ಹಿಂದುಗಳು ಮುಸ್ಲಿಂ ಸೂತ್ರ ಅನುಸರಿಸಿ, ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ; ಮುಸ್ಲಿಂ ಜನಸಂಖ್ಯೆ ಹೆಚ್ಚಳದ ಬಗ್ಗೆ ಗೊಣಗಬೇಡಿ ! 

03-12-22 02:03 pm       HK News Desk   ದೇಶ - ವಿದೇಶ

ಹಿಂದೂಗಳು ಮುಸ್ಲಿಂ ಸೂತ್ರವನ್ನು ಅಳವಡಿಸಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಬೇಕು. ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಗೊಣಗಿದರೆ ಪ್ರಯೋಜನ ಇಲ್ಲ ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಹಿಂದುಗಳಿಗೆ ಬುದ್ಧಿಮಾತು ಹೇಳಿದ್ದಾರೆ. 

ನವದೆಹಲಿ, ಡಿ.3: ಹಿಂದೂಗಳು ಮುಸ್ಲಿಂ ಸೂತ್ರವನ್ನು ಅಳವಡಿಸಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಬೇಕು. ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಗೊಣಗಿದರೆ ಪ್ರಯೋಜನ ಇಲ್ಲ ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಹಿಂದುಗಳಿಗೆ ಬುದ್ಧಿಮಾತು ಹೇಳಿದ್ದಾರೆ. 

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಮುಸ್ಲಿಂ ಪುರುಷರು 20 ರಿಂದ 22ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಮುಸ್ಲಿಂ ಮಹಿಳೆಯರು ಸಹ ಸರ್ಕಾರದ ಅನುಮತಿ ಮೇರೆಗೆ 18ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಆದರೆ, ಹಿಂದೂಗಳು ಮದುವೆಗೆ ಮುನ್ನ ಒಬ್ಬೊಬ್ಬರು ಎರಡು ಅಥವಾ ಮೂರು ಅಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ.

Nature of Hindu Marriage under the Hindu Law - iPleaders

ಅವರು ಮಕ್ಕಳನ್ನು ಹೆರುವುದಿಲ್ಲ, ಜೀವನವನ್ನು ಆನಂದಿಸಿ ಹಣ ಉಳಿಸುತ್ತಾರೆ ಅಷ್ಟೇ ಎಂದು ಬದ್ರುದ್ದೀನ್ ಹೇಳಿದ್ದಾರೆ. ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಎಂಬುದರ ಬಗ್ಗೆ ಮಾತನಾಡಿದ ಅಜ್ಮಲ್ ಅವರು, 40 ವರ್ಷ ವಯಸ್ಸಿನ ನಂತರ ಹಿಂದೂಗಳು ಪೋಷಕರ ಒತ್ತಡದಲ್ಲಿ ಮದುವೆಯಾಗುತ್ತಾರೆ. ಹಾಗಾದರೆ, ಅವರು 40ರ ನಂತರ ಮಕ್ಕಳನ್ನು ಹೆರುತ್ತಾರೆ ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ? ಫಲವತ್ತಾದ ಭೂಮಿಯಲ್ಲಿ ಬಿತ್ತನೆ ಮಾಡಿದರೆ ಮಾತ್ರ ಉತ್ತಮ ಬೆಳೆಗಳನ್ನು ಬೆಳೆಯಲು ಸಾಧ್ಯ.

Islamic sects booming in Africa | MercatorNet

ಆದ್ದರಿಂದ ಹಿಂದೂಗಳು ಮುಸ್ಲಿಮರ ಸೂತ್ರವನ್ನು ಅನುಸರಿಸಬೇಕು. ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಬೇಕು. 20-22ನೇ ವಯಸ್ಸಿನಲ್ಲಿ ಮದುವೆ ಮಾಡಬೇಕು. 18-20 ವರ್ಷಕ್ಕೆ ಹುಡುಗಿಯರ ಮದುವೆಯಾಗಬೇಕು. ಇದು ಬಿಟ್ಟು ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಗೊಣಗಿದರೇನು ಫಲ ಎಂದು ಪ್ರಶ್ನಿಸಿದ್ದಾರೆ.

Shraddha Walker murder case: Father suspects 'love jihad', demands death  penalty for accused Aftab Ameen Poonawalla | India News – India TV

MP: नाम बदलकर लड़की से रचाई शादी, अब धर्म बदलने को कहा, लव ज‍िहाद कानून के  तहत केस दर्ज - madhya pradesh case of love jihad registered by police agar  malwa tsts -

ಇದೇ ವೇಳೆ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಅವರ ಲವ್ ಜಿಹಾದ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಅಸ್ಸಾಂ ಸಿಎಂ ದೇಶದ ಅಗ್ರಮಾನ್ಯ ನಾಯಕರಲ್ಲಿ ಒಬ್ಬರು. ಆದರೆ, ಅವರನ್ನ ತಡೆಯೋರು ಯಾರು. ನೀವು ಬೇಕಿದ್ದರೆ, ನಾಲ್ಕೈದು ಲವ್ ಜಿಹಾದ್ ನಡೆಸಿ, ನಮ್ಮ ಮುಸ್ಲಿಂ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿ, ನಾವು ಅದನ್ನ ಸ್ವಾಗತ ಮಾಡುತ್ತೇವೆಯೇ ಹೊರತು ಜಗಳವಾಡುವುದಿಲ್ಲ. ಹಾಗೆ ಮಾಡಿದರೆ ನಿಮ್ಮಲ್ಲೂ ಎಷ್ಟು ಶಕ್ತಿಯಿದೆ ಎಂದು ನೋಡಬಹುದು ಎಂದು ಲೇವಡಿ ಮಾಡಿದ್ದಾರೆ. ಇತ್ತೀಚೆಗೆ ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಲವ್ ಜಿಹಾದ್ ಅಂಶ ಉಲ್ಲೇಖಿಸಿದ್ದ ಅಸ್ಸಾಂ ಸಿಎಂ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಹಾಗೂ ಲವ್ ಜಿಹಾದ್ ವಿರುದ್ಧ ಕಾನೂನು ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದರು.

"Muslim men marry at the age of 20-22, and Muslim women also marry at 18 after the permissible age by the government. On the other hand, (Hindus) keep one two or three illegal wives before marriage, they don't give birth to babies, enjoy themselves and save money...," the AIDUF chief said.