ಬ್ರೇಕಿಂಗ್ ನ್ಯೂಸ್
28-01-23 04:56 pm HK News Desk ದೇಶ - ವಿದೇಶ
ಮುಂಬೈ, ಜ.28: ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್‌ನ ವರದಿಯ ಬಳಿಕ ಅದಾನಿ ಸಮೂಹಕ್ಕೆ ಸೇರಿದ ಕಂಪನಿಗಳ ಷೇರುಗಳು ಒಂದೇ ಸಮನೆ ಕುಸಿತ ಕಾಣುತ್ತಿದ್ದು, ಈ ಕಂಪನಿಗಳಲ್ಲಿ ಹೂಡಿಕೆ ಮಾಡಿದವರೂ ಇದೀಗ ಭಾರೀ ನಷ್ಟ ಅನುಭವಿಸುತ್ತಿದ್ದಾರೆ.
ದೇಶದ ಅತಿದೊಡ್ಡ ಸಾಂಸ್ಥಿಕ ಹೂಡಿಕೆದಾರ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಈ ರೀತಿ ನಷ್ಟ ಅನುಭವಿಸಿದ ಹೂಡಿಕೆದಾರರಲ್ಲಿ ಸೇರಿದೆ. ಅದಾನಿ ಸಮೂಹದ ಷೇರುಗಳಲ್ಲಿ ಎಲ್‌ಐಸಿಯ ಸಂಯೋಜಿತ ಹೂಡಿಕೆಯು ಜನವರಿ 24, 2023ರಂದು 81,268 ಕೋಟಿ ರೂ. ಇತ್ತು. ಅದೀಗ ಜನವರಿ 27, 2023ರಂದು 62,621 ಕೋಟಿ ರೂ.ಗೆ ಕುಸಿದಿದ್ದು 18,647 ಕೋಟಿ ರೂ. ನಷ್ಟವನ್ನು ಅನುಭವಿಸಿದೆ.
'ಏಸ್ ಇಕ್ವಿಟಿ'ಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಷನ್ ಮತ್ತು ಇತ್ತೀಚೆಗೆ ಸ್ವಾಧೀನಪಡಿಸಿಕೊಂಡಿರುವ ಪ್ರಮುಖ ಸಿಮೆಂಟ್ ಕಂಪನಿಗಳಾದ ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿ ಲಿ.ನಲ್ಲಿ ಡಿಸೆಂಬರ್ 31, 2022ರಂತೆ ಎಲ್‌ಐಸಿ ಶೇ. 1ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದೆ. ಕೆಲವು ಕಂಪನಿಗಳಲ್ಲಂತೂ ಶೇ. 9ರಷ್ಟು ಷೇರನ್ನು ಎಲ್‌ಐಸಿ ಖರೀದಿಸಿಎ. ಈ ಕಂಪನಿಗಳ ಷೇರುಗಳು ಕಳೆದ ಎರಡು ವಹಿವಾಟು ಅವಧಿಗಳಲ್ಲಿ ಶೇ. 19-27ರಷ್ಟು ಕುಸಿತ ಕಂಡಿವೆ.
ದೈತ್ಯ ಅದಾನಿ ಉದ್ಯಮ ಸಮೂಹವು ಷೇರು ತಿರುಚುವಿಕೆ ಹಾಗೂ ಲೆಕ್ಕಪತ್ರ ವಂಚನೆಯಲ್ಲಿ ತೊಡಗಿದೆ ಎಂದು ಹಿಂಡನ್‌ಬರ್ಗ್ ರಿಸರ್ಚ್ ವರದಿಯು ಆರೋಪಿಸಿತ್ತು. ಈ ಆರೋಪವನ್ನು ನಿರಾಕರಿಸಿರುವ ಅದಾನಿ ಸಮೂಹದ ಸಿಎಫ್‌ಒ ಜುಗೇಶಿಂದರ್ ಸಿಂಗ್, “ವರದಿಯು ಆಯ್ದ ತಪ್ಪು ಮಾಹಿತಿ ಮತ್ತು ಹಳೆಯ, ಆಧಾರರಹಿತ ಹಾಗೂ ದುರುದ್ದೇಶದಿಂದ ಕೂಡಿದ್ದು ಇದನ್ನು ಭಾರತದ ಅತ್ಯುನ್ನತ ನ್ಯಾಯಾಲಯಗಳು ಈಗಾಗಲೇ ಪರಿಶೀಲಿಸಿ ತಿರಸ್ಕರಿಸಿವೆ ಎಂದು ವಾದಿಸಿದ್ದರು. ಹೀಗಿದ್ದೂ ಷೇರು ಕುಸಿತ ಮಾತ್ರ ತೀವ್ರವಾಗಿ ಮುಂದುವರಿದಿದೆ.
ಕಂಪನಿವಾರು ನೋಡುವುದಾದರೆ ಅದಾನಿ ಟೋಟಲ್ ಗ್ಯಾಸ್‌ನಲ್ಲಿನ ಎಲ್‌ಐಸಿಯ ಒಟ್ಟು ಹೂಡಿಕೆಯು ಜನವರಿ 24 ರಿಂದ 6,237 ಕೋಟಿ ರೂ.ನಷ್ಟು ಕಡಿಮೆಯಾಗಿದೆ. ಇದೇ ವೇಳೆ ಅದಾನಿ ಎಂಟರ್‌ಪ್ರೈಸಸ್ (3,279 ಕೋಟಿ ರೂ. ಇಳಿಕೆ), ಅದಾನಿ ಪೋರ್ಟ್ಸ್ (3,205 ಕೋಟಿ ರೂ. ಇಳಿಕೆ), ಅದಾನಿ ಟ್ರಾನ್ಸ್‌ಮಿಷನ್ (3,036 ಕೋಟಿ ರೂ. ಇಳಿಕೆ), ಅಂಬುಜಾ ಸಿಮೆಂಟ್ಸ್ (1,474 ಕೋಟಿ ರೂ. ಇಳಿಕೆ), ಅದಾನಿ ಗ್ರೀನ್ ಎನರ್ಜಿ (871 ಕೋಟಿ ರೂ. ಇಳಿಕೆ) ಮತ್ತು ಎಸಿಸಿ ಲಿ. (544 ಕೋಟಿ ರೂ. ಇಳಿಕೆ)ಗಳಲ್ಲಿನ ಎಲ್‌ಐಸಿ ಹೂಡಿಕೆಯೂ ಕುಸಿತ ಕಂಡಿವೆ.
Shares of India's largest life insurer and many banks plunged on Friday amid concerns about their exposure to the Adani Group that was recently accused by a US short-seller of stock manipulation and accounting fraud. LIC, which held shares worth Rs 81,262 crore in the ports-to-power conglomerate's companies before the markets opened on January 25, witnessed a loss of Rs .18,645 crore in those holdings in the last two market sessions.
18-07-25 10:59 pm
Bangalore Correspondent
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
Dharmasthala Case, SIT, CM Siddaramaiah: ಧರ್ಮ...
18-07-25 04:48 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
18-07-25 10:11 pm
Mangalore Correspondent
Mangalore, Floodwater, Kumpala death: ಎಡೆಬಿಡದ...
18-07-25 03:19 pm
Mangalore Rain, Thokottu: ಧಾರಕಾರ ಮಳೆ ; ತೊಕ್ಕೊ...
18-07-25 02:36 pm
"Celebrating Excellence: 37 Achievers Felicit...
17-07-25 06:30 pm
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
18-07-25 12:40 pm
Mangalore Correspondent
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am
Crore Fraud, Roshan Saldanha Arrest, Mangalor...
17-07-25 10:42 pm
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm