ದುಬೈನಿಂದ ಬರ್ತಿದ್ದ ಸ್ಪೈಸ್ ಜೆಟ್ ವಿಮಾನ ಹೈಜಾಕ್ ಟ್ವೀಟ್ ; ತಬ್ಬಿಬ್ಬಾಗಿಸಿದ ಪ್ರಯಾಣಿಕ 

27-01-23 01:17 pm       HK News Desk   ದೇಶ - ವಿದೇಶ

ವಿಮಾನ ಪ್ರಯಾಣ ವಿಳಂಬದಿಂದ ಅಸಮಾಧಾನಗೊಂಡ ಯುವಕನೊಬ್ಬ ವಿಮಾನವನ್ನು ಹೈಜಾಕ್ ಮಾಡಿದ್ದಾಗಿ ಟ್ವೀಟ್​ ಮಾಡಿ ಆತಂಕ ಮೂಡಿಸಿದ ಘಟನೆ ನಡೆದಿದೆ.

ನವದೆಹಲಿ, ಜ.27: ವಿಮಾನ ಪ್ರಯಾಣ ವಿಳಂಬದಿಂದ ಅಸಮಾಧಾನಗೊಂಡ ಯುವಕನೊಬ್ಬ ವಿಮಾನವನ್ನು ಹೈಜಾಕ್ ಮಾಡಿದ್ದಾಗಿ ಟ್ವೀಟ್​ ಮಾಡಿ ಆತಂಕ ಮೂಡಿಸಿದ ಘಟನೆ ನಡೆದಿದೆ. ದುಬೈಯಿಂದ ಭಾರತಕ್ಕೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿ ಬಂಧನಕ್ಕೀಡಾಗಿದ್ದಾನೆ. 

ಮೋತಿ ಸಿಂಗ್ ಎಂಬ ವ್ಯಕ್ತಿ ಟ್ವೀಟ್​ ಮಾಡಿ ಪಜೀತಿಗೆ ಸಿಲುಕಿರುವ ಪ್ರಯಾಣಿಕ. ಈತ ವಿಮಾನದಲ್ಲಿ ಕುಳಿತು ಟ್ವೀಟ್​ ಮಾಡಿದ್ದಲ್ಲದೆ, ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಟ್ಯಾಗ್ ಮಾಡಿದ್ದಾನೆ. ಏರ್‌ಲೈನ್ಸ್ ಸಿಬ್ಬಂದಿಯೊಂದಿಗೆ ಕೆಲವು ಪ್ರಯಾಣಿಕರು ಜಗಳವಾಡುತ್ತಿರುವ ವಿಡಿಯೋವನ್ನೂ ರಾಥೋಡ್ ಫೋಸ್ಟ್ ಮಾಡಿದ್ದ. 

PFI ban: Two more members arrested under UAPA by Delhi Police | Mint

ಜನರು ಆತಂಕಗೊಂಡು ಫೋನ್ ಮಾಡುತ್ತಿದ್ದಂತೆ ತಪ್ಪಿನ ಅರಿವಾಗಿದ್ದು ಟ್ವೀಟರ್ ನಲ್ಲಿಯೆ ತನ್ನ ತಪ್ಪಾಗಿದೆಯೆಂದು ಕ್ಷಮೆ ಯಾಚಿಸಿದ್ದಾನೆ. ವಿಮಾನ ವಿಳಂಬದಿಂದ ಆಕ್ರೋಶಗೊಂಡು ಈ ರೀತಿ ಮಾಡಿದ್ದಾಗಿ ತಿಳಿಸಿದ್ದಾನೆ. ಇದರ ಬೆನ್ನಲ್ಲೇ ಪೊಲೀಸರು ಮೋತಿ ಸಿಂಗ್ ನನ್ನು ಬಂಧಿಸಿದ್ದಾರೆ.

The Delhi Police has arrested a 29-year-old male passenger for falsely tweeting “flight hijack" at Indira Gandhi International Airport. Moti Singh Rathore, a native of Rajasthan’s Nagaur, arrived at the IGI airport on January 25 by a Dubai-Jaipur SpiceJet SG 58 flight after it got diverted to the national capital due to bad weather conditions. The police said the flight landed at 09:45 am at the Delhi airport and was given all clearance to depart at 13:40 pm. In the meantime, the passenger allegedly tweeted “flight highjack".