ಅದಾನಿ ನಡುಗಿಸಿದ ಅಮೆರಿಕದ ವರದಿ ; ಕಂಪನಿ ಷೇರು ಮೌಲ್ಯ ದಿಢೀರ್ ಕುಸಿತ, 40 ಸಾವಿರ ಕೋಟಿ ನಷ್ಟ, ಸಿರಿವಂತನ ಸ್ಥಾನ ಏಳನೇ ಸ್ಥಾನಕ್ಕೆ

27-01-23 10:34 pm       HK News Desk   ದೇಶ - ವಿದೇಶ

ಕೆಲವೇ ವರ್ಷಗಳಲ್ಲಿ ಭಾರತದ ಅತ್ಯಂತ ಸಿರಿವಂತನಾಗಿದ್ದಲ್ಲದೆ, 2022ರಲ್ಲಿ ದಿಢೀರ್ ಆಗಿ ಜಗತ್ತಿನ ಎರಡನೇ ಸಿರಿವಂತನೆಂಬ ಪಟ್ಟ ದಕ್ಕಿಸಿಕೊಂಡಿದ್ದ ಗೌತಮ್ ಅದಾನಿ ಒಡೆತನದ ಕಂಪನಿಗಳ ಷೇರು ಮೌಲ್ಯ ದಿಢೀರ್ ಕುಸಿತ ಕಂಡಿದೆ.

ಮುಂಬೈ, ಜ.27: ಕೆಲವೇ ವರ್ಷಗಳಲ್ಲಿ ಭಾರತದ ಅತ್ಯಂತ ಸಿರಿವಂತನಾಗಿದ್ದಲ್ಲದೆ, 2022ರಲ್ಲಿ ದಿಢೀರ್ ಆಗಿ ಜಗತ್ತಿನ ಎರಡನೇ ಸಿರಿವಂತನೆಂಬ ಪಟ್ಟ ದಕ್ಕಿಸಿಕೊಂಡಿದ್ದ ಗೌತಮ್ ಅದಾನಿ ಒಡೆತನದ ಕಂಪನಿಗಳ ಷೇರು ಮೌಲ್ಯ ದಿಢೀರ್ ಕುಸಿತ ಕಂಡಿದೆ. ಅದಾನಿ ಕಂಪೆನಿಗಳ ಬಗ್ಗೆ ಅಮೆರಿಕದ ರೀಸರ್ಚ್ ಕಂಪನಿಯೊಂದು ವರದಿ ನೀಡಿದ ಬೆನ್ನಲ್ಲೇ ಜಗತ್ತಿನಾದ್ಯಂತ ಷೇರುದಾರರು ಅದಾನಿ ಷೇರುಗಳನ್ನು ಮಾರಲು ತೊಡಗಿದ್ದಾರೆ.

ಜ.25ರಿಂದ ದಿಢೀರ್ ಷೇರು ವಹಿವಾಟಿನಲ್ಲಿ ಅದಾನಿ ಮೌಲ್ಯ ಕುಸಿಯತೊಡಗಿದ್ದು ಮೂರು ದಿನಗಳಲ್ಲಿ ಸುಮಾರು ಎರಡೂವರೆ ಲಕ್ಷ ಬಿಲಿಯನ್ ಡಾಲರ್ ನಷ್ಟು ಕಂಪನಿ ನಷ್ಟ ಅನುಭವಿಸಿದೆ. ಅಂದರೆ, ಸುಮಾರು 40 ಸಾವಿರ ಕೋಟಿ ರೂಪಾಯಿ ಅದಾನಿ ಸಮೂಹಕ್ಕೆ ನಷ್ಟವಾಗಿದೆ ಎನ್ನಲಾಗಿದೆ. ಇದರೊಂದಿಗೆ ಜಗತ್ತಿನ ಸಿರಿವಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ನೇರವಾಗಿ ಏಳನೇ ಸ್ಥಾನಕ್ಕೆ ಅದಾನಿ ಸ್ಥಾನ ಕುಸಿದು ಹೋಗಿದೆ. ಅಮೆರಿಕ ಮೂಲದ ಹಿಂಡನ್ ಬರ್ಗ್ ರೀಸರ್ಚ್ ಎಂಬ ಕಂಪನಿಯು ಅದಾನಿ ಸಮೂಹ ಸಂಸ್ಥೆಗಳ ಬಗ್ಗೆ ವರದಿ ಪ್ರಕಟಿಸಿದ್ದು, ಅದಾನಿ ಕಂಪನಿಯು ಅಪಾರ ಪ್ರಮಾಣದ ಸಾಲ ಹೊಂದಿದೆ. ಅಲ್ಲದೆ, ಅದರ ಬ್ಯಾಲೆನ್ಸ್ ಶೀಟ್ ಕ್ಲೀಯರ್ ಆಗಿಲ್ಲ. ಯಾವುದೇ ಸಮಯದಲ್ಲಿ ಇದರ ಮೌಲ್ಯ ಕುಸಿಯಬಹುದು ಎಂದು ವರದಿ ನೀಡಿತ್ತು. ಅದಾನಿ ಕಂಪನಿಗಳ ಷೇರು ಮೌಲ್ಯವನ್ನು ವಾಸ್ತವಕ್ಕಿಂತ 85 ಶೇಕಡಾ ಹೆಚ್ಚುವರಿಯಾಗಿ ತೋರಿಸಲಾಗಿದೆ ಎಂದಿತ್ತು.

Adani group loses $48 billion since Jan 25; FPO takes a hit in light of  Hindenburg report - The Hindu

ಇದರಿಂದಾಗಿ ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯ ಕುಸಿಯತೊಡಗಿದೆ. ಅದಾನಿ ಸಮೂಹದ ಎಸಿಸಿ ಮತ್ತು ಅಜಂತಾ ಸಿಮೆಂಟ್ ಕಂಪನಿಗಳ ಷೇರು ಕೂಡ ಕುಸಿದು ಹೋಗಿದೆ. ಅದಾನಿ ಟೋಟಲ್ ಗ್ಯಾಸ್ ಷೇರು ಮೌಲ್ಯ ಶುಕ್ರವಾರ 20 ಶೇಕಡಾ ಇಳಿಕೆಯಾಗಿದ್ದರೆ, ಅದಾನಿ ಪೋರ್ಟ್ಸ್, ಎಸ್ಇಜೆಡ್ ಮೌಲ್ಯ 10 ಶೇ. ಇಳಿಕೆಯಾಗಿದೆ. ಅದಾನಿ ಟ್ರಾನ್ಸ್ ಮಿಶನ್ 17 ಪರ್ಸೆಂಟ್ ಇಳಿದುಹೋಗಿದೆ. ಅದಾನಿ ಕಂಪನಿಗಳ ಸಾಲ- ಮೇಳ ತಾಳೆ ಹೊಂದಿಲ್ಲ ಒಂದೇ ವರದಿಯನ್ನು ನಂಬಿ ಜಗತ್ತಿನಾದ್ಯಂತ ಷೇರುದಾರರು ಅದಾನಿ ಷೇರುಗಳನ್ನು ಮಾರಲು ತೊಡಗಿರುವುದು ಮೌಲ್ಯ ಕುಸಿಯಲು ಕಾರಣವಾಗಿದೆ.

ಇದೇ ವೇಳೆ, ಅದಾನಿ ಕಂಪನಿ, ಅಮೆರಿಕದ ಹಿಡನ್ ಬರ್ಗ್ ರಿಸರ್ಚ್ ನೀಡಿರುವ ವರದಿಯನ್ನು ಅಲ್ಲಗಳೆದಿದ್ದು, ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ದುರುದ್ದೇಶಪೂರಿತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ ಕಳೆಯುವುದಕ್ಕಾಗಿ ಇಂತಹ ವರದಿ ನೀಡಿದೆ ಎಂದು ಕಂಪನಿ ಹೇಳಿದೆ.

Hindenburg Research's report alleging accounting frauds, stock manipulations and money laundering by the Adani group wiped out Rs 2.37 lakh crore from the group market capitalisation in a span of just two days. Adani Total Gas, the most vauled group stock, saw its m-cap falling by Rs 76,000 crore in two days; Adani Transmission  saw its m-cap plunging by Rs 63,700 crore. These two Adani group stocks were heavily battered in Friday's trade, tanking up to 15 per cent.