ಪದ್ಮ ಪ್ರಶಸ್ತಿ ಪ್ರಕಟ ; ಎಸ್ಸೆಂ ಕೃಷ್ಣ ಪದ್ಮವಿಭೂಷಣ, ಎಸ್.ಎಲ್. ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ 

25-01-23 10:48 pm       HK News Desk   ದೇಶ - ವಿದೇಶ

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾರತದ ಎರಡನೇ ಅತ್ಯುನ್ನತ ಪದ್ಮವಿಭೂಷಣ ಮತ್ತು ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ನವದೆಹಲಿ, ಜ.25 : ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾರತದ ಎರಡನೇ ಅತ್ಯುನ್ನತ ಪದ್ಮವಿಭೂಷಣ ಮತ್ತು ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಒಟ್ಟು 106 ಮಂದಿಗೆ ಪದ್ಮ ಪ್ರಶಸ್ತಿ ಘೋಷಣೆಯಾಗಿದ್ದು 6 ಪದ್ಮ ವಿಭೂಷಣ, 9 ಪದ್ಮಭೂಷಣ ಮತ್ತು 91 ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಕನ್ನಡದ ಹಿರಿಯ ಮತ್ತು ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪ ಹಾಗೂ ಇನ್ಪೋಸಿಸ್ ಕೊಡುಗೈ ದಾನಿ ಸುಧಾಮೂರ್ತಿ ಅವರನ್ನು ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. 

ಪದ್ಮವಿಭೂಷಣಕ್ಕೆ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ (ಮರಣೋತ್ತರ), ಬಾಲಕೃಷ್ಣ ದೋಶಿ (ಮರಣೋತ್ತರ), ಕಲಾವಿದ ಜಾಕಿರ್ ಹುಸೇನ್, ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ, ದಿಲೀಪ್ ಮಹಲನಾಬಿಸ್ (ಮರಣೋತ್ತರ), ಶ್ರೀನಿವಾಸ್ ವರದನ್ ಅವರನ್ನು ಪರಿಗಣಿಸಲಾಗಿದೆ. 

Tabla Maestro Ustad Zakir Hussain, Mulayam Singh Get Padma Vibhushan; KM  Birla, Sudha Murty Bag Padma Bhushan

Bhyrappa receives Padma Shri award | Mysuru News - Times of India

TiE names Kumar Mangalam Birla as Global Entrepreneur of the year | Business  Standard News

IISER professor Deepak Dhar becomes first Indian to bag Boltzmann Medal |  Cities News,The Indian Express

ಪದ್ಮಭೂಷಣ ಪ್ರಶಸ್ತಿಗೆ ಎಸ್. ಎಲ್ ಭೈರಪ್ಪ, ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ, ದೀಪಕ್ ಧರ್, 
ಸಂಗೀತ ಕಲಾವಿದೆ ವಾಣಿ ಜಯರಾಮ್, ಸ್ವಾಮಿ ಚಿನ್ನ ಜೀಯರ್, ಸುಮನ್ ಕಲ್ಯಾಣಪುರ, ಕಪಿಲ್ ಕಪೂರ್, ಸುಧಾ ಮೂರ್ತಿ, ಕಮಲೇಶ್ ಡಿ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ 91 ಮಂದಿಗೆ ಪದ್ಮಶ್ರೀ ಒಲಿದು ಬಂದಿದೆ.

Former Uttar Pradesh Chief Minister Mulayam Singh Yadav, former External Affairs minister in the UPA government S M Krishna and tabla maestro Zakir Hussain were among six luminaries selected for the country's second highest civilian honour Padma Vibhushan. According to an official statement released on the eve of Republic Day, Yadav, medical professional Dilip Mahalanabis who returned from the US to serve in 1971-Bangladesh war refugee camps, and noted architect Balkrishna Doshi were selected for the Padma Vibhushan posthumously.