ಅಮೆರಿಕದಲ್ಲಿ ಗುಂಡಿನ ದಾಳಿ ; 10 ಮಂದಿ ಸಾವು, ಚೀನಾ ಹೊಸ ವರ್ಷಾಚರಣೆ ವೇಳೆ ಕೃತ್ಯ! 

23-01-23 12:47 pm       HK News Desk   ದೇಶ - ವಿದೇಶ

ಚಾಂದ್ರಮಾನ ಹೊಸ ವರ್ಷದ ಆಚರಣೆಯ ಬಳಿಕ ಲಾಸ್ ಏಂಜಲೀಸ್‌ನ ಪೂರ್ವದ ನಗರದಲ್ಲಿ ಶನಿವಾರ ತಡರಾತ್ರಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಒಂಬತ್ತು ಜನರು ಸಾವಿಗೀಡಾಗಿದ್ದಾರೆ. ಸಾವಿರಾರು ಜನ ಹೊಸ ವರ್ಷಾಚರಣೆಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಂಟೆರಿ ಪಾರ್ಕ್, ಜ.23 :  ಚಾಂದ್ರಮಾನ ಹೊಸ ವರ್ಷದ ಆಚರಣೆಯ ಬಳಿಕ ಲಾಸ್ ಏಂಜಲೀಸ್‌ನ ಪೂರ್ವದ ನಗರದಲ್ಲಿ ಶನಿವಾರ ತಡರಾತ್ರಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಒಂಬತ್ತು ಜನರು ಸಾವಿಗೀಡಾಗಿದ್ದಾರೆ. ಸಾವಿರಾರು ಜನ ಹೊಸ ವರ್ಷಾಚರಣೆಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ 10:22 ಕ್ಕೆ ಗುಂಡಿನ ದಾಳಿ ವರದಿಯಾಗಿದೆ. ಮಾಂಟೆರಿ ಪಾರ್ಕ್‌ನ ವಹಿವಾಟು ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಬಂದೂಕುಧಾರಿ ವ್ಯಕ್ತಿಯೊಬ್ಬನಿಂದ ದಾಳಿ ನಡೆದಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. 

Authorities identify gunman in Lunar New Year mass shooting that left 10  dead

ದಾಳಿಗೆ ಪ್ರತಿಯಾಗಿ ಹತ್ತಾರು ಪೊಲೀಸ್ ಅಧಿಕಾರಿಗಳು ಹಲವಾರು ಗಂಟೆಗಳವರೆಗೆ ಪ್ರತಿದಾಳಿ ನಡೆಸಿದ ವರದಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಲಿಲ್ಲ.

Lunar New Year mass shooting: What's known about suspected gunman Huu Can  Tran

ಮಾಂಟೆರಿ ಪಾರ್ಕ್ 60,000 ಜನರನ್ನು ಹೊಂದಿದ್ದು, ಬಹುಪಾಲು ಮಂದಿ ಏಷ್ಯಾದವರು.  ಮೂರು ಜನರು ತಮ್ಮ ವ್ಯಾಪಾರ ಕ್ರೇಂದ್ರಕ್ಕೆ ನುಗ್ಗಿ ಮಳಿಗೆ ಬಾಗಿಲು ಮುಚ್ಚುವಂತೆ ಹೇಳಿದರು ಎಂದು ದಾಳಿ ಸಂಭವಿಸಿದ ಬೀದಿಯಲ್ಲಿ ಆಹಾರ ಕೇಂದ್ರ ಹೊಂದಿರುವ ಸೆಯುಂಗ್ ವೊನ್ ಚೋಯ್ ಲಾಸ್ ಆಂಗಲ್ಸ್ ಟೈಮ್ಸ್‌ಗೆ ಹೇಳಿದ್ದಾರೆ.

ಶನಿವಾರ ಎರಡು ದಿನಗಳ ಹೊಸ ವರ್ಷದ ಉತ್ಸವದ ಪ್ರಾರಂಭವಾಗಿದೆ. ಇದು ದಕ್ಷಿಣ ಕ್ಯಾಲಿಫೋರ್ನಿಯಾದ ಅತಿದೊಡ್ಡ ಚಾಂದ್ರಮಾನ ಹೊಸ ವರ್ಷದ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

Authorities have identified the man responsible for a deadly shooting inside a Monterey Park dance studio as Hemet resident Huu Can Tran, 72. Tran died of a self-inflicted gunshot wound in a strip mall parking lot near Sepulveda and Hawthorne boulevards in Torrance, law enforcement sources said. “We still are not clear on the motive,” Los Angeles County Sheriff Robert Luna said.