಿಂದ ಯಾವುದೇ ಕುರುಹು ಕೂಡ ಸಿಗುತ್ತಿಲ್ಲ ಅನ್ನುವುದು ಪೊಲೀಸರ ತಲೆನೋವಿಗೂ ಕಾರಣವಾಗಿದೆ.
ಜೂನ್ ತಿಂಗಳಲ್ಲಿ ಸಿಕ್ಕಿತ್ತು ಅನಾಥ ತಲೆಬುರುಡೆ
ಕಳೆದ ಜೂನ್ ತಿಂಗಳಲ್ಲಿ ಪೂರ್ವ ದೆಹಲಿಯ ತ್ರಿಲೋಕ್ ಪುರಿ ಎಂಬಲ್ಲಿ ತಲೆಬುರುಡೆಯೊಂದು ಪತ್ತೆಯಾಗಿತ್ತು. ಯಾರದ್ದೆಂದು ತಿಳಿಯದೆ ಅದರ ಪರೀಕ್ಷೆಗಾಗಿ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದೀಗ ಶ್ರದ್ಧಾಳನ್ನು 35 ತುಂಡುಗಳನ್ನಾಗಿ ಕತ್ತರಿಸಿ ಬಿಸಾಡಿದ್ದ ಪ್ರಕರಣ ಬೆಳಕಿಗೆ ಬರುತ್ತಲೇ ಜೂನ್ ತಿಂಗಳಲ್ಲಿ ಸಿಕ್ಕಿದ್ದ ತಲೆಬುರುಡೆಯನ್ನು ಪೊಲೀಸರು ಡಿಎನ್ಎ ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆ. ಕೈಯ ಒಂದು ತುಂಡು ಮತ್ತು ತಲೆಬುರುಡೆ ಕಸದ ರಾಶಿಯಲ್ಲಿ ಪತ್ತೆಯಾಗಿತ್ತು. ಅದು ಶ್ರದ್ಧಾಳದ್ದೇ ಆಗಿರಬಹುದೇ ಎನ್ನುವ ಬಗ್ಗೆ ಡಿಎನ್ಎ ಪರೀಕ್ಷೆಯಲ್ಲಿ ಪತ್ತೆ ಮಾಡಬೇಕಾಗಿದೆ. ಆಕೆಯ ಹತ್ತಿರದ ಸಂಬಂಧಿಕರ ದೇಹದ ಮಾದರಿಯನ್ನು ಪಡೆದು ಡಿಎನ್ಎ ವಶವಾಹಿಗಳು ಹೋಲಿಕೆಯಾಗುತ್ತಾ ಎಂದು ನೋಡಬೇಕಾಗಿದೆ.
Delhi-Mehrauli Murder Case Updates: Food blogger Aaftab Poonawala, who is being probed for murdering his live-in partner Shraddha Walkar and chopping her body into 35 pieces in May, was called in for questioning in October — four months after the murder — but managed to avoid suspicion by “offering all help in tracing Walkar". It was a trap by Vasai police that opened that details of the grisly murder during a “long drinking session".
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm