ಗುಜರಾತ್ ದಂಗೆ ; ಬಿಬಿಸಿ ಡಾಕ್ಯುಮೆಂಟರಿ ಪ್ರಸಾರಕ್ಕೆ ತಡೆ, ಯೂಟ್ಯೂಬ್, ಟ್ವಿಟರ್ ವಿಡಿಯೋ ತೆರವಿಗೆ ಕೇಂದ್ರ ಸೂಚನೆ

22-01-23 07:50 pm       HK News Desk   ದೇಶ - ವಿದೇಶ

ಗುಜರಾತ್ ದಂಗೆ ಕುರಿತ ಬಿಬಿಸಿ ಡಾಕ್ಯುಮೆಂಟರಿಯ ಎಲ್ಲಾ ಲಿಂಕ್ ಗಳನ್ನು ತೆಗೆದುಹಾಕಲು ಯೂಟ್ಯೂಬ್ ಮತ್ತು ಟ್ವಿಟರ್ ಗೆ ಕೇಂದ್ರ ಸರ್ಕಾರ ಸೂಚಿಸಿದೆ.

ನವದೆಹಲಿ, ಜ.22 : ಗುಜರಾತ್ ದಂಗೆ ಕುರಿತ ಬಿಬಿಸಿ ಡಾಕ್ಯುಮೆಂಟರಿಯ ಎಲ್ಲಾ ಲಿಂಕ್ ಗಳನ್ನು ತೆಗೆದುಹಾಕಲು ಯೂಟ್ಯೂಬ್ ಮತ್ತು ಟ್ವಿಟರ್ ಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಬಿಬಿಸಿ ವಾಹಿನಿ 2002ರ ಗುಜರಾತ್ ದಂಗೆಯ ಕುರಿತಾದ ಸಾಕ್ಷ್ಯಚಿತ್ರವನ್ನು ರಚಿಸಿದ್ದು ಅದರಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಅಣಕಿಸಿದೆ ಎನ್ನಲಾಗುತ್ತಿದೆ. 'ಇಂಡಿಯಾ: ದಿ ಮೋದಿ ಕ್ವಶ್ಚನ್' ಶೀರ್ಷಿಕೆಯ ಸಾಕ್ಷ್ಯಚಿತ್ರದ ಟ್ವೀಟ್‌ಗಳು ಮತ್ತು ಯೂಟ್ಯೂಬ್ ವೀಡಿಯೊಗಳು ಇನ್ನು ಮುಂದೆ ಮೈಕ್ರೋಬ್ಲಾಗಿಂಗ್ ಮತ್ತು ವೀಡಿಯೋ ಹಂಚಿಕೆ ವೆಬ್‌ ಸೈಟ್‌ ಗಳಲ್ಲಿ ಕಾಣಿಸಬಾರದು ಎಂದು ಕೇಂದ್ರ ಸರಕಾರ ಆದೇಶ ಮಾಡಿದೆ. 

TMC's Derek O'Brien suspended from Rajya Sabha for throwing Rule Book |  Deccan Herald

ಈ ಕುರಿತ 50ಕ್ಕೂ ಹೆಚ್ಚು ಟ್ವೀಟ್‌ಗಳನ್ನು ತೆಗೆದುಹಾಕಲು ಸಚಿವಾಲಯ ಟ್ವಿಟರ್‌ಗೆ ತಿಳಿಸಿದೆ. ಬಿಬಿಸಿ ಸಾಕ್ಷ್ಯಚಿತ್ರದ ನನ್ನ ಟ್ವೀಟ್ ಅನ್ನು ಟ್ವಿಟರ್ ತೆಗೆದು ಹಾಕಿದೆ. ಇದು ಲಕ್ಷಗಟ್ಟಲೆ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಂದು ಗಂಟೆಯ ಬಿಬಿಸಿ ಸಾಕ್ಷ್ಯಚಿತ್ರವು ಪ್ರಧಾನಿ ಅಲ್ಪಸಂಖ್ಯಾತರನ್ನು ಹೇಗೆ ದ್ವೇಷಿಸುತ್ತಾರೆ ಎಂಬುದನ್ನು ಬಹಿರಂಗಪಡಿಸುತ್ತದೆ” ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಓಬ್ರಿಯಾನ್ ಆರೋಪಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ನಿಯಮಗಳು, 2021 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಲಿಂಕ್‌ ಗಳನ್ನು ತೆಗೆದುಹಾಕಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ ನೀಡಿದೆ. ಯೂಟ್ಯೂಬ್ ಮತ್ತು ಟ್ವಿಟರ್ ಎರಡೂ ಆದೇಶವನ್ನು ಅನುಸರಿಸಲು ಒಪ್ಪಿಕೊಂಡಿವೆ ಎಂದು ಮೂಲಗಳು ತಿಳಿಸಿದೆ.

News reports on Saturday (January 21) revealed that the Narendra Modi government has asked both YouTube and Twitter to remove links posting the BBC documentary about the 2002 Gujarat communal violence. The two platforms have reportedly agreed to take this action.Several tweets and video links posting the documentary, “India: The Modi Question”, have been removed. Trinamool Congress MP Derek O’Brien tweeted that his tweet sharing a link to the documentary had been removed by Twitter. The notice he received from Twitter confirmed that his tweet was removed based on a request from the Indian government.