ಬ್ರೇಕಿಂಗ್ ನ್ಯೂಸ್
08-12-22 07:01 pm HK News Desk ದೇಶ - ವಿದೇಶ
ಶಿಮ್ಲಾ, ಡಿ.8: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದ ಬೆನ್ನಲ್ಲೇ ಬಿಜೆಪಿ ಸರಕಾರದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಜನಾದೇಶವನ್ನು ಗೌರವಿಸುತ್ತೇವೆ. ಹೊಸ ಸರಕಾರ ರಚನೆಗೆ ಬೆಂಬಲ ನೀಡುತ್ತೇನೆ ಎಂದು ಹೇಳಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರಿಗೆ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ.
ಹಿಮಾಚಲ ಪ್ರದೇಶದ ಗೆಲುವಿನ ಬಗ್ಗೆ ಕಾಂಗ್ರೆಸ್ ಜನರಲ್ ಸೆಕ್ರಟರಿ ರಣದೀಪ್ ಸುರ್ಜೇವಾಲ ಟ್ವೀಟ್ ಮಾಡಿದ್ದು, ಸತ್ಯ ಮತ್ತು ನಿಷ್ಠೆಗೆ ಗೆಲುವಾಗಿದೆ. ಸುಳ್ಳು ಮತ್ತು ಸುಳ್ಳಿನ ರಾಜಕಾರಣಕ್ಕೆ ಸೋಲಾಗಿದೆ ಎಂದು ಹೇಳಿದ್ದಾರೆ. ಹಿಮಾಚಲದಲ್ಲಿ ಕಾಂಗ್ರೆಸ್ 39 ಸೀಟುಗಳನ್ನು ಗೆದ್ದಿದ್ದು, ಇನ್ನೊಂದು ಸೀಟಿನಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 25 ಸೀಟುಗಳಲ್ಲಿ ಗೆಲ್ಲುವುದು ಖಾತ್ರಿಯಾಗಿದೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಹಿಮಾಚಲದ ಜನರಿಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಹೃದಯಪೂರ್ವಕ ಅಭಿನಂದಿಸುತ್ತೇನೆ. ನಿಮ್ಮ ಕಠಿಣ ಪರಿಶ್ರಮದಿಂದ ಈ ಗೆಲುವು ಸಿಕ್ಕಿದೆ ಎಂದಿದ್ದಾರೆ. ಹಿಮಾಚಲದಲ್ಲಿ ಮೂರು ಕ್ಷೇತ್ರಗಳಲ್ಲಿ ಪುನರ್ ಮತ ಎಣಿಕೆಗೆ ಚುನಾವಣಾ ಆಯೋಗ ನಿರ್ಧರಿಸಿದೆ. ಅತ್ಯಂತ ನಿಕಟ ಸ್ಪರಅಧೆ ಏರ್ಪಟ್ಟ ಮೂರು ಕ್ಷೇತ್ರಗಳಲ್ಲಿ ಮತ್ತೊಮ್ಮೆ ಮತ ಎಣಿಕೆ ನಡೆಯಲಿದೆ.
ಚುನಾವಣಾ ಆಯೋಗದ ಪ್ರಕಟಣೆಯ ಪ್ರಕಾರ, ಹಿಮಾಚಲದಲ್ಲಿ ಕಾಂಗ್ರೆಸ್ ಮತ ಗಳಿಕೆ 50 ಶೇಕಡಾವನ್ನು ದಾಟಿದೆ. ಆಯೋಗದ ಪ್ರಕಟಣೆಯಲ್ಲಿ ಬಿಜೆಪಿ 18 ಸೀಟು ಗೆದ್ದಿದ್ದು, ಏಳರಲ್ಲಿ ಮುನ್ನಡೆ ಹೊಂದಿದೆ. ಕಾಂಗ್ರೆಸ್ 38ರಲ್ಲಿ ಗೆದ್ದಿದ್ದು, ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದೆ. ಮೂರು ಮಂದಿ ಪಕ್ಷೇತರರು ಗೆಲುವು ಕಂಡಿದ್ದಾರೆ. ಹಿಮಾಚಲದಲ್ಲಿ ಆರು ಬಾರಿ ಗೆದ್ದಿದ್ದ ಕಾಂಗ್ರೆಸ್ ಶಾಸಕಿ ಆಶಾ ಕುಮಾರಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದಾರೆ. ಡಾಲ್ ಹೌಸಿ ಕ್ಷೇತ್ರದಲ್ಲಿ ಬಿಜೆಪಿಯ ಡಿ.ಎಸ್.ಠಾಕೂರ ವಿರುದ್ಧ ಆಶಾ ಕುಮಾರಿ 9918 ಮತಗಳಿಂದ ಸೋತಿದ್ದಾರೆ. ಫತೇಪುರ್ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಅರಣ್ಯ ಸಚಿವ ರಾಕೇಶ್ ಪಠಾಮಿಯಾ ವಿರುದ್ಧ 7354 ಮತಗಳಿಂದ ಕಾಂಗ್ರೆಸಿನ ಭವಾನಿ ಸಿಂಗ್ ಗೆದ್ದಿದ್ದಾರೆ.
CM and BJP leader Jairam Thakur said he'll tender his resignation to the Governor later on Thursday after the saffron party lost to Congress after a contest that was a cliifhanger for most part of the day. While Congress is leading on 39 seats out of 68 and BJP is leading on 26. Meanwhile, Thakur continues his lead from his constituency Seraj, with a margin of 38,183 votes.
05-01-25 10:56 pm
Bangalore Correspondent
ವಿಧಾನಸೌಧ ಒಳಗಡೆಯೇ ಸಚಿವರು ಲಂಚ ಪಡೀತಿದ್ದಾರೆ, ಕಾಂಗ...
05-01-25 07:36 pm
Private Buses, Bangalore: ಸರ್ಕಾರಿ ಬಸ್ ದರ ಏರಿಸ...
04-01-25 06:49 pm
Gadag Car accident; ಹೈಸ್ಕೂಲ್ ವಿದ್ಯಾರ್ಥಿಗಳು ಚಲ...
04-01-25 01:28 pm
BJP MLC Dhananjaya Sarji: ಹೊಸ ವರ್ಷಕ್ಕೆ ಬಿಜೆಪಿ...
03-01-25 10:47 pm
05-01-25 09:41 pm
HK News Desk
Chhattisgarh Journalist Murder: ಛತ್ತೀಸ್ಗಢದಲ್ಲ...
04-01-25 06:01 pm
ಉತ್ತರ ಚೀನಾದಲ್ಲಿ ಮತ್ತೊಂದು ವೈರಸ್ ದಾಳಿ ; ಕೋವಿಡ್...
03-01-25 06:22 pm
ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ ಭಯೋತ್ಪಾದಕ ಘಟನೆ ; ಐ...
03-01-25 11:57 am
ಸ್ವಿಜರ್ಲ್ಯಾಂಡಿನಲ್ಲಿ ಜನವರಿ 1ರಿಂದಲೇ ಬುರ್ಖಾ ನಿಷೇ...
02-01-25 06:20 pm
05-01-25 10:51 pm
Mangalore Correspondent
Dr Na DSouza passes, Death, Mangalore: ಖ್ಯಾತ...
05-01-25 10:16 pm
Mangalore MP Brijesh Chowta, Rajnath Singh: ರ...
05-01-25 02:13 pm
Mangalore MCC Anand CL, Abdul Rauf: ಮಹಾನಗರ ಪಾ...
04-01-25 09:49 pm
Travel agency fraud, Muhammadiya, Haj, Mangal...
04-01-25 08:57 pm
04-01-25 11:31 am
Mangalore Correspondent
Madhugiri DySP Ramachandrappa Arrest, Video:...
03-01-25 11:02 pm
Sri Bhagavathi Co Operative Bank fraud, Manga...
03-01-25 09:26 pm
Belagavi Murder, Crime; ಕುಡಿಯಲು ಹಣಕ್ಕಾಗಿ ಪೀಡಿ...
02-01-25 11:00 pm
Mangalore crime, Kankandy Police: ಹಾಡಹಗಲೇ ಚೂರ...
02-01-25 10:12 pm