ಬ್ರೇಕಿಂಗ್ ನ್ಯೂಸ್
03-12-22 11:12 pm HK News Desk ದೇಶ - ವಿದೇಶ
ಚೆನ್ನೈ, ಡಿ.3 : ಮತಾಂತರಗೊಂಡವರಿಗೆ ಯಾವುದೇ ಮೀಸಲು ನೀಡುವಂತಿಲ್ಲ ಎಂಬ ಮಹತ್ವದ ಆದೇಶ ಹೊರಬಿದ್ದಿದೆ. ಮತಾಂತರಗೊಂಡವರು ತಮ್ಮ ಹಿಂದಿನ ಜಾತಿಯ ಮೀಸಲಾತಿಯನ್ನು ಕೇಳುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.
ಇಸ್ಲಾಮ್ಗೆ ಮತಾಂತರಗೊಂಡಿದ್ದ ವ್ಯಕ್ತಿಯೊಬ್ಬ ಮೀಸಲಾತಿ ಸಲುವಾಗಿ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್ ಶನಿವಾರ ಈ ಆದೇಶವನ್ನು ನೀಡಿದೆ.
ಇನ್ನೊಂದು ಧರ್ಮಕ್ಕೆ ಮತಾಂತರಗೊಂಡ ಮೇಲೆ ಜಾತಿಯ ಮೀಸಲಾತಿ ಕೇಳುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ. ಹಿಂದುಳಿದ ವರ್ಗದ ಹಿಂದು ವ್ಯಕ್ತಿಯೊಬ್ಬ ಇಸ್ಲಾಮ್ಗೆ ಮತಾಂತರಗೊಂಡು ಜಾತಿ ಮೀಸಲಾತಿ ಕೇಳಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶ ಜಿ.ಆರ್. ಸ್ವಾಮಿನಾಥನ್ ನೇತೃತ್ವದ ಪೀಠ ಈ ಆದೇಶ ನೀಡಿದೆ.
ದೂರುದಾರ ವ್ಯಕ್ತಿ 2008ರಲ್ಲಿ ಇಸ್ಲಾಮ್ಗೆ ಮತಾಂತರಗೊಂಡಿದ್ದು, 2018ರಲ್ಲಿ ತಮಿಳುನಾಡು ಕಂಬೈನ್ಡ್ ಸಿವಿಲ್ ಸರ್ವಿಸಸ್ ಎಕ್ಸಾಮ್ಗೆ ಹಾಜರಾಗಿದ್ದ. ಆದರೆ ಈತ ಸಾಮಾನ್ಯ ವರ್ಗದಲ್ಲಿ ಪರಿಗಣಿಸಲ್ಪಟ್ಟಿದ್ದರಿಂದ ಅರ್ಹತೆ ಪಡೆಯದಿರುವುದು ತಿಳಿದುಬಂದಿದೆ. ಆಗ ಈತ ರಾಜ್ಯ ಸರ್ಕಾರದ ಉದ್ಯೋಗಕ್ಕೆ ಸಂಬಂಧಿಸಿದಂತೆ ತನ್ನ ಜನ್ಮತಃ ಜಾತಿ ಮೀಸಲಾತಿ ಪರಿಗಣಿಸುವಂತೆ ಕೋರಿದ್ದ. ತನ್ನನ್ನು ಹಿಂದುಳಿದ ಮುಸ್ಲಿಂ ಎಂದು ಪರಿಗಣಿಸಬೇಕು ಎಂದು ಆತ ಕೇಳಿದ್ದ.
ತಮಿಳುನಾಡು ಸರ್ಕಾರ ಕೆಲವು ಮುಸ್ಲಿಮರನ್ನು ಅತಿ ಹಿಂದುಳಿದ ಸಮುದಾಯ ಎಂದು ಪರಿಗಣಿಸುತ್ತಿದೆ. ಆದರೆ ನ್ಯಾಯಾಲದಲ್ಲಿ ಈತನ ಅರ್ಜಿ ತಿರಸ್ಕೃತಗೊಂಡಿದ್ದು, ಮತಾಂತರಗೊಂಡರೆ ಜಾತಿ ಮೀಸಲಾತಿ ಅನ್ವಯಿಸುವುದಿಲ್ಲ ಎಂಬ ಆದೇಶ ನೀಡಲಾಗಿದೆ.
The Madras High Court recently observed that a person who has converted to another religion cannot claim the benefits of his community before conversion unless it is expressly granted by the State. Justice GR Swaminathan of the Madurai bench was hearing the plea of a candidate challenging the action of the Tamil Nadu Public Service Commission in not treating him as "Backward Class (Muslim)" but considering him as "General" category in the Combined Civil Services Examination-II (Group-II Services).
09-04-26 09:30 pm
HK News Staffer
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
09-04-26 11:03 pm
HK News Staffer
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
09-04-26 09:16 pm
HK News Staffer
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm