ಬ್ರೇಕಿಂಗ್ ನ್ಯೂಸ್
08-12-22 01:27 pm HK News Desk ದೇಶ - ವಿದೇಶ
ಅಹ್ಮದಾಬಾದ್, ಡಿ.8: ಗುಜರಾತಿನಲ್ಲಿ ಮೋದಿ ಮ್ಯಾಜಿಕ್ ಗೆದ್ದುಕೊಂಡಿದೆ. ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಯಾರೂ ಊಹಿಸದ ರೀತಿ ಜಯಭೇರಿ ಸಾಧಿಸಿದ್ದು ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಈ ಮೂಲಕ ಸತತ ಏಳನೇ ಬಾರಿ ಗುಜರಾತಿನಲ್ಲಿ ಕೇಸರಿ ಪಾಳಯ ಅಧಿಕಾರದ ಗದ್ದುಗೆ ಹಿಡಿದಿದೆ.
182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ 12.30ರ ವರೆಗಿನ ಫಲಿತಾಂಶದಲ್ಲಿ ಬಿಜೆಪಿ 153 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದ್ದು ಎದುರಾಳಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷವನ್ನು ಹೀನಾಯವಾಗಿ ಸೋಲಿಸಿದೆ. ಕಾಂಗ್ರೆಸ್ ಕೇವಲ 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, 5 ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷ ಮುನ್ನಡೆ ಗಳಿಸಲು ಶಕ್ತವಾಗಿದೆ.
ಕಳೆದ 27 ವರ್ಷಗಳಿಂದ ಅಧಿಕಾರದ ಗದ್ದುಗೆಯಲ್ಲಿರುವ ಬಿಜೆಪಿ ಸತತ ಏಳನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದು ಇತಿಹಾಸ ಸೃಷ್ಟಿಸಿದೆ. 182 ಸ್ಥಾನಗಳ ಪೈಕಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಎದುರಾಳಿಗಳನ್ನು ಧೂಳೀಪಟ ಮಾಡಿದೆ. ಕಾಂಗ್ರೆಸ್ 18 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.
ಗುಜರಾತಿನಲ್ಲಿ ಕಾಂಗ್ರೆಸ್ ತೀವ್ರ ಕುಸಿತ
2017ರಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 99 ಸ್ಥಾನಗಳಲ್ಲಿ ಜಯಗಳಿಸಿ 6ನೇ ಬಾರಿ ಅಧಿಕಾರದ ಗದ್ದುಗೆ ಏರಿತ್ತು. ಕಾಂಗ್ರೆಸ್ ಪಕ್ಷ 77 ಕ್ಷೇತ್ರಗಳಲ್ಲಿ ಜಯ ಗಳಿಸುವ ಮೂಲಕ ಪ್ರಬಲ ವಿಪಕ್ಷವಾಗಿ ಹೊರಹೊಮ್ಮಿತ್ತು. ಆದರೆ 2022ರ ಚುನಾವಣೆಯಲ್ಲಿ ಮತ್ತಷ್ಟು ಬಲ ವೃದ್ಧಿಸಿಕೊಂಡಿರುವ ಬಿಜೆಪಿ, ಕಾಂಗ್ರೆಸನ್ನು ಮೂಲೆಗುಂಪು ಮಾಡಿದ್ದಲ್ಲದೆ 50 ಶೇಕಡಾ ಮತ ಗಳಿಕೆಯಿಂದ ಭಾರೀ ಮುನ್ನಡೆ ಸಾಧಿಸಿದೆ.
ಕೊನೆಕ್ಷಣದಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಜೋಡಿಯ ಚುನಾವಣೆ ಪ್ರಚಾರ ಚುನಾವಣೆ ಫಲಿತಾಂಶದ ದಿಕ್ಕನ್ನೇ ಬದಲಿಸಿದೆ. 1989ರಲ್ಲಿ ಕಾಂಗ್ರೆಸ್ 149 ಸ್ಥಾನಗಳನ್ನು ಗೆದ್ದಿದ್ದು ಈವರೆಗಿನ ಅತಿ ಹೆಚ್ಚು ಗಳಿಕೆಯ ಇತಿಹಾಸ. ಆದರೆ ಈ ಬಾರಿ ಬಿಜೆಪಿ ಕಾಂಗ್ರೆಸ್ ಪರ ಇದ್ದ ದಾಖಲೆಯನ್ನು ಅಳಿಸಿ ಹಾಕುವ ಲಕ್ಷಣ ಮೂಡಿಸಿದೆ.
The BJP leads in Gujarat has crossed 150 -- a record in Prime Minister Narendra Modi's home state, surpassing the Congress score of 149 in 1985. Back then, Madhavsinh Solanki rose the social coalition KHAM (Koli Kshatriya, Harijan, Adivasi and Muslim). Today, the Grand Old Party might be headed for its worst score ever, confined to teens by the massive BJP surge.
17-12-24 05:39 pm
HK News
Pavithra Gowda Release, Actor Darshan; ಪರಪ್ಪನ...
17-12-24 11:53 am
Madhusdhan, Waqf, Congress; ಅತಿ ಹೆಚ್ಚು ವಕ್ಫ್...
17-12-24 11:30 am
Tulsi Gowda passes away: ಪರಿಸರ ಪ್ರೇಮಿ, ವೃಕ್ಷ...
16-12-24 10:13 pm
Sexually harrasment, Hubballi police Inspecto...
16-12-24 09:58 pm
18-12-24 10:37 pm
HK News Desk
One Nation, One Election Bill; ವಿಪಕ್ಷಗಳ ಗದ್ದಲ...
17-12-24 05:31 pm
ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ವಧೂ- ವರರು ಮನೆ...
16-12-24 04:19 pm
ವಿಶ್ವವಿಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ಇನ್ನಿಲ್ಲ...
15-12-24 11:05 pm
IPS Mohsin Khan, Rape; ಖಾನ್ಪುರ ಐಐಟಿಯಲ್ಲಿ ಕ್ರಿ...
14-12-24 12:40 pm
18-12-24 05:09 pm
Mangalore Correspondent
MCC Bank Anil Lobo, FIR, Manohar Pereira Suic...
18-12-24 01:56 pm
MCC Bank Anil Lobo, Manohar Pereira Suicide:...
17-12-24 11:13 pm
Puttur, Soumya Pernaje; "ಹವ್ಯಕ ಕೃಷಿ ರತ್ನ" ಪ್ರ...
17-12-24 08:10 pm
Anupam Agrawal IPS, Mangalore Protest: ಪ್ರತಿಭ...
17-12-24 01:55 pm
18-12-24 09:23 pm
Bangalore Correspondent
Mangalore CCB Police, Crime, Drugs; ಸಿಸಿಬಿ ಪೊ...
18-12-24 11:15 am
Konaje Police, Mangalore Police, Drugs; ಮಾದಕ...
17-12-24 07:51 pm
Karkala GooglePay Fraud, Arrest: ಹೋಮ್ ನರ್ಸ್ ಆ...
17-12-24 07:34 pm
Bank Fraud Case, Mangalore Police, News: ಬ್ಯಾ...
15-12-24 01:03 pm