ಬ್ರೇಕಿಂಗ್ ನ್ಯೂಸ್
17-12-22 11:30 am HK News Desk ದೇಶ - ವಿದೇಶ
ವಿಜಯವಾಡ, ಡಿ.16: ಆಂಧ್ರ ಪ್ರದೇಶದ ಮಾಜಿ ಸಚಿವರೊಬ್ಬರು ತಾವು ಸಾಯುವ ದಿನದ ಬಗ್ಗೆ ಭವಿಷ್ಯ ನುಡಿದಿದ್ದು, ಜೀವಂತ ಇರುವಾಗಲೇ ಪ್ರತಿ ವರ್ಷ ಸಾವಿನ ದಿನವನ್ನು ಸಂಭ್ರಮಿಸುವ ಮೂಲಕ ಎಲ್ಲರನ್ನೂ ದಂಗಾಗುವಂತೆ ಮಾಡಿದ್ದಾರೆ.
ಅಲ್ಲದೆ, ಸಾವಿನ ದಿನದ ಆಹ್ವಾನ ಪತ್ರಿಕೆಯನ್ನು ಮುದ್ರಿಸುವ ಮೂಲಕ ಭಾರಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಟಿಡಿಪಿ ಸರ್ಕಾರದ ಅವಧಿಯಲ್ಲಿ ಪಲೇಟಿ ರಾಮರಾವ್ ಅವರು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಮೇಲಾಗಿ ಅವರು ಎರಡು ಬಾರಿ ಶಾಸಕರೂ ಆಗಿದ್ದಾರೆ. ಸದ್ಯ ವೈಎಸ್‌ಆರ್‌ಸಿಪಿಯಲ್ಲಿದ್ದಾರೆ. ಅವರ ಈಗಿನ ವಯಸ್ಸು 63 ವರ್ಷ. ಆದರೆ, ಅವರು 75 ವರ್ಷಕ್ಕೆ ಅಂದರೆ 2034ರಲ್ಲಿ ಸಾಯುತ್ತೇನೆ ಎಂದು ಭವಿಷ್ಯ ನುಡಿದಿದ್ದರು. ಅದಕ್ಕಾಗಿಯೇ ಈ ವರ್ಷದಿಂದ 'ಡೆತ್ ಡೇ' ಆಚರಿಸುತ್ತಿರುವುದಾಗಿ ಮೊದಲೇ ಆಹ್ವಾನ ಪತ್ರಿಕೆ ಮುದ್ರಿಸಿದ್ದಾರೆ. ಮಾಜಿ ಸಚಿವರ ಈ ವಿಚಿತ್ರ ವರ್ತನೆ ಜನರಿಗೆ ಅಚ್ಚರಿ ತರಿಸಿದೆ.
ಆಹ್ವಾನ ಪತ್ರಿಕೆಯಲ್ಲಿ ಏನಿದೆ?
ನಾನು ನಿಮ್ಮೆಲ್ಲರನ್ನು ನನ್ನ ಸಾವಿನ ದಿನದ ಸಂಭ್ರಮಾಚರಣೆಗೆ ಆಹ್ವಾನಿಸುತ್ತೇನೆ. ನಾನು ನನ್ನ ಸಾವಿನ ದಿನವನ್ನು ಸಂಭ್ರಮಿಸಲು ಬಯಸಿದ್ದೇನೆ. ಏಕೆಂದರೆ, ಇದುವರೆಗೂ ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾ ಬಂದಿದ್ದೇನೆ. ಆದರೆ, ಅದಕ್ಕೆ ಅರ್ಥವೇ ಇಲ್ಲ. 2034 ನನ್ನ ಸಾವಿನ ದಿನ ಎಂದು ನಾನು ನಿರ್ಧರಿಸಿದ್ದೇನೆ. ನಾನು ಸಾಯಲು ಇನ್ನು 12 ವರ್ಷ ಸಮಯ ಇದೆ. ಇಂದಿನಿಂದ ನಾನು 12 ವರ್ಷ ನನ್ನ ಸಾವಿನ ದಿನವನ್ನು ಸಂಭ್ರಮಿಸುತ್ತೇನೆ. ಹೀಗಾಗಿ ನೀವೆಲ್ಲರು ಬಂದು ನನಗೆ ಆಶೀರ್ವದಿಸಿ ಎಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದ್ದು, ಆಹ್ವಾನ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇವರು ಮನುಷ್ಯನಿಗೆ ಎಷ್ಟು ಕಲಿಸಿದರೂ ಮಾನವ ಮಾತ್ರ ಸಂಪೂರ್ಣವಾಗಿ ತನ್ನ ಜೀವನ ದಾರಿಯನ್ನು ಸರಿ ಮಾಡಿಕೊಳ್ಳುತ್ತಿಲ್ಲ. ಮಾನವ ಇನ್ನೊಬ್ಬರಿಗೆ ಹಾನಿ ಮಾಡುವುದನ್ನು ನಿಲ್ಲುಸುತ್ತಿಲ್ಲ. ಮನುಷ್ಯ ಸಾಯಲೇಬೇಕೆಂದು ಎಲ್ಲ ದೇವರುಗಳು ಹೇಳಿದ್ದಾರೆ. ಹಾಗೇ ಯಾರಿಗೂ ಹಾನಿ ಮಾಡಬಾರದು ಮತ್ತು ಪರೋಪಕಾರಿಯಾಗಿರಬೇಕು