ಬ್ರೇಕಿಂಗ್ ನ್ಯೂಸ್
21-12-22 06:50 pm HK News Desk ದೇಶ - ವಿದೇಶ
ಮುಂಬೈ, ಡಿ.21 : ದೇಶಕ್ಕೆ ಚೀನಾ ನುಗ್ಗಿದಂತೆ ನಾವು ಕರ್ನಾಟಕಕ್ಕೆ ನುಗ್ಗುತ್ತೇವೆ ಎಂದು ಶಿವಸೇನೆಯ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಗಡಿ ಕುರಿತ ಚರ್ಚೆ ಕಾವೇರಿದ ಸಂದರ್ಭದಲ್ಲಿಯೇ ಈ ಹೇಳಿಕೆ ನೀಡಿದ್ದಾರೆ.
ಚೀನಾ ಭಾರತಕ್ಕೆ ಪ್ರವೇಶ ಮಾಡಿದಂತೆ ನಾವು ಕರ್ನಾಟಕಕ್ಕೆ ನುಗ್ಗುತ್ತೇವೆ. ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ. ನಾವು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಬಯಸುತ್ತೇವೆ. ಆದರೆ ಕರ್ನಾಟಕ ಮುಖ್ಯಮಂತ್ರಿ ಕಿಡಿ ಹಚ್ಚುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ದುರ್ಬಲ ಸರ್ಕಾರ ಇದ್ದು, ಈ ಬಗ್ಗೆ ಯಾವುದೇ ನಿಲುವು ತೆಗೆದುಕೊಳ್ಳುತ್ತಿಲ್ಲ ಎಂದವರು ಟೀಕಿಸಿದ್ದಾರೆ.
ಸದ್ಯ ಮಹಾರಾಷ್ಟ್ರದಲ್ಲೂ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಅಲ್ಲಿಯೂ ಗಡಿ ಸಂಬಂಧ ತೀವ್ರ ಚರ್ಚೆಗಳಾಗುತ್ತಿವೆ. ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ.

'ಮಹಾರಾಷ್ಟ್ರದ ಲೋಕಸಭೆ ಸದಸ್ಯರೊಬ್ಬರನ್ನು ಬೆಳಗಾವಿಗೆ ಪ್ರವೇಶಿಸುವುದನ್ನು ತಡೆಯಲಾಗಿದೆ. ಯಾರನ್ನೂ ತಡೆಯಬಾರದು ಎಂದು ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಆದರೆ ಜಿಲ್ಲಾಧಿಕಾರಿ ನಿಷೇಧ ಹೇರಲು ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಏಕನಾಥ ಶಿಂದೆ, 'ಗಡಿ ಸಮಸ್ಯೆ ಸಂಬಂಧ ಇದೇ ಮೊದಲ ಬಾರಿಗೆ ದೇಶದ ಗೃಹಮಂತ್ರಿ ಮಧ್ಯಸ್ಥಿಕೆ ವಹಿಸಿದ್ದಾರೆ. ಗಡಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ನಾವು ನಮ್ಮ ವಾದವನ್ನು ಮುಂದಿಟ್ಟಿದ್ದೇವೆ. ಈಗ ನಾವು ಗಡಿ ಸಂಬಂಧ ರಾಜಕೀಯ ಮಾಡಬಾರದು. ಗಡಿ ಜನರ ಜತೆ ನಾವು ನಿಂತುಕೊಳ್ಳಬೇಕಿದೆ ಎಂದರು.
ಈ ಹಿಂದೆ ಶಿವಸೇನೆ ಸಂಸದ ಧೈರ್ಯಶೀಲ ಮಾನೆ ಅವರು ಬೆಳಗಾವಿಗೆ ಬರುವುದಾಗಿ ಘೋಷಣೆ ಮಾಡಿದ್ದರು. ಬೆಳಗಾವಿ ಪ್ರವೇಶಕ್ಕೆ ಅವರಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಅದಕ್ಕೂ ಮುನ್ನ ಮಹಾರಾಷ್ಟ್ರ ಸಚಿವರ ತಂಡಕ್ಕೆ ಬೆಳಗಾವಿ ಪ್ರವೇಶಕ್ಕೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದರು.
The dispute between the state of Maharashtra and Karnataka over the Belagavi border has now been completely shrouded in a fierce verbal exchange from political leaders, with Uddhav Thackeray-led Shiv Sena - now Shiv Sena (Uddhav Balasaheb Thackeray) - leader Sanjay Raut claiming to enter Karnataka like China. Sanjay Raut was trying to draw an analogy between the Chinese aggression along the LAC that constantly seeks to alter the status quo and the ongoing border dispute between the two states.
21-02-26 11:27 am
HK News Desk
ಹಾಸನಾಂಬೆ ಉತ್ಸವ ಟೆಂಡರ್ನಲ್ಲಿ ಭಾರೀ ಗೋಲ್ಮಾಲ್ ? ;...
20-02-26 09:20 pm
ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ಹಿಂದಕ್ಕೆ ; 26 ತ...
19-02-26 09:29 pm
ಪರಮೇಶ್ವರ್ ಅಥವಾ ಡಿಕೆಶಿ ಯಾರಾಗ್ತಾರೆ ಮುಂದಿನ ಮುಖ್ಯ...
19-02-26 03:11 pm
ವಿಧಾನಸೌಧ ಒಳಗಡೆ ಮಾಧ್ಯಮಗಳಿಗೆ ಲಕ್ಷ್ಮಣ ರೇಖೆ ; ಭದ್...
18-02-26 09:02 pm
22-02-26 06:19 pm
HK News Desk
ಲವ್ ಜಿಹಾದ್’ ತಡೆಗೆ ಗುಜರಾತ್ ನಲ್ಲಿ ವಿವಾಹ ನೋಂದಣಿ...
21-02-26 05:01 pm
ಸುಂಕ ನೀತಿ ಕಾನೂನುಬಾಹಿರ ಎಂದ ಅಮೆರಿಕ ಸುಪ್ರೀಂ ಕೋರ್...
21-02-26 03:07 pm
ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಶರ್ಟ್ ಬಿ...
20-02-26 08:45 pm
ಗಲ್ಫ್ ದೇಶಗಳತ್ತ ಅಮೆರಿಕದ ಯುದ್ಧ ವಿಮಾನಗಳು ; ಇರಾನ್...
19-02-26 11:04 pm
22-02-26 06:55 pm
Mangalore Correspondent
ಸುಜಿತ್ ಮಾಡೂರು ಬಿಜೆಪಿಯಿಂದ ಉಚ್ಚಾಟನೆ ಪ್ರಕರಣ ; ಸಾ...
21-02-26 09:30 pm
ಲೂಡೋ ಆಡುವಾಗ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟು ವರ್...
21-02-26 09:02 pm
Mangalore, SIT, Sridhar: ಶಿಬಾಜೆ ಶ್ರೀಧರ ಮುಗೇರ...
20-02-26 06:05 pm
Kotekar, Mangalore News: ಕೋಟೆಕಾರು ಪ.ಪಂ ಸದಸ್ಯ...
20-02-26 04:18 pm
22-02-26 10:43 pm
Mangalore Correspondent
ಜಮ್ಮು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ; ಜೈಶ್ ಕಮಾ...
22-02-26 10:00 pm
ಮದುವೆ ದಿನವೇ ಆಘಾತ ; ಹಸೆಮಣೆ ಏರಬೇಕಿದ್ದ ಇಬ್ಬರು ಸೋ...
22-02-26 09:32 pm
ಒಂದು ಕೋಟಿ ಕಾಮಗಾರಿಗೆ 11 ಲಕ್ಷ ಬೇಡಿಕೆ ; ಗುತ್ತಿಗೆ...
21-02-26 05:50 pm
ಬೆಂಗಳೂರಿನಲ್ಲಿ ಭಯೋತ್ಪಾದಕ ಜಾಲ ; ಎನ್ಐಎ ವಾಂಟೆಡ್ ಲ...
21-02-26 04:29 pm