ಬ್ರೇಕಿಂಗ್ ನ್ಯೂಸ್
03-01-23 11:11 am HK News Desk ದೇಶ - ವಿದೇಶ
ನವದೆಹಲಿ, ಜ.3: ರಾಜಧಾನಿ ದೆಹಲಿಯಲ್ಲಿ ಹೊಸ ವರ್ಷದ ದಿನವೇ ಯುವತಿಯನ್ನು ಕಾರು ಎಳೆದೊಯ್ದ ಭೀಕರ ಅಪಘಾತ ಪ್ರಕರಣ ರಾಜಕೀಯ ಸ್ವರೂಪಕ್ಕೆ ತಿರುಗಿದೆ. ಸುಲ್ತಾನ್ಪುರಿಯಲ್ಲಿ ಹೊಸವರ್ಷದ ದಿನವೇ ಸ್ಕೂಟರ್ ಚಲಾಯಿಸುತ್ತಿದ್ದ 20 ವರ್ಷದ ಯುವತಿಯನ್ನು ಕಾರು ಚಾಲಕ ಡಿಕ್ಕಿಯಾದರೂ ಹತ್ತು ಕಿಮೀ ಉದ್ದಕ್ಕೂ ಎಳ್ಕೊಂಡು ಹೋಗಿದ್ದು ಇಡೀ ದೇಶದ ಜನರ ಮನ ಕಲಕುವಂತೆ ಮಾಡಿದೆ.
ಯುವತಿ ಕಾರಿನಡಿಗೆ ಸಿಲುಕಿ ಸುಮಾರು ಹತ್ತು ಕಿಮೀ ದೂರ ಎಳೆಯಲ್ಪಟ್ಟಿದ್ದಳು. ಬಳಿಕ ಯುವತಿ ನಗ್ನ ಸ್ಥಿತಿಯಲ್ಲಿ ರಸ್ತೆ ನಡುವೆ ಬಿದ್ದಿದ್ದಳು ಎನ್ನಲಾಗಿದೆ. ಈ ಅಮಾನುಷ ಕೃತ್ಯಕ್ಕೆ ಸಂಬಂಧಪಟ್ಟಂತೆ ಕಾರಿನಲ್ಲಿದ್ದ ಬಿಜೆಪಿ ನಾಯಕ ಅಮಿತ್ ಮಿತ್ತಲ್ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿ ಇದ್ದ ಐವರಲ್ಲಿ ಇವರೂ ಒಬ್ಬರು. ಇತರ ನಾಲ್ವರೂ ಬಂಧಿತರಾಗಿದ್ದಾರೆ. ಇದರ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಕಿಡಿ ಕಾರಿದೆ. ಅರೆಸ್ಟ್ ಆದವನು ಬಿಜೆಪಿ ಸದಸ್ಯ ಆಗಿದ್ದರಿಂದ ಪೊಲೀಸರು ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆಪ್ ವಕ್ತಾರ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆ ಹೊರಭಾಗದಲ್ಲಿ ದೊಡ್ಡ ಬ್ಯಾನರ್ ಇರುವ ಫೋಟೋವೀಗ ವೈರಲ್ ಆಗುತ್ತಿದೆ. ಆ ಬ್ಯಾನರ್ನಲ್ಲಿ ಬಿಜೆಪಿ ನಾಯಕ ಅಮಿತ್ ಮಿತ್ತಲ್ ಫೋಟೋವನ್ನು ನೋಡಬಹುದು. ಬ್ಯಾನರ್ ಹಾಕಿದ್ದ ಬಳಿಯ ಪೊಲೀಸ್ ಠಾಣೆಯಲ್ಲೇ ಈಗ ಮಿತ್ತಲ್ ಮತ್ತು ಅವರ ಸ್ನೇಹಿತರನ್ನು ಬಂಧಿಸಿಡಲಾಗಿದೆ. ಅಂದಮೇಲೆ ಅವರಿಗೆ ಅದೆಷ್ಟು ಪಾರದರ್ಶಕವಾಗಿ ಶಿಕ್ಷೆ ವಿಧಿಸಬಹುದು?' ಎಂದು ಸೌರಭ್ ಪ್ರಶ್ನಿಸಿದ್ದಾರೆ.
'ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಆಗಿರಬಹುದು. ಅತ್ಯಾಚಾರವೂ ಆಗಿರಬಹುದು. ಇಲ್ಲದೆ ಇದ್ದರೆ ಯುವತಿ ಅದು ಹೇಗೆ ಸಂಪೂರ್ಣ ನಗ್ನಳಾಗಿ ಪತ್ತೆಯಾಗುತ್ತಾಳೆ? ಆದರೆ ಪೊಲೀಸರು ಇದ್ಯಾವುದೇ ಆಯಾಮದಲ್ಲಿ ತನಿಖೆ ಕೈಗೆತ್ತಿಕೊಳ್ಳುತ್ತಿಲ್ಲ. ಆರೋಪಿಗಳ ವಿರುದ್ಧ ಯಾವುದೇ ಕಠಿಣ ಕ್ರಮಗಳಿರುವ ಕಾಯ್ದೆಯಡಿ ಪ್ರಕರಣ ದಾಖಲಿಸಿಲ್ಲ. ಅವರ ನಡವಳಿಕೆ ವಿಚಿತ್ರ ಎನ್ನಿಸುತ್ತಿದೆ. ಪೊಲೀಸರು ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ' ಎಂದು ಸೌರಭ್ ಭಾರದ್ವಾಜ್ ಹೇಳಿದ್ದಾರೆ.
The 20-year-old woman, killed in the early hours of New Year after her scooter was hit by a car, was dragged for 12 kilometres under the vehicle on the city's roads, police said and added culpable homicide among other stringent sections on Monday in the case following protests over alleged "shoddy investigation".
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 10:27 pm
Mangalore Correspondent
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
16-05-25 11:06 pm
Mangalore Correspondent
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm