ಮಧ್ಯಪ್ರದೇಶದಲ್ಲಿ ಎರಡು  ಭಾರತೀಯ ವಾಯು ಸೇನೆ ವಿಮಾನಗಳ ನಡುವೆ ಡಿಕ್ಕಿ ; ಇಬ್ಬರು ಪೈಲಟ್‌ಗಳಿಗೆ ಗಾಯ

28-01-23 02:13 pm       HK News Desk   ದೇಶ - ವಿದೇಶ

ಭಾರತೀಯ ವಾಯುಪಡೆಗೆ ಸೇರಿದ ಎರಡು ಯುದ್ಧ ವಿಮಾನಗಳು ಆಗಸದಲ್ಲಿ ಡಿಕ್ಕಿಯಾದ ಬಳಿಕ ಪತನಗೊಂಡಿರುವ ದುರಂತ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶ, ಜ.28: ಭಾರತೀಯ ವಾಯುಪಡೆಗೆ ಸೇರಿದ ಎರಡು ಯುದ್ಧ ವಿಮಾನಗಳು ಆಗಸದಲ್ಲಿ ಡಿಕ್ಕಿಯಾದ ಬಳಿಕ ಪತನಗೊಂಡಿರುವ ದುರಂತ ಮಧ್ಯಪ್ರದೇಶದಲ್ಲಿ ನಡೆದಿದೆ.

ಮೊರೆನಾ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ. ಅಪಘಾತದಲ್ಲಿ ಇಬ್ಬರು ಪೈಲಟ್‌ಗಳು ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದೆ.

ಏನಿದು ದುರಂತ?

ಗ್ವಾಲಿಯರ್ ವಾಯುನೆಲೆಯು ವಾಯುಪಡೆಗೆ ಸೇರಿದ ವಿಮಾನಗಳು ಸಾಮಾನ್ಯ ತರಬೇತಿ ನಡೆಸುತ್ತವೆ. ಈ ಕ್ರಮದಲ್ಲಿ ಎರಡು ಯುದ್ಧವಿಮಾನಗಳಾಗ ಸುಖೋಯ್-30 ಮತ್ತು ಮಿರಾಜ್ 2000 ಗ್ವಾಲಿಯರ್ ವಾಯುನೆಲೆಯಿಂದ ಟೇಕಾಫ್ ಆಗಿವೆ.

IAF's Sukhoi-30, Mirage-2000 crash near MP's Gwalior; one pilot dead |  Latest News India - Hindustan Times

ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಮೊರೆನಾ ಪ್ರದೇಶದಲ್ಲಿ ಪತನಗೊಂಡಿವೆ. ಸರಿಯಾದ ಸಮಯಕ್ಕೆ ಪೈಲಟ್‌ಗಳು ವಿಮಾನಗಳಿಂದ ಜಿಗಿದಿದ್ದಾರೆ. ಪರಿಣಾಮವಾಗಿ ಇಬ್ಬರು ಪೈಲಟ್ ಗಳು ಗಾಯಗೊಂಡಿದ್ದಾರೆ. ಇದುವರೆಗೆ ಇಬ್ಬರು ಪೈಲಟ್‌ಗಳನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

Fighter Plane Crash: Sukhoi, Mirage Fighter Jets Crash Near Gwalior, 1  Pilot Dead

2 IAF fighter jets crash in Madhya Pradesh's Morena, 1 pilot dead - India  Today

ಗಾಯಾಳು ಪೈಲಟ್ ಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮೂರನೇ ಪೈಲಟ್ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಆತಂಕ ಮೂಡಿಸಿದೆ. ಇಂದು ಬೆಳಗ್ಗೆ 5:30ಕ್ಕೆ ಅಪಘಾತ ಸಂಭವಿಸಿದೆ ಎಂದು ಮೊರೆನಾ ಜಿಲ್ಲಾಧಿಕಾರಿ ಬಹಿರಂಗಪಡಿಸಿದ್ದಾರೆ. ವಿಮಾನಗಳು ಪತನವಾದ ಕೆಲವೇ ಸೆಕೆಂಡುಗಳಲ್ಲಿ ಬೆಂಕಿ ವ್ಯಾಪಿಸಿ ಸುಟ್ಟು ಕರಕಲಾಗಿವೆ. ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Two Indian Air Force fighter jets - a Sukhoi Su-30 and a Mirage 2000 - crashed during a training exercise earlier today, officials said on Saturday, resulting in the death of one pilot. While one aircraft crashed in Morena in Madhya Pradesh, the other is believed to have gone down 100 km away in Rajasthan's Bharatpur.