ಬ್ರೇಕಿಂಗ್ ನ್ಯೂಸ್
28-11-22 10:29 pm HK News Desk ದೇಶ - ವಿದೇಶ
ನವದೆಹಲಿ, ನ.28: ಶ್ರದ್ಧಾ ವಾಲ್ಕರ್ ಹಂತಕ ಅಫ್ತಾಬ್ ಪೂನಾವಾಲನನ್ನು ಪೊಲೀಸರು ಪಾಲಿಗ್ರಾಫ್ ಪರೀಕ್ಷೆಗೆ ಒಯ್ಯುತ್ತಿದ್ದ ವೇಳೆ 15 ಮಂದಿಯಿದ್ದ ಗುಂಪೊಂದು ದಾಳಿ ನಡೆಸಲು ಯತ್ನಿಸಿದೆ. ಕೈಯಲ್ಲಿ ಕತ್ತಿ, ದೊಣ್ಣೆ ಹಿಡಿದಿದ್ದ ಗುಂಪು ಅಫ್ತಾಬ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದು, ವಾಹನವನ್ನು ಬೆನ್ನಟ್ಟಿಕೊಂಡು ಬಂದಿದ್ದಾರೆ. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಗುಂಪನ್ನು ಚದುರಿಸಿದ್ದಾರೆ.
ದೆಹಲಿಯ ರೋಹಿಣಿ ಏರಿಯಾದಲ್ಲಿರುವ ಫಾರೆನ್ಸಿಕ್ ಲ್ಯಾಬ್ ಗೆ ಸೋಮವಾರ ಸಂಜೆ ಅಫ್ತಾಬ್ ನನ್ನು ಪಾಲಿಗ್ರಾಫ್ ಪರೀಕ್ಷೆಗಾಗಿ ವಾಹನದಲ್ಲಿ ಕರೆತರಲಾಗಿತ್ತು. ಈ ವೇಳೆ, ಆಕ್ರೋಶಿತ ಗುಂಪು ಪೊಲೀಸರ ನಡುವೆಯೇ ಅಟ್ಟಿಸಿಕೊಂಡು ಬಂದಿದೆ. ನಾವು ಆತನನ್ನು 35 ಅಲ್ಲ, 70 ಪೀಸ್ ಮಾಡ್ತೀವಿ ಎಂದು ಅಟ್ಟಿಸಿ ಬಂದಿದ್ದಾರೆ. ಪಂಜಾಬಿನ ಗುರುಗ್ರಾಮದಿಂದ ಬಂದಿದ್ದ ಗುಂಪಿನಲ್ಲಿ 15 ಮಂದಿಯಿದ್ದರು.
ಈ ವೇಳೆ, ಕುಲ್ದೀಪ್ ಗುಜ್ಜಾರ್ ಮತ್ತು ನಿಗಾಮ್ ಗುಜ್ಜರ್ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೈಲು ವಾಹನದ ಮೇಲೆ ದಾಳಿ ನಡೆಸಿದ್ದಕ್ಕಾಗಿ ಪೊಲೀಸರು ಗುಂಪನ್ನು ಬಂಧಿಸಲು ಮುಂದಾಗಿದ್ದಾರೆ. ಆದರೆ ಗುಂಪು ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದು, ಇಬ್ಬರು ಸಿಕ್ಕಿಬಿದ್ದಿದ್ದಾರೆ. ಹಿಂದು ಸೇನಾ ಎಂಬ ಸಂಘಟನೆಯ ಸದಸ್ಯರು ಎನ್ನಲಾಗುತ್ತಿದ್ದು, ಅದರಲ್ಲೊಬ್ಬಾತ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾನೆ. ಅಫ್ತಾಬ್ ಗೆ ಪೊಲೀಸರು ರಕ್ಷಣೆ ಕೊಡುತ್ತಿದ್ದಾರೆ. ಆತ ತಾನೇ ಕೈಯಾರೆ ಗೆಳತಿಯನ್ನು ಕೊಂದಿದ್ದು ಸರಿಯಾದರೆ, ನಾವು ನಮ್ಮ ಕತ್ತಿಯಿಂದ ಕಡಿದು ನ್ಯಾಯ ನೀಡುತ್ತೇವೆ. ನಾವು ಆತನನ್ನು ಕೊಲ್ಲುತ್ತೇವೆ. ನಮ್ಮ ಸೋದರಿಯರ ರಕ್ಷಣೆಗಾಗಿ ನಾವು ಏನು ಮಾಡಬೇಕಾಗುತ್ತದೆ. ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಹಿಂದು ಹೆಣ್ಮಗಳನ್ನು ಕೊಂದು ಹಾಕಿದ್ದಾನೆ. ಆತನನ್ನು ಹಾಗೇ ಬಿಡುವುದಿಲ್ಲ ಎಂದು ಹೇಳಿದ್ದಾನೆ.
#WATCH | Police van carrying Shradhha murder accused Aftab Poonawalla attacked by at least 2 men carrying swords who claim to be from Hindu Sena, outside FSL office in Delhi pic.twitter.com/Bpx4WCvqXs
— ANI (@ANI) November 28, 2022
A group of men attacked the vehicle carrying Aaftab Amin Poonawala, the accused in the Shraddha Walkar murder case, outside a forensic science lab in Delhi's Rohini area on Monday evening. The men, who were at least 15 in number, attacked the vehicle after Aaftab was taken out of the lab where he is undergoing a polygraph test. They were seen carrying swords in their hands and chasing the vehicle. The policemen stationed at the spot had to fire in the air to push away the men as they gathered near the vehicle.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm