ಆರ್ಡರ್ ಮಾಡಿದು ಮೊಬೈಲ್ ಫೋನ್ ಸಿಕ್ಕಿದ್ದು ಲೈಫ್ ಬಾಯ್ ಸೋಪ್ 

27-01-23 11:10 pm       HK News Desk   ದೇಶ - ವಿದೇಶ

ಸದ್ಯ ದೇಶದಲ್ಲಿ ಇ-ಕಾಮರ್ಸ್ ಕಂಪನಿಗಳ ಅಬ್ಬರ ಹೆಚ್ಚಾಗಿದ್ದು, ಈ ಇ-ಕಾಮರ್ಸ್ ಕಂಪನಿಗಳ ಮೂಲಕ ಖರೀದಿ ಮಾಡುವ ಗ್ರಾಹಕರ ಸಂಖ್ಯೆ ದಿನೇ ದಿನೇ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಮಹಾರಾಷ್ಟ್ರ, ಜ.27: ಸದ್ಯ ದೇಶದಲ್ಲಿ ಇ-ಕಾಮರ್ಸ್ ಕಂಪನಿಗಳ ಅಬ್ಬರ ಹೆಚ್ಚಾಗಿದ್ದು, ಈ ಇ-ಕಾಮರ್ಸ್ ಕಂಪನಿಗಳ ಮೂಲಕ ಖರೀದಿ ಮಾಡುವ ಗ್ರಾಹಕರ ಸಂಖ್ಯೆ ದಿನೇ ದಿನೇ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇ-ಕಾಮರ್ಸ್ ಕಂಪನಿಗಳು ಹಬ್ಬಗಳು ಸೇರಿದಂತೆ ಇನ್ನಿತರ ವಿಶೇಷ ದಿನಗಳಲ್ಲಿ ವಿವಿಧ ರೀತಿಯ ಆಕರ್ಷಕ ಕೊಡುಗೆಗಳನ್ನು ನೀಡುತ್ತಿರುತ್ತವೆ. ಆದರೆ ನೀವು ಇ-ಕಾಮರ್ಸ್ ಕಂಪನಿಯ ಪೋರ್ಟಲ್ ಅಥವಾ ಆಯಪ್‌ನಲ್ಲಿ ಆರ್ಡರ್ ಮಾಡಿದ ಅದೇ ವಸ್ತುವನ್ನು ಪಡೆಯುತ್ತೀರಿ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಸದ್ಯ ಈ ರೀತಿಯ ಘಟನೆಯೊಂದು ಅಮರಾವತಿ ಜಿಲ್ಲೆಯ ಚಂದೂರ್ ರೈಲ್ವೆ ಟೌನ್​ನಲ್ಲಿ ನಡೆದಿದೆ. 

ಇಲ್ಲಿನ ಗ್ರಾಹಕರೊಬ್ಬರು ದೇಶದ ಪ್ರಮುಖ ಇ-ಕಾಮರ್ಸ್ ಕಂಪನಿಯಿಂದ ಮೊಬೈಲ್‌ ಫೋನ್​ನ್ನು ಆರ್ಡರ್ ಮಾಡಿ, ಲಕ್ಸ್ ಮತ್ತು ಲೈಫ್ ಬಾಯ್ ಸೋಪ್ ಪಡೆದಿದ್ದಾರೆ. ಅಮರಾವತಿ ಜಿಲ್ಲೆಯ ಚಂದೂರ್ ರೈಲ್ವೇ ಪಟ್ಟಣದ ನೀಲೇಶ್ ಚಂದರನ ಅವರು OnePlus ಕಂಪನಿಯ 2T 5G, 28 ಸಾವಿರ ರೂ ಮೌಲ್ಯದ ಮೊಬೈಲ್ ಫೋನ್ ಅನ್ನು ಆನ್‌ಲೈನ್ ಶಾಪಿಂಗ್ ಆಯಪ್​ ಮೂಲಕ ಜ.17 ರಂದು ಆರ್ಡರ್​ ಮಾಡಿದ್ದರು.

ONEPLUS 9R Dummy Phone

ಒರಿಜಿನಲ್ ಒನ್ ಪ್ಲಸ್ ಬದಲು ಡಮ್ಮಿ ರೆಡ್ಮಿ 9 ಫೋನ್ :

ಜ.24ರಂದು ಮೊಬೈಲ್ ಫೋನ್ ಪಾರ್ಸೆಲ್ ಸ್ವೀಕರಿಸಿ ಅದನ್ನು ಡೆಲಿವರಿ ಬಾಯ್ ಮುಂದೆಯೇ ಪ್ಯಾಕಿಂಗ್ ತೆರೆದಾಗ ಒರಿಜಿನಲ್ ಒನ್ ಪ್ಲಸ್ ಕಂಪನಿಯ ಮೊಬೈಲ್ ಫೋನ್ ಬದಲಾಗಿ ರೆಡ್ಮಿ 9 ಎಂಬ ಡಮ್ಮಿ ಫೋನ್ ಜೊತೆಗೆ ಲಕ್ಸ್ ಮತ್ತು ಲೈಫ್ ಬಾಯ್ ಸೋಪ್ ಪತ್ತೆಯಾಗಿತ್ತು. ಇದನ್ನು ನೋಡಿ ಶಾಕ್​ ಆದ ನೀಲೇಶ ಚಂದರನ. ಬಳಿಕ ಡೆಲಿವರಿ ಬಾಯ್ ಮೂಲಕ ಸಂಬಂಧಪಟ್ಟ ಕಂಪನಿಗೆ ದೂರು ನೀಡಿದ್ದಾರೆ, ಕಂಪನಿಯವರು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೇ ಮರಳಿ ಹೊಸ ಮೊಬೈಲ್ ಫೋನ್​ ಅನ್ನು ನೀಡಬೇಕು ಎಂದು ಗ್ರಾಹಕ ನೀಲೇಶ್ ಚಂದರನ ಕಂಪನಿಗೆ ಮನವಿ ಮಾಡಿದ್ದಾರೆ.

How to safeguard oneself against online financial frauds | Mint

ಹೀಗಾಗಿ ಆನ್‌ಲೈನ್ ಶಾಪಿಂಗ್‌ನಲ್ಲಿ ನಡೆಯುತ್ತಿರುವ ವಂಚನೆಯನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರು ಆನ್‌ಲೈನ್ ಬದಲಿಗೆ ಅಂಗಡಿಗಳಿಂದ ಸರಕುಗಳನ್ನು ಖರೀದಿಸುವಂತೆ ನೀಲೇಶ್ ಚಂದರನ ಮನವಿ ಮಾಡಿದ್ದಾರೆ.

ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಜಾಗರೂಕರಾಗಿರಿ:

ಮೊದಲಿಗೆ, ನೀವು ನಿಮ್ಮ ಮೆಚ್ಚಿನ ವಸ್ತುವನ್ನು ಖರೀದಿಸಲಿರುವ ವೆಬ್‌ಸೈಟ್‌ನಲ್ಲಿ ವೆಬ್‌ಸೈಟ್‌ನ ಅತ್ಯಂತ ಕೆಳಭಾಗದಲ್ಲಿ 'ವೆರಿ ಸೈನ್ ಟ್ರಸ್ಟೆಡ್' ಪ್ರಮಾಣಪತ್ರವಿದೆಯೇ ಎಂದು ಪರಿಶೀಲಿಸಿ. ಪ್ರಸ್ತುತ, ವಿವಿಧ ವೆಬ್‌ಸೈಟ್‌ಗಳು ಆನ್‌ಲೈನ್ ಮಾರಾಟ ಕ್ಷೇತ್ರವನ್ನು ಪ್ರವೇಶಿಸಿವೆ. ಈ ವೆಬ್‌ಸೈಟ್‌ಗಳನ್ನು ಇ-ಕಾಮರ್ಸ್ ನಿಯಮಗಳ ಅಡಿಯಲ್ಲಿ ಪ್ರಾರಂಭಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ಪರಿಶೀಲಿಸುವುದು ಅವಶ್ಯಕ. ಅನೇಕ ಪ್ರತಿಷ್ಠಿತ ಕಂಪನಿಗಳು ಆನ್‌ಲೈನ್ ಮಾರಾಟಕ್ಕಾಗಿ ತಮ್ಮದೇ ಆದ ವೆಬ್‌ಸೈಟ್‌ಗಳನ್ನು ಹೊಂದಿವೆ, ಅವುಗಳು ಅಧಿಕೃತವೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಮರೆಯದಿರಿ. ಈ ಮಾಹಿತಿಯನ್ನು ಸಂಬಂಧಪಟ್ಟ ಕಂಪನಿಯ ಕಾಲ್ ಸೆಂಟರ್‌ಗೆ ಕರೆ ಮಾಡುವ ಮೂಲಕ ಪಡೆಯಬಹುದು.

Man gets soap after ordering mobile phone online.