ಅಂತಾ ಹೇಳಿದ್ದಾರೆ. ಭಗವಂತನ ಆಶಯದ ಜೀವಿಯಾಗಿ ಅವನು ಬದುಕಿರಲು ಇಷ್ಟು ಸಾಕು. ಒಬ್ಬ ಮನುಷ್ಯನು ತಾನು ಎಷ್ಟು ದಿನ ಬದುಕಬೇಕೆಂದು ಯೋಚಿಸಲು ಮತ್ತು ಅವನ ಮರಣದ ದಿನಾಂಕವನ್ನು ನಿರ್ಧರಿಸಲು ಬಯಸುತ್ತಾನೆ. ಸ್ವಲ್ಪ ಕಾಲ ಬದುಕುತ್ತೇನೆ ಎಂದು ತಿಳಿದ ನಂತರ, ದೇವರು ಕಲಿಸಿದಂತೆ ಜೀವಿಯ ಹಂತದಿಂದ ಮಾನವ ಹಂತಕ್ಕೆ ಬದಲಾಗಲು ಪ್ರಯತ್ನಿಸುತ್ತಾನೆ. ಅಂದರೆ, ಸಾವಿನ ಹತ್ತಿರದಲ್ಲಿ ಮಾನವನಾಗಲು ಬಯಸುತ್ತಾನೆ. ಈ ಸಿದ್ಧಾಂತವನ್ನು ಕಾರ್ಯಗತಗೊಳಿಸುವ ಮೊದಲ ಪ್ರಯತ್ನವಾಗಿ ಎಷ್ಟು ದಿನ ಬದುಕಬೇಕು ಎಂದು ಯೋಚಿಸಿ ನನ್ನ ಸಾವಿಗೆ 2034ನೇ ಇಸವಿಯನ್ನು ನಿರ್ಧರಿಸಿದ್ದೇನೆ ಎಂದು ಆಹ್ವಾನ ಪತ್ರಿಕೆಯಲ್ಲಿ ಪಾಲೇಟಿ ರಾಮರಾವ್ ತಿಳಿಸಿದ್ದಾರೆ.
1959ರಲ್ಲಿ ಜನಿಸಿದ ಪಲೇಟಿ ರಾಮರಾವ್ ಅವರು ಎಷ್ಟು ದಿನ ಬದುಕಿದ್ದರು ಎಂಬುದನ್ನು ತಿಳಿದುಕೊಂಡು ಇನ್ನು ಎಷ್ಟು ಸಮಯ ಉಳಿದಿದೆ ಎಂದು ಲೆಕ್ಕ ಹಾಕಿದರು. ಇನ್ನೂ 12 ವರ್ಷ ಬದುಕುವ ನಿರೀಕ್ಷೆಯಿರುವುದರಿಂದ ಇಂದಿನಿಂದ ತಮ್ಮ 12 ವರ್ಷದ ಪುಣ್ಯತಿಥಿಯ ಆಚರಣೆಯನ್ನು ಆರಂಭಿಸಿದ್ದು, ಅಭಿಮಾನಿಗಳು ಆಗಮಿಸಿ ಆಶೀರ್ವದಿಸಬೇಕೆಂದು ಕೋರಿದ್ದಾರೆ. 75 ವರ್ಷ ಬದುಕಬೇಕು ಎಂದುಕೊಂಡಿದ್ದ ಅವರು ಈಗ 63 ವರ್ಷ ಪೂರೈಸಿದ್ದಾರೆ. ಶನಿವಾರ ಬೆಳಗ್ಗೆ 10 ಗಂಟೆಗೆ ಚಿರಾಳ ಐಎಂಎ ಸಭಾಂಗಣದಲ್ಲಿ ನಡೆಯುವ ಸಮಾರಂಭಕ್ಕೆ ಅಭಿಮಾನಿಗಳು ಆಗಮಿಸುವಂತೆ ರಾಮರಾವ್ ವಿನಂತಿಸಿದ್ದಾರೆ.
Paleti Rama Rao Invitation now gets interesting. He says that he will die in 2034. That is why the invitations were printed in advance that the death day was being held from now. He said that these celebrations are being held locally on Saturday. This invitation card is going viral on social media. Locals are surprised by the behavior of the former minister. Wondering what is inviting in the name of death day. Paleti Rama Rao who is currently in YSRCP.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 02:47 pm
Mangalore Correspondent
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